ಆ್ಯಪ್ನಗರ

ಶಿಕ್ಷಕರ ವಾಟ್ಸ್ಆ್ಯಪ್ ‌ಗುಂಪಿಗೆ ಅಶ್ಲೀಲ ಚಿತ್ರ ಕಳಿಸಿದ ಶಿಕ್ಷಕ..! ಆತನಿಗೆ ನೀಡಿದ ಶಿಕ್ಷೆ ಏನು ಗೊತ್ತಾ?

ಕೆಲ ದಿನಗಳ ಹಿಂದೆ ಈ ಶಿಕ್ಷಕ ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಅಶ್ಲೀಲ ಫೋಟೊಗಳನ್ನು ಪೋಸ್ಟ್‌ ಮಾಡಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಶಿಕ್ಷಕರು ಬಿಇಒ ಡಿ. ಆರ್‌. ನಾಯ್ಕ ಅವರಿಗೆ ಮಾಹಿತಿ ನೀಡಿದ್ದರು. ವಿಚಾರಣೆಗೊಳಪಡಿಸಿದ ನಾಯ್ಕ ಶಿಸ್ತು ಕ್ರಮಕ್ಕೆ ಡಿಡಿಪಿಐಗೆ ವರದಿ ಸಲ್ಲಿಸಿದ್ದರು.

Vijaya Karnataka Web 28 Dec 2020, 8:22 am
ಹೊನ್ನಾವರ: ಶಿಕ್ಷಕರ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಅಶ್ಲೀಲ ಫೋಟೋಗಳನ್ನು ಕಳಿಸಿದ ಶಿಕ್ಷಕನನ್ನು ಅಂಕೋಲಾ ತಾಲೂಕಿನ ಶಾಲೆಯೊಂದಕ್ಕೆ ಪನಿಶ್ಮೆಂಟ್‌ ಡೆಪ್ಯುಟೇಶನ್‌ ಮಾಡಲಾಗಿದೆ. ಪ್ರಕರಣ ಕುರಿತು ಡಿಡಿಪಿಐ ಮುಂದಿನ ವಿಚಾರಣೆ ಕೈಗೆತ್ತಿಕೊಂಡಿದ್ದಾರೆ.
Vijaya Karnataka Web whatsapp
To mute a chat forever, tap on the chat and then on the name of the group. 8 hours, 1 week and forever.


ಏನಿದು ಪ್ರಕರಣ:
ತಾಲೂಕಿನ ಶಿಕ್ಷಕರ ‘ನಿಷ್ಠ’ ಎಂಬ ಐದು ವಾಟ್ಸ್‌ಆ್ಯಪ್‌ ಗ್ರೂಪ್‌ಗಳಿದ್ದು, ಪ್ರತಿ ಗ್ರೂಪ್‌ಗಳಲ್ಲೂ ನೂರಾರು ಶಿಕ್ಷಕರಿದ್ದಾರೆ. ಒಂದು ಗ್ರೂಪ್‌ನಲ್ಲಿಈ ಶಿಕ್ಷಕ ಸಹ ಇದ್ದರು. ಕೆಲ ದಿನಗಳ ಹಿಂದೆ ಈ ಶಿಕ್ಷಕ ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಅಶ್ಲೀಲ ಫೋಟೊಗಳನ್ನು ಪೋಸ್ಟ್‌ ಮಾಡಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಶಿಕ್ಷಕರು ಬಿಇಒ ಡಿ. ಆರ್‌. ನಾಯ್ಕ ಅವರಿಗೆ ಮಾಹಿತಿ ನೀಡಿದ್ದರು. ವಿಚಾರಣೆಗೊಳಪಡಿಸಿದ ನಾಯ್ಕ ಶಿಸ್ತು ಕ್ರಮಕ್ಕೆ ಡಿಡಿಪಿಐಗೆ ವರದಿ ಸಲ್ಲಿಸಿದ್ದರು. ಅರೋಪ ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಡಿಡಿಪಿಐ ವಿಚಾರಣೆ ಕಾಯ್ದಿರಿಸಿ ಪನಿಶ್ಮೆಂಟ್‌ ಡೆಪ್ಯುಟೇಶನ್‌ ಮಾಡಿ ಅದೇಶ ಹೊರಡಿಸಿದ್ದಾರೆ.

ಕೊಡಗಿನಲ್ಲಿ ಮತ್ತೆ ಚಿಗುರಿದ ಪ್ರವಾಸೋದ್ಯಮ..! ಮೂರ್ನಾಲ್ಕು ದಿನದಲ್ಲಿ 50ಸಾವಿರಕ್ಕೂ ಹೆಚ್ಚು ಮಂದಿ ಭೇಟಿ..!

ಶಾಲೆಯಿಂದ ರಿಲೀವ್‌: ನಂತರ ಬಿಇಒ ಡಿ.ಆರ್‌ ನಾಯ್ಕ ಶಾಲೆಗೆ ಭೇಟಿ ನೀಡಿ ಆರೋಪಿ ಶಿಕ್ಷಕರನ್ನು ರಿಲೀವ್‌ ಮಾಡಿರುವುದಾಗಿ 'ವಿಕ'ಕ್ಕೆ ಖಚಿತ ಪಡಿಸಿದ್ದಾರೆ. ತಪ್ಪು ಮುಚ್ಚಿಟ್ಟುಕೊಳ್ಳಲು ಮೊಬೈಲ್‌ ಕಳೆದಿದೆ ಎಂದಿದ್ದ ಶಿಕ್ಷಕ, ನಂತರ ಸಿಕ್ಕಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಆನ್‌ಲೈನ್ ಲೋನ್‌ ವಂಚನೆಗೆ ಬೆಂಗಳೂರೇ ಕೇಂದ್ರ..! ಪೊಲೀಸರ ತನಿಖೆಯಲ್ಲಿ ಬಹಿರಂಗ

ಶಿಕ್ಷಕ ಮೊದಲು ತಾನು ಅಶ್ಲೀಲ ಫೋಟೊಗಳನ್ನು ಕಳಿಸಿಲ್ಲಎಂದು ಹೇಳಿದ್ದರು. ನಂತರ ತಪ್ಪು ಒಪ್ಪಿಕೊಂಡರು. ಎಲ್ಲವನ್ನೂ ಪರಿಶೀಲಿಸಿ ಶಿಸ್ತು ಕ್ರಮಕ್ಕೆ ಡಿಡಿಪಿಐ ಅವರಿಗೆ ಬರೆದಿದ್ದೇನೆ. ಡಿಡಿಪಿಐ ಅವರು ವಿಚಾರಣೆ ಕಾಯ್ದಿರಿಸಿ ಡೆಪ್ಯುಟೇಶನ್‌ ಮಾಡಿದ್ದಾರೆ ಎಂದು ಹೊನ್ನಾವರ ಕ್ಷೇತ್ರ ಶಿಕ್ಷಣಾಧಿಕಾರಿ ಡಿ. ಆರ್‌. ನಾಯ್ಕ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ