ಆ್ಯಪ್ನಗರ

ವಿದ್ಯಾರ್ಥಿಗೆ ಪ್ರಥಮ ಚಿಕಿತ್ಸೆ ಮಾಹಿತಿ ಅವಶ್ಯ

ಕುಮಟಾ : ವಿದ್ಯಾರ್ಥಿಗಳು ಕಡ್ಡಾಯವಾಗಿ ಪ್ರಥಮ ಚಿಕಿತ್ಸೆ ಮಾಹಿತಿಯನ್ನು ಹೊಂದಿರಬೇಕು ಎಂದ ಪ್ರೊ.ಜಿ.ಡಿ.ಭಟ್ಟ ಹೇಳಿದರು.

Vijaya Karnataka 21 Jul 2019, 5:00 am
ಕುಮಟಾ : ವಿದ್ಯಾರ್ಥಿಗಳು ಕಡ್ಡಾಯವಾಗಿ ಪ್ರಥಮ ಚಿಕಿತ್ಸೆ ಮಾಹಿತಿಯನ್ನು ಹೊಂದಿರಬೇಕು ಎಂದ ಪ್ರೊ.ಜಿ.ಡಿ.ಭಟ್ಟ ಹೇಳಿದರು.
Vijaya Karnataka Web student needs first aid information
ವಿದ್ಯಾರ್ಥಿಗೆ ಪ್ರಥಮ ಚಿಕಿತ್ಸೆ ಮಾಹಿತಿ ಅವಶ್ಯ


ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಲೇಡಿಸ್‌ ಸೆಲ್‌ ಹಾಗೂ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಘಟಕದ ವತಿಯಿಂದ ನಡೆದ ಕಾನೂನು ಜಾಗೃತಿ ಹಾಗೂ ಪ್ರಥಮ ಚಿಕಿತ್ಸೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಥಮ ಚಿಕಿತ್ಸೆ ತುರ್ತು ಸಂದರ್ಭಗಳಲ್ಲಿ ಸಹಾಯವಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಇದನ್ನು ಕಲಿತಿರಬೇಕು. ಅಲ್ಲದೇ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಆಸಕ್ತಿ ಹೊಂದಿದರೆ ಸುಭದ್ರ ಸಮಾಜ ಕಟ್ಟಲು ಸಹಾಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ಪ್ರೊ.ಸಂತೋಷ ಶಾನಭಾಗ ಇವರು ಕಾನೂನು ಜಾಗೃತಿ ಉಪನ್ಯಾಸ ನೀಡಿ, ಮೂಲಭೂತ ಹಕ್ಕುಗಳನ್ನು ಪ್ರತಿಯೊಬ್ಬ ನಾಗರಿಕರು ಅರಿತಿರಬೇಕು. ಕಾನೂನು ತಿಳಿವಳಿಕೆಯಿಂದ ಸಮಾಜದಲ್ಲಿ ತಪ್ಪು ಗ್ರಹಿಕೆಯನ್ನು ಹೋಗಲಾಡಿಸಲು ಅನುಕೂಲವಾಗುತ್ತದೆ. ಸಾಮಾನ್ಯರು ಕಾನೂನು ತಿಳಿವಳಿಕೆ ಪಡೆಯುವುದರಿಂದ ಅಪರಾಧಗಳು ಕಡಿಮೆಯಾಗುತ್ತವೆ. ಅಧ್ಯಕ್ಷ ತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್‌.ವಿ.ಶೇಣ್ವಿ ವಹಿಸಿದ್ದರು. ವೇದಿಕೆಯಲ್ಲಿ ಡಾ.ಅರವಿಂದ ನಾಯಕ, ಸ್ಕೌಟ್‌ ರೋವರ್‌ ಲೀಡರ್‌ ಪ್ರೊ.ಶಿವಾನಂದ ಬುಳ್ಳಾ, ಲೇಡಿಸ್‌ ಸೆಲ್‌ ಚೇರಮನ್‌ ಪ್ರೊ.ವೆಲನ್ಸಿಯಾ ಉಪಸ್ಥಿತರಿದ್ದರು.

ಯೋಗಿನಿ ಭಂಡಾರಕರ್‌ ಸ್ವಾಗತಿಸಿದರು. ಸಂಗೀತಾ ಬಸ್ರೂರ್‌ ನಿರೂಪಿಸಿದರು. ಉರ್ಜಾ ಶೇಟ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ