ಆ್ಯಪ್ನಗರ

ಅತ್ತಿವೇರಿ ಪಕ್ಷಿಧಾಮ ಯಲ್ಲಾಪುರ ವಿಭಾಗ ವ್ಯಾಪ್ತಿಗೆ

ಮುಂಡಗೋಡ: ತಾಲೂಕಿನ ಅತ್ತಿವೇರಿ ಪಕ್ಷಿಧಾಮದ ಪ್ರದೇಶವನ್ನು ಉಪಅರಣ್ಯ ಸಂರಕ್ಷಣಾಧಿಕಾರಿ ಮತ್ತು ಕ್ಷೇತ್ರ ನಿರ್ದೇಶಕರು ಕಾಳಿ ಹುಲಿ ಯೋಜನೆ ದಾಂಡೇಲಿ ಇವರ ವ್ಯಾಪ್ತಿಯಿಂದ ಯಲ್ಲಾಪುರ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಆಡಳಿತ ವ್ಯಾಪ್ತಿಗೆ ಒಳಪಡಿಸಿ ರಾಜ್ಯ ಸರಕಾರ ಆದೇಶ ಮಾಡಿದೆ.

Vijaya Karnataka 3 Feb 2020, 5:00 am
ಮುಂಡಗೋಡ: ತಾಲೂಕಿನ ಅತ್ತಿವೇರಿ ಪಕ್ಷಿಧಾಮದ ಪ್ರದೇಶವನ್ನು ಉಪಅರಣ್ಯ ಸಂರಕ್ಷಣಾಧಿಕಾರಿ ಮತ್ತು ಕ್ಷೇತ್ರ ನಿರ್ದೇಶಕರು ಕಾಳಿ ಹುಲಿ ಯೋಜನೆ ದಾಂಡೇಲಿ ಇವರ ವ್ಯಾಪ್ತಿಯಿಂದ ಯಲ್ಲಾಪುರ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಆಡಳಿತ ವ್ಯಾಪ್ತಿಗೆ ಒಳಪಡಿಸಿ ರಾಜ್ಯ ಸರಕಾರ ಆದೇಶ ಮಾಡಿದೆ.
Vijaya Karnataka Web the attiveri bird sanctuary falls under the yallapur division
ಅತ್ತಿವೇರಿ ಪಕ್ಷಿಧಾಮ ಯಲ್ಲಾಪುರ ವಿಭಾಗ ವ್ಯಾಪ್ತಿಗೆ


ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಅವರು ಕಳೆದ 6 ತಿಂಗಳ ಹಿಂದೆ ಸರಕಾರಕ್ಕೆ ಪತ್ರ ಬರೆದು ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ 70 ಕಿ.ಮೀ ದೂರದ ದಾಂಡೇಲಿಯಿಂದ ಯಲ್ಲಾಪುರ ಉಪವಿಭಾಗಕ್ಕೆ ಹಸ್ತಾಂತರಿಸಲು ವಿನಂತಿಸಿದ್ದರು.

ವಿಜಯ ಕರ್ನಾಟಕ ಪತ್ರಿಕೆಯಲ್ಲಿಜ.19 ರಂದು ನಿರ್ವಹಣೆ ಕಾಣದ ಪಕ್ಷಿಧಾಮ ತಲೆಬರಹದಲ್ಲಿಲೇಖನ ಪ್ರಕಟಿಸಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಶಾಸಕರು ಮತ್ತೆ ಸರಕಾರ ಮತ್ತು ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಕಚೇರಿ ಮೇಲೆ ಒತ್ತಡ ಹಾಕಿದ್ದರ ಪರಿಣಾಮ ಈ ಆದೇಶ ನೀಡಲಾಗಿದೆ.

ಮುಂದಿನ ಎರಡು ತಿಂಗಳಲ್ಲಿಅತ್ತಿವೇರಿ ಪಕ್ಷಿಧಾಮದ ಅಭಿವೃದ್ಧಿಗೆ ವೇಗ ಪಡೆಯಲಿದ್ದು ಪಕ್ಷಿಗಳು ಮತ್ತು ಪ್ರವಾಸಿಗರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

1994 ರಲ್ಲಿನಿರ್ಮಿಸಿದ್ದ ಪಕ್ಷಿಧಾಮವನ್ನು 2001 ರ ಅಗಸ್ಟ ವರೆಗೆ ಯಲ್ಲಾಪುರ ವಿಭಾಗದ ಮುಂಡಗೋಡ ಅರಣ್ಯ ಇಲಾಖೆಯವರು ಅಭಿವೃದ್ಧಿ ಪಡಿಸಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ನಂತರ 2014 ರ ವರೇಗೆ ರಾಣೇಬೆನ್ನೂರಿನ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿತ್ತು. ಅವರು ಪ್ರಾರಂಭಿಕ ವರ್ಷ ಕಾಳಜಿ ತೋರಿಸಿ ಸುಮ್ಮನಾಗಿದ್ದರು. ನಂತರ ಈ ವರೆಗಿನ ಅವಧಿಯಲ್ಲಿದಾಂಡೇಲಿ ವಿಭಾಗ -ಕುಳಗಿ ವಲಯ ವ್ಯಾಪ್ತಿಯ ನಿರ್ವಹಣೆಯಲ್ಲಿದ್ದು ಅಭಿವೃದ್ಧಿ ಕಂಡಿರಲಿಲ್ಲಿ. ಈಗ ಮತ್ತೆ ಪಕ್ಷಿಧಾಮಕ್ಕೆ ತೀರ ಹತ್ತಿರ 19 ಕಿ.ಮೀ.ವ್ಯಾಪ್ತಿಯ ಮುಂಡಗೋಡ ವಲಯಕ್ಕೆ ಒಳಪಡುವದರಿಂದಾಗಿ ಅಭಿವೃದ್ಧಿ ಪರ್ವ ಆರಂಭ ಆಗುತ್ತದೆ ಎನ್ನುವದು ಜನರ ನಂಬಿಕೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ