ಆ್ಯಪ್ನಗರ

ಕಡಲ್ಕೊರತ: ವಿದ್ಯುತ್‌ ಕಂಬಗಳು ಧರೆಗೆ

ಗೋಕರ್ಣ: ನಾಡುಮಾಸ್ಕೇರಿ ಗ್ರಾ.ಪಂ. ವ್ಯಾಪ್ತಿಗೆ ಬರುವ ಗಂಗೆಕೊಳ್ಳ ಗ್ರಾಮದಲ್ಲಿ ಸಮುದ್ರ ಕೊರೆತ ಉಂಟಾಗಿ ಕೆ.ಇ.ಬಿ. ಕರೆಂಟ್‌ ಕಂಬಗಳು ಧರೆಗುರುಳಿದ್ದು, ಇಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ತಡೆಗೋಡೆ ಕುಸಿದಿದೆ. ಇಲ್ಲಿ ಸಮೀಪದ ಮೀನುಗಾರರು ಹಾಗೂ ರೈತರ ಕೃಷಿ ಭೂಮಿಗಳಿದ್ದು, ಇನ್ನೂ ಸಮುದ್ರ ಕೊರೆತ ತೀವ್ರವಾದರೆ ಸ್ಥಳೀಯ ಜನರಿಗೆ ಅಪಾಯವಿದೆ.

Vijaya Karnataka 25 Jul 2019, 5:00 am
ಗೋಕರ್ಣ: ನಾಡುಮಾಸ್ಕೇರಿ ಗ್ರಾ.ಪಂ. ವ್ಯಾಪ್ತಿಗೆ ಬರುವ ಗಂಗೆಕೊಳ್ಳ ಗ್ರಾಮದಲ್ಲಿ ಸಮುದ್ರ ಕೊರೆತ ಉಂಟಾಗಿ ಕೆ.ಇ.ಬಿ. ಕರೆಂಟ್‌ ಕಂಬಗಳು ಧರೆಗುರುಳಿದ್ದು, ಇಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ತಡೆಗೋಡೆ ಕುಸಿದಿದೆ. ಇಲ್ಲಿ ಸಮೀಪದ ಮೀನುಗಾರರು ಹಾಗೂ ರೈತರ ಕೃಷಿ ಭೂಮಿಗಳಿದ್ದು, ಇನ್ನೂ ಸಮುದ್ರ ಕೊರೆತ ತೀವ್ರವಾದರೆ ಸ್ಥಳೀಯ ಜನರಿಗೆ ಅಪಾಯವಿದೆ.
Vijaya Karnataka Web KWR-24 GKN 4 A

ಸ್ಥಳೀಯ ನಾಡುಮಾಸ್ಕೇರಿ ಗ್ರಾ.ಪಂ. ಸದಸ್ಯರಾದ ನಾಗರಾಜ ತಾಂಡೇಲ ಇವರು ಈ ಹಿಂದೆಯೇ ಸಂಬಂಧಪಟ್ಟ ಸಮುದ್ರ ಕೊರೆತ ತಡೆಗೋಡೆ ವಿಭಾಗದ ಕುಮಟಾ ಅಧಿಕಾರಿಗಳಿಗೆ 1 ವರ್ಷದ ಹಿಂದೆ ಮನವಿ ಸಲ್ಲಿಸಿದ್ದಾರೆ. ಆದರೆ ಇಲ್ಲಿಯ ವರೆಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ.

ಇನ್ನಾದರೂ ಸಂಬಂಧ ಪಟ್ಟ ಇಲಾಖೆಯವರು ತಡೆಗೋಡೆ ನಿರ್ಮಿಸದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರೊಂದಿಗೆ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದರು. ಗ್ರಾಮಸ್ಥರಾದ ಸವಿನಯ ತಾಂಡೇಲ, ರಾಜೇಶ ತಾಂಡೇಲ್‌, ಕರವೇ ಜಿಲ್ಲಾ ಕಾರ್ಯದರ್ಶಿ ಸುಜಯ ಶೆಟ್ಟಿ, ಉಪಾಧ್ಯಕ್ಷ ಪ್ರಭಾಕರ ತಾಂಡೇಲ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ