ಆ್ಯಪ್ನಗರ

ಸಾಂಪ್ರದಾಯಿಕ ಉಡುಗೆಯಲ್ಲಿ ವಿದ್ಯಾರ್ಥಿಗಳು

ಯಲ್ಲಾಪುರ: ಪಟ್ಟಣದ ವೈಟಿಎಸ್‌ಎಸ್‌ ಶಿಕ್ಷಣ ಸಂಸ್ಥೆಯ ಪಿಯು ವಿದ್ಯಾರ್ಥಿಗಳು ಬುಧವಾರದಂದು ಕಾಲೇಜಿನಲ್ಲಿ ಟ್ರೆಡಿಷನಲ್‌ ಡೆ ಆಚರಿಸಿದರು.

Vijaya Karnataka 2 Jan 2020, 5:00 am
ಯಲ್ಲಾಪುರ: ಪಟ್ಟಣದ ವೈಟಿಎಸ್‌ಎಸ್‌ ಶಿಕ್ಷಣ ಸಂಸ್ಥೆಯ ಪಿಯು ವಿದ್ಯಾರ್ಥಿಗಳು ಬುಧವಾರದಂದು ಕಾಲೇಜಿನಲ್ಲಿ ಟ್ರೆಡಿಷನಲ್‌ ಡೆ ಆಚರಿಸಿದರು.
Vijaya Karnataka Web students in traditional attire
ಸಾಂಪ್ರದಾಯಿಕ ಉಡುಗೆಯಲ್ಲಿ ವಿದ್ಯಾರ್ಥಿಗಳು


ಈ ಪ್ರಯುಕ್ತ ಶಿಕ್ಷಣ ಸಂಸ್ಥೆಯ ಪಿಯು ವಿಭಾಗದ ವಿದ್ಯಾರ್ಥಿಗಳ ಉತ್ಸಾಹ ಹೊಸ ವರ್ಷದ ಪ್ರಾರಂಭ ದಿನದಂದು ಮುಗಿಲು ಮುಟ್ಟಿತ್ತು. ಸಾಂಪ್ರದಾಯಿಕ ಉಡುಗೆಯೊಂದಿಗೆ ವಿದ್ಯಾರ್ಥಿನಿಯರು ಹೊಸ ಹೊಸ ಬಣ್ಣದ ಸೀರೆಯಲ್ಲಿಮಿಂಚಿದರೇ, ವಿದ್ಯಾರ್ಥಿಗಳು ಜುಬ್ಬಾ ಧರಿಸಿ ಪಂಚೆ ಶಲ್ಯದಲ್ಲಿಮಿಂಚಿದರು. ಪ್ರತಿದಿನ ಸಮವಸ್ತ್ರ ಧರಿಸಿ ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ, ಹೊಸವರ್ಷ ಹೊಸತನವನ್ನು ತಂದುಕೊಟ್ಟಿತು. ವಿದ್ಯಾರ್ಥಿಗಳೊಂದಿಗೆ ಪ್ರಾಂಶುಪಾಲರು ಉಪನ್ಯಾಸಕರು ಹಾಗೂ ಕಾಲೇಜಿನ ಸಿಬ್ಬಂದಿ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಅಲ್ಲದೆ ವಿದ್ಯಾರ್ಥಿಗಳಿಗಾಗಿ ಜಾನಪದ ಹಾಗೂ ಭಾವಗೀತೆ, ಆಶುಭಾಷಣ, ಏಕಪಾತ್ರಾಭಿನಯ, ಚಿತ್ರಕಲೆ, ಮೆಹಂದಿ ಹಾಗೂ ಫುಡ್‌ ಫೆಸ್ಟಿವಲ್‌ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಜಯರಾಮ ಗುನಗ, ಕಾಲ ಬದಲಾದಂತೆ ನಮ್ಮ ಉಡುಗೆ-ತೊಡುಗೆಗಳು ಬದಲಾಗಿವೆ. ಕಳೆದ ಹತ್ತು ವರ್ಷದಿಂದ ನಮ್ಮ ಕಾಲೇಜಿನಲ್ಲಿಭಾರತೀಯ ಸಾಂಪ್ರದಾಯಿಕ ದಿನವನ್ನು ಆಚರಿಸಲಾಗುತ್ತಿದೆ. ವರ್ಷಕ್ಕೆ ಒಂದು ದಿನ ನಮ್ಮ ಭಾರತೀಯ ಸಂಪ್ರದಾಯಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕಾರ್ಯವನ್ನು ಕಾಲೇಜಿನಲ್ಲಿಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಕಾರ್ಯಕ್ರಮದಲ್ಲಿಪಾಲ್ಗೊಳ್ಳುತ್ತಿದ್ದಾರೆ ಎಂದರು.

ಶಿಕ್ಷಕ ಎನ್‌.ಎಸ್‌.ಭಟ್‌ ಮಾತನಾಡಿ, ನಮಗೆ ಇನ್ನೊಬ್ಬರು ಗೌರವಿಸಬೇಕೆಂದರೆ ನಾವು ತೊಡುವ ಉಡುಗೆ ತೊಡುಗೆಗಳು ಗೌರವಯುತವಾಗಿ ಇರಬೇಕು ಎಂದರು.

ಉಪನ್ಯಾಸಕರಾದ ವಾಣಿಶ್ರೀ ಹೆಗಡೆ, ಅಶ್ವಿನಿ.ಕೆ, ಆನಂದ ಹೆಗಡೆ, ಶೈನಾಜ ಶೇಖ, ರೇಷ್ಮಾ ಶೇಖ, ಪವೀರ್‍ನಬಾನು ಸುಂಕದ, ಮೇಘಾ ಕಾಮತ, ಸೀಮಾ ಗೌಡ, ಮಧುಸೂದನ ಗಾಂವ್ಕರ, ಸಚಿನ ನಾಯ್ಕ, ಕೀರ್ತಿ ರೇವಣಕರ ಹಾಗೂ ಗ್ರಂಥಪಾಲಕಿ ಜ್ಯೋತಿ ನಾಯಕ ಮುಂತಾದವರು ಇದ್ದರು. ಉಪನ್ಯಾಸಕ ಮನೋಹರ ಶಾನಭಾಗ ಸ್ವಾಗತಿಸಿ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ