ಆ್ಯಪ್ನಗರ

ಆಕರ್ಷಣೆ ಬಿಂದುವಾದ ಮಕ್ಕಳ ಸಂತೆ

ಅಂಕೋಲಾ : ತಾಲೂಕಿನ ಮಾದನಗೇರಿಯಲ್ಲಿ ಮಕ್ಕಳಿಂದಲೇ ನಿರ್ವಹಿಸಲ್ಪಟ್ಟ ಸಂತೆಯು ಸುತ್ತಲಿನ ಜನರಿಗೆ ಆಕರ್ಷಣೆಯ ಕೇಂದ್ರ ಬಿಂದುವಾಗಿ ಗಮನ ಸೆಳೆಯಿತು.

Vijaya Karnataka 22 May 2019, 5:00 am
ಅಂಕೋಲಾ : ತಾಲೂಕಿನ ಮಾದನಗೇರಿಯಲ್ಲಿ ಮಕ್ಕಳಿಂದಲೇ ನಿರ್ವಹಿಸಲ್ಪಟ್ಟ ಸಂತೆಯು ಸುತ್ತಲಿನ ಜನರಿಗೆ ಆಕರ್ಷಣೆಯ ಕೇಂದ್ರ ಬಿಂದುವಾಗಿ ಗಮನ ಸೆಳೆಯಿತು.
Vijaya Karnataka Web KWR-21ANK2A


ಇಂತಹ ಅಪರೂಪದ ಕಾರ್ಯಕ್ರಮವು ಬೇಸಿಗೆ ಶಿಬಿರದ ಮಕ್ಕಳಿಂದ ನಡೆಯಿತು. 12 ದಿನಗಳ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ 105 ಮಕ್ಕಳು ತಮ್ಮ ಮನೆಯಲ್ಲಿ ತಯಾರಿಸಿದ ತಿಂಡಿ-ತಿನಿಸು ಹಾಗೂ ವಿವಿಧ ಆಹಾರ, ತಂಪು ಪಾನೀಯ, ಮಾವಿನ ಹಣ್ಣು, ಹಲಸು, ತೆಂಗಿನ ಕಾಯಿ, ಕೋಕಂ, ಬಸಳೆ, ನುಗ್ಗಿಕಾಯಿ, ಗುಲಾಮ ಜಾಮೂನು, ರಾಗಿ ಮತ್ತು ಎಳ್ಳಿನ ಪಾನಕ, ಸೀಯಾಳ, ಬಾಳೆಹಣ್ಣು ಹಾಗೂ ಇನ್ನಿತರ ಸಾಮಾಗ್ರಿಗಳನ್ನು ತಂದು ಮಾರಾಟ ಮಾಡಿದರು.

ಮಕ್ಕಳೊಂದಿಗೆ ಅವರ ಪಾಲಕರು ಬಂದು ಸಂತೆಯ ಸಂತೋಷದಲ್ಲಿ ಭಾಗವಹಿಸಿದರು. ವ್ಯಾಪಾರ ನಡೆಸಿದ ಮಕ್ಕಳು ಮತ್ತು ಸಾರ್ವಜನಿಕರಿಗೆ ಖುಷಿಯೋ ಖುಷಿ.

ಬಾಲಭವನ ಸೊಸೈಟಿ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉತ್ತರ ಕನ್ನಡ, ಶಿಶು ಅಭಿವೃದ್ಧಿ ಯೋಜನೆ ಕುಮಟಾ ಹಾಗೂ ಸಂಗಾತಿ ರಂಗಭೂಮಿ (ರಿ) ಅಂಕೋಲಾ ಇವರ ಆಶ್ರಯದಲ್ಲಿ ಶಿಬಿರದ ಭಾಗವಾಗಿ ಆಯೋಜಿಸಿದ ಮಕ್ಕಳ ಸಂತೆಯನ್ನು ಸಿ.ಡಿ.ಪಿ. ತ್ರಿವೇಣಿ ಯಾಜಿ ಅವರು ಮಕ್ಕಳಿಂದ ವಿವಿಧ ಸಾಮಗ್ರಿಗಳನ್ನು ಖರೀದಿಸಿ ಉದ್ಘಾಟಿಸಿದರು.

ಇಲಾಖೆಯಿಂದ ಆಯೋಜಿಸಿದ ಶಿಬಿರವು ಬರ್ಗಿ ಗ್ರಾಮದಲ್ಲಿ ಮಾದರಿಯಾಗಿ ಸಂಘಟಿಸಲ್ಪಟ್ಟಿದೆ. ಸರಕಾರದ ಸುತ್ತೋಲೆಯಂತೆ 50 ಮಕ್ಕಳನ್ನು ಮಾತ್ರ ಸೇರಿಸಿಕೊಳ್ಳಲು ತಿಳಿಸಿದರೂ ನಾವು ಈ ಶಿಬಿರದಲ್ಲಿ 100ಕ್ಕೂ ಹೆಚ್ಚು ಮಕ್ಕಳನ್ನು ಸೇರಿಸಿಕೊಂಡಿದ್ದೇವೆ. 12 ದಿನಗಳ ಕಾಲ ಅರ್ಥಪೂರ್ಣವಾಗಿ ಶಿಬಿರ ಮುಂದುವರೆಯುತ್ತಿದೆ. ಪ್ರತಿ ತರಬೇತಿ ಹಾಗೂ ಮಕ್ಕಳಿಗೆ ನೀಡುವ ಅಲ್ಪೋಪಹಾರದ ಬದಲಾಗಿ ಊರ ನಾಗರಿಕರ ಸಹಕಾರ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮುತುರ್ವಜಿಯಿಂದ ಎಲ್ಲ ಮಕ್ಕಳಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಇದು ಎಲ್ಲ ಶಿಬಿರಗಳಿಗೆ ಮಾದರಿ ಶಿಬಿರವಾಗಿ ಸಂಘಟಿಸಲ್ಪಟ್ಟಿದೆ. ಈ ಸಂತೆ ಎಂಬ ಪರಿಕಲ್ಪನೆಯನ್ನು ಸಂಘಟಕರು ಪ್ರತಿವರ್ಷ ವಿವಿಧ ತಾಲೂಕುಗಳಲ್ಲಿ ನಡೆಸಿ ಇನ್ನಿತರ ಶಿಬಿರ ನಡೆಸುವವರಿಗೂ ಮಾದರಿಯಾಗಿದ್ದಾರೆ ಎಂದರು.

ಮೇಲ್ವಿಚಾರಕಿ ಭಾರತಿ ಪಟಗಾರ ಸ್ವಾಗತಿಸಿದರು. ಮಕ್ಕಳ ಸಂತೆಯ ರೂಪು-ರೇಷೆಗಳ ಬಗ್ಗೆ ಸಂಘಟಕ ಕೆ.ರಮೇಶ ಮಾತನಾಡಿದರು.

ಜಿ.ಕೆ.ನಾಯ್ಕ ಬರ್ಗಿ, ಇಲಾಖೆಯ ಮೇಲ್ವಿಚಾರಕಿಯರಾದ ತುಳಸಿ ಗೌಡ, ಮೋಹಿನಿ ನಾಯ್ಕ, ಅಂಗನವಾಡಿ ಕಾರ್ಯಕರ್ತೆಯರಾದ ಭಾರತಿ ನಾಯ್ಕ, ಮಹಾದೇವಿ ಪಟಗಾರ, ವನಿತಾ ಶೆಟ್ಟಿ, ಸಹಾಯಕಿಯರಾದ ಮುಕ್ತಾ ನಾಯ್ಕ, ಚಂದ್ರಕಲಾ ಪಟಗಾರ, ವನಿತಾ ಪಟಗಾರ, ಸ್ಥಳೀಯ ಸಾಮಾಜಿಕ ಕಾರ್ಯಕರ್ತರಾದ ಮಂಜುನಾಥ ನಾಯ್ಕ, ಮಂಜುನಾಥ ದೀಕ್ಷಿತ, ಬರ್ಗಿ ಹಿ.ಪ್ರಾ. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಅರುಣ ಶೆಟ್ಟಿ, ರಮೇಶ ಶೆಟ್ಟಿ, ಗುತ್ತಿಗೆದಾರರಾದ ಲಕ್ಷ ್ಮಣ ಪಟಗಾರ, ಶಿಬಿರದ ಕಾರ್ಯಕರ್ತರಾದ ಪೂರ್ಣಿಮಾ ನಾಯ್ಕ ಹಾಗೂ ಇನ್ನಿತರ ಪ್ರಮುಖರು ಭಾಗವಹಿಸಿ ಸಂತೆಯ ಯಶಸ್ಸಿಗೆ ಕಾರಣೀಕರ್ತರಾದರು.

ಮಕ್ಕಳಿಂದಲೇ ನಿರ್ವಹಿಸಲ್ಪಟ್ಟ ಸಂತೆಗೆ ಬೇಕಾದ ವಿವಿಧ ಸಹಕಾರವನ್ನು ಮಾದನಗೇರಿಯ ಲಗೇಜ್‌ ರಿಕ್ಷಾ ಮಾಲಕರು ಹಾಗೂ ಚಾಲಕರ ಸಂಘ, ಪ್ಯಾಸೆಂಜರ್‌ ರಿಕ್ಷಾ ಸಂಘಟನೆ ಮತ್ತು ಅಂಗಡಿಕಾರರು, ಸಾರ್ವಜನಿಕರು ಸಹಕಾರ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ