ಆ್ಯಪ್ನಗರ

ಒಲ್ಲದ ಮನಸ್ಸಿನಿಂದ ಬಂದ ವಿದ್ಯಾರ್ಥಿಗಳು,

ಕಾರವಾರ : ನಗರದ ಎಲ್ಲ ಶಾಲೆಗಳು ಭಾನುವಾರ ತೆರದಿದ್ದರಿಂದ ಶಾಲಾ ಮಕ್ಕಳಿಗೆ ಹೊಸ ಅನುಭವ ನೀಡಿದ್ದು, ಭಾನುವಾರದ ರಜೆಯ ಗುಂಗಿನಿಂದ ಹೊರ ಬರದ ವಿದ್ಯಾರ್ಥಿಗಳು ಒಲ್ಲದ ಮನಸ್ಸಿನಿಂದ ಶಾಲೆಯತ್ತ ಹೆಜ್ಜೆ ಹಾಕಿದ ದೃಶ್ಯ ಸಾಮಾನ್ಯವಾಗಿ ಎಲ್ಲೆಡೆ ಕಂಡು ಬಂತು.

Vijaya Karnataka 14 Jan 2019, 5:00 am
ಕಾರವಾರ : ನಗರದ ಎಲ್ಲ ಶಾಲೆಗಳು ಭಾನುವಾರ ತೆರದಿದ್ದರಿಂದ ಶಾಲಾ ಮಕ್ಕಳಿಗೆ ಹೊಸ ಅನುಭವ ನೀಡಿದ್ದು, ಭಾನುವಾರದ ರಜೆಯ ಗುಂಗಿನಿಂದ ಹೊರ ಬರದ ವಿದ್ಯಾರ್ಥಿಗಳು ಒಲ್ಲದ ಮನಸ್ಸಿನಿಂದ ಶಾಲೆಯತ್ತ ಹೆಜ್ಜೆ ಹಾಕಿದ ದೃಶ್ಯ ಸಾಮಾನ್ಯವಾಗಿ ಎಲ್ಲೆಡೆ ಕಂಡು ಬಂತು.
Vijaya Karnataka Web students who are unwilling
ಒಲ್ಲದ ಮನಸ್ಸಿನಿಂದ ಬಂದ ವಿದ್ಯಾರ್ಥಿಗಳು,


ಕೇಂದ್ರ ಸರಕಾರದ ನೀತಿಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು ಮಂಗಳವಾರ ಕರೆ ನೀಡಿದ ಭಾರತ್‌ ಬಂದ್‌ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಅವರ ಘೋಷಣೆ ಮೇರೆಗೆ ನಗರದ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಮಂಗಳವಾರದ ಬದಲಿಗೆ ಭಾನುವಾರವೂ ಶಾಲೆ ತೆರೆದು ಪಾಠ ಮಾಡಬೇಕು ಎಂದು ಜಿಲ್ಲಾಧಿಕಾರಿ ತಮ್ಮ ಆದೇಶದಲ್ಲಿ ತಿಳಿಸಿದ್ದರು. ಹೀಗಾಗಿ ಬಂದ್‌ ನಿಮಿತ್ತ ಮಂಗಳವಾರ ನಗರದ ಎಲ್ಲ ಶಾಲಾ, ಕಾಲೇಜುಗಳನ್ನು ಮುಚ್ಚಲಾಗಿತ್ತು. ಜಿಲ್ಲಾಧಿಕಾರಿ ಆದೇಶದಂತೆ, ಸಾರ್ವಜನಿಕ ಶಿಕ್ಷ ಣ ಇಲಾಖೆ ವತಿಯಿಂದ ಮಂಗಳವಾರದ ರಜೆ ಸರಿದೂಗಿಸಲು ಭಾನುವಾರ ಕೂಡ ಶಾಲೆ ತೆರೆಯಲು ಸರಕಾರಿ ಮತ್ತು ಅನುದಾನಿತ ಹಾಗೂ ಖಾಸಗಿ ಶಾಲಾ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶವನ್ನು ಶಾಲಾಡಳಿತ ಮಂಡಳಿಗಳು ಕಟ್ಟು ನಿಟ್ಟಾಗಿ ಪಾಲಿಸಿದಂತಾಗಿದೆ.

ಭಾರತ್‌ ಬಂದ್‌ನಿಂದ ಮಕ್ಕಳಿಗೆ ಶಿಕ್ಷೆ : ಶಾಲಾ ಮಕ್ಕಳು ಮೊದಲೇ ಪಠ್ಯ-ಪುಸ್ತಕದ ಹೊರೆಯಿಂದ ಕಷ್ಟ ಪಡುತ್ತಿದ್ದಾರೆ. ಈ ನಡುವೆ ಪರೀಕ್ಷೆ, ಟ್ಯೂಷನ್‌ ಎಂದು ಮಾನಸಿಕ ಒತ್ತಡದಲ್ಲೇ ಪ್ರತಿದಿನ ಶಾಲೆಗೆ ಹೋಗಬೇಕಾಗಿದೆ. ಇದರ ಮಧ್ಯೆ ಭಾರತ್‌ ಬಂದ್‌ ನೆವದಲ್ಲಿ ಇದ್ದ ವಾರಕ್ಕೊಮ್ಮೆ ಸಿಗುವ ಭಾನುವಾರದ ಒಂದು ರಜೆಗೂ ಸಂಚಕಾರ ತಂದಿದ್ದು ಯಾವ ನ್ಯಾಯ? ಭಾರತ್‌ ಬಂದ್‌ ಮಾಡಿದವರು ಏನು ಸಾಧನೆ ಮಾಡಿದರು ಎಂಬುದು ಬೇರೆ ಮಾತು. ಆದರೆ ಭಾನುವಾರದ ರಜೆಯನ್ನು ಸುಖವಾದ ನಿದ್ರೆ, ಮೋಜು,ಮಸ್ತಿಯಿಂದ ಕಳೆಯಬೇಕೆಂದು ಯೋಜನೆ ಹಾಕಿದ ಮಕ್ಕಳು ಶಿಕ್ಷೆ ಅನುಭವಿಸಿದಂತಾಗಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಇನ್ನು ಮುಂದೆ ಶಿಕ್ಷ ಣ ಕ್ಷೇತ್ರಕ್ಕೆ ರಿಯಾಯಿತಿ ಇರಲಿ : ಈಗಾಗಲೇ ಭಾರತದಾದ್ಯಂತ ಬಂದ್‌ ಆಚರಿಸದಂತೆ, ಸುಪ್ರೀಂ ಕೋರ್ಟ್‌ ಆದೇಶವಿದೆ. ಆದರೆ ರಾಜಕೀಯ ಪಕ್ಷ ಗಳು ಸೇರಿದಂತೆ, ವಿವಿಧ ಸಂಘಟನೆಗಳು ದೇಶದ ಸುಪ್ರೀಂ ಕೋರ್ಟ್‌ ಆದೇಶವನ್ನು ಪಾಲಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ಆರೋಗ್ಯ ಸೇವೆಯಂತೆ, ದೇಶ ಕಟ್ಟುವ ಕೆಲಸ ಶಿಕ್ಷ ಣ ಕ್ಷೇತ್ರದಿಂದ ಅವಿರತವಾಗಿ ನಡೆಯುತ್ತಿದೆ. ಇಂದಿನ ಮಕ್ಕಳು ನಾಳಿನ ಪ್ರಜೆಗಳಾಗಿ ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಮಾನಸಿಕತೆ ಮೇಲೆ ವ್ಯತಿರಿಕ್ತ ಪರಿಣಾಮಗಳಾಗದಂತೆ ನೋಡಿಕೊಳ್ಳುವುದು ಸರಕಾರದ ಜವಾಬ್ದಾರಿಯಾಗಿದೆ. ಆದ್ದರಿಂದ ಆಸ್ಪತ್ರೆ ಹಾಗೂ ಮೆಡಿಕಲ್‌ ಸ್ಟೋರ್‌ಗಳಿಗೆ ರಿಯಾಯಿತಿ ತೋರುವಂತೆ, ಶಿಕ್ಷ ಣ ಸಂಸ್ಥೆಗಳನ್ನು ಕೂಡ ಅವಶ್ಯಕ ಸೇವೆ ಎಂದು ಪರಿಗಣಿಸಬೇಕು. ಬಂದ್‌ ಸಂದರ್ಭದಲ್ಲಿ ಶಿಕ್ಷ ಣ ಸಂಸ್ಥೆಗಳಿಗೆ ಹಾಗೂ ಶಾಲಾ ವಾಹನಗಳಿಗೆ ವ್ಯಾಪಕ ಭದ್ರತೆ ನೀಡಬೇಕು. ಆ ಮೂಲಕ ರಜೆ ದಿನಗಳು ಹೊರತು ಪಡಿಸಿ, ಉಳಿದೆಲ್ಲ ದಿನ ಶಾಲೆ ತೆರೆದಿಡುವಂತಹವ್ಯವಸ್ಥೆಯಾಗಬೇಕು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಮಕ್ಕಳ ನಾಜೂಕು ಮನಸ್ಸು ಅರಿಯಲಿ : ಇಡೀ ಜಿಲ್ಲೆಯಲ್ಲಿಯೇ ಭಾನುವಾರ ಸಹ ಶಾಲೆ ನಡೆಸಿರುವುದು ಇದೇ ಪ್ರಥಮ ಅನಿಸುತ್ತಿದೆ. ಶಾಲಾ ಮಕ್ಕಳ ಹಿತದ ದೃಷ್ಟಿಯಿಂದ ಮಂಗಳವಾರದ ಬದಲಿಗೆ ಭಾನುವಾರ ಒಂದು ದಿನ ರಜೆ ತ್ಯಾಗ ಮಾಡಿರುವುದು ಒಳ್ಳೆಯದೇ. ಆದರೆ ಮಕ್ಕಳ ನಾಜೂಕು ಮನಸ್ಸಿನ ಮೇಲೆ ಆಗುವ ಪರಿಣಾಮದ ಬಗ್ಗೆಯೂ ಆಲೋಚನೆ ಮಾಡುವುದು ಅವಶ್ಯಕ. ಈ ಹಿನ್ನೆಲೆಯಲ್ಲಿ ಬಹಳಷ್ಟು ಪಾಲಕರು ಭಾನುವಾರ ಶಾಲೆ ತೆರೆದಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಕೆಲ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ