ಆ್ಯಪ್ನಗರ

ಕೊಚ್ಚಿ ಹೋದ ಬಂಗಣೆ ಬಳಿಯ ತೂಗು ಸೇತುವೆ

ಕುಮಟಾ : ತಾಲೂಕಿನಾದ್ಯಂತ ತೆರೆದಿರುವ 19 ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಇಲ್ಲಿ ಆಶ್ರಯ ಪಡೆದಿರುವ ಜನರಿಗೆ ಮನೆಯ ಸ್ಥಿತಿಗತಿಗಳೇ ಕಾಡುತ್ತಿವೆ. ಮನೆಯಲ್ಲಿ ಬಿಟ್ಟು ಬಂದ ವಸ್ತು. ಒಡವೆಗಳನ್ನು ಕಳೆದುಕೊಳ್ಳುವ ಚಿಂತೆ ಕಾಡುತ್ತಿದೆ. ಹೀಗಾಗಿ ಏನೇ ಆಗಲಿ ಮನೆಗೆ ತೆರಳುತ್ತೇವೆ ಎಂದು ಹಟ ಮಾಡುತ್ತಿರುವ ಜನರಿಗೆ

Vijaya Karnataka 10 Aug 2019, 5:00 am
ಕುಮಟಾ : ತಾಲೂಕಿನಾದ್ಯಂತ ತೆರೆದಿರುವ 19 ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಇಲ್ಲಿ ಆಶ್ರಯ ಪಡೆದಿರುವ ಜನರಿಗೆ ಮನೆಯ ಸ್ಥಿತಿಗತಿಗಳೇ ಕಾಡುತ್ತಿವೆ. ಮನೆಯಲ್ಲಿ ಬಿಟ್ಟು ಬಂದ ವಸ್ತು. ಒಡವೆಗಳನ್ನು ಕಳೆದುಕೊಳ್ಳುವ ಚಿಂತೆ ಕಾಡುತ್ತಿದೆ. ಹೀಗಾಗಿ ಏನೇ ಆಗಲಿ ಮನೆಗೆ ತೆರಳುತ್ತೇವೆ ಎಂದು ಹಟ ಮಾಡುತ್ತಿರುವ ಜನರಿಗೆ ಸಮಾಧಾನ ಪಡಿಸುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ನೆರೆ ಪೀಡಿತರು ಎಷ್ಟೇ ದಿನ ಗಂಜಿ ಕೇಂದ್ರಗಳಲ್ಲಿ ತಂಗಿದ್ದರೂ, ಸಕಲ ವ್ಯವಸ್ಥೆಯನ್ನು ಮಾಡುವ ಸಂಕಲ್ಪವನ್ನು ಅಧಿಕಾರಿಗಳು ಮಾಡಿದ್ದಾರೆ. ಆದರೂ ಜನರನ್ನು ಓಲೈಸುವುದು ಅಧಿಕಾರಿಗಳಿಗೆ ಕಷ್ಟವಾಗುತ್ತಿದೆ ಎನ್ನಲಾಗಿದೆ.
Vijaya Karnataka Web suspension bridge near kochi bungalow
ಕೊಚ್ಚಿ ಹೋದ ಬಂಗಣೆ ಬಳಿಯ ತೂಗು ಸೇತುವೆ


ತಾಲೂಕಿನ ಬಂಗಣೆ, ಮೊರ್ಸೆ, ಕಲ್ವೆ ಗ್ರಾಮಗಳಿಗೆ ಮಳೆಗಾಲದಲ್ಲಿ ಏಕಮಾತ್ರ ಸಂಪರ್ಕ ಸೇತುವೆಯಾಗಿದ್ದ ತೂಗು ಸೇತುವೆ ಕೊಚ್ಚಿ ಹೋಗಿದ್ದು, ಈ ಗ್ರಾಮಗಳು ದ್ವೀಪ ಸದೃಶ್ಯವಾಗಿವೆ. ಹೊರ ಜಗತ್ತಿನ ಸಂಪರ್ಕ ಕಡಿದುಕೊಂಡಿರುವ ಈ ಗ್ರಾಮಗಳು ಮೂಲ ಸೌಕರ್ಯದ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಸುಮಾರು 250 ಕುಟುಂಬಗಳು ಜಲ ದಿಗ್ಬಂಧನಕ್ಕೆ ತುತ್ತಾಗಿದ್ದಾರೆ. ಗರ್ಭಿಣಿಯರು, ವೃದ್ಧರು, ಮಕ್ಕಳು, ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ನದಿ ದಾಟಿಸುವ ಪರಿಣತ ಈಜುಗಾರರು ಸಹಾಯಕ್ಕೆ ಬರಬೇಕೆಂದು ಆ ಭಾಗದ ಜನರು ಮನವಿ ಮಾಡಿಕೊಂಡಿದ್ದಾರೆ.

ನೆರೆಯ ತೀವ್ರತೆಗೆ ಕೃಷಿ ತೋಟಗಾರಿಕೆ ಬೆಳೆಗಳು ತೀವ್ರ ಹಾನಿಗೊಂಡಿದ್ದು, ರೈತರು ಭಾರಿ ನಷ್ಟವನ್ನು ಅನುಭವಿಸಿದ್ದಾರೆ. ಹೀಗಾಗಿ ನೆರೆ ಇಳಿಮುಖವಾದ ತಕ್ಷ ಣ ಬೆಳೆ ಹಾನಿ ಸಮೀಕ್ಷೆ ನಡೆಸಿ ರೈತರಿಗೆ ತುರ್ತು ಪರಿಹಾರ ನೀಡಬೇಕೆಂಬ ಕೂಗು ಕೇಳಿ ಬಂದಿದೆ. ಶಿರಸಿ ರಾಜ್ಯ ಹೆದ್ದಾರಿ ಸಂಚಾರಕ್ಕೆ ಮುಕ್ತಗೊಂಡಿದ್ದು, ಕತಗಾಲದಲ್ಲಿಯೂ ಅಡೆತಡೆಗಳು ದೂರವಾಗಿವೆ. ಜಿಲ್ಲಾಡಳಿತ ಸತತ ನಾಲ್ಕನೇ ದಿನವೂ ಶಾಲಾ -ಕಾಲೇಜುಗಳಿಗೆ ರಜೆ ಘೋಷಿಸಿದೆ. ಯಾವುದೇ ಹಾನಿಯನ್ನು ಸಂಭವಿಸದಂತೆ ಜಿಲ್ಲಾಧಿಕಾರಿ ಹರೀಶ ಕುಮಾರ ನಿರಂತರ ನೆರೆ ಪ್ರದೇಶಗಳಿಗೆ ಭೇಟಿ ನೀಡಿ ಸೂಕ್ತ ನಿರ್ದೇಶನ ನೀಡುತ್ತಿದ್ದಾರೆ.

ತುರ್ತು ಕಟ್ಟಿಗೆ ಸೇತುವೆ ನಿರ್ಮಾಣ
ಬಡಾಳದ ಮೂಡಗಿ ಹತ್ತಿರ ಗ್ರಾಮಗಳ ಜನರು ಸಂಪರ್ಕಿಸಲು ಸಾಧ್ಯವಾಗುವಂತೆ ತುರ್ತು ಕಟ್ಟಿಗೆ ಸೇತುವೆಯನ್ನು ನಿರ್ಮಿಸಿಕೊಂಡಿದ್ದಾರೆ. ತಹಸೀಲ್ದಾರ ಮೇಘರಾಜ ನಾಯ್ಕ, ಸಿಪಿಐ ಸಂತೋಷ ಶೆಟ್ಟಿ, ತಾಲೂಕಾ ವೈದ್ಯಾಧಿಕಾರಿ ಮೊದಲಾದ ಅಧಿಕಾರಿಗಳು ಸೇತುವೆ ನಿರ್ಮಾಣದ ಸ್ಥಳಕ್ಕೆ ತೆರಳಿ ಜನರಿಗೆ ಸೂಕ್ತ ನಿರ್ದೇಶನ ನೀಡಿದರು. ಅಲ್ಲದೇ ಪರಿಸ್ಥಿತಿಯನ್ನು ಎದುರಿಸಲು ಜನರಿಗೆ ಸಕಲ ಸೌಲಭ್ಯಗಳನ್ನು ದೊರಕಿಸಿ ಕೊಡುವುದಾಗಿ ತಹಸೀಲ್ದಾರ ಮೇಘರಾಜ ನಾಯ್ಕ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ