ಆ್ಯಪ್ನಗರ

ಪರಿಶ್ರಮದಿಂದ ಉತ್ತಮ ಫಲ

ದಾಂಡೇಲಿ : ಇಂದು ಬಂಡವಾಳವಾದಿಗಳ, ಕೋಮುವಾದಿಗಳ ದಾಳಿ ನಮಗೆ ಅರಿವಿಲ್ಲದಂತೆಯೇ ನಮ್ಮ ಮೇಲೆ ನಡೆಯುತ್ತಿದೆ. ಇದರಿಂದ ವಿದ್ಯಾರ್ಥಿ, ಯುವಜನರು ನಲುಗುತ್ತಿದ್ದಾರೆ. ಇದರಿಂದ ನಮ್ಮ ಮಕ್ಕಳು ವಿಚಾರ ಮಾಡುವ ಶಕ್ತಿಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಜಾಗೃತವಾಗಿರಬೇಕು ಎಂದು ಸರಕಾರಿ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕಿ, ಲೇಖಕಿ ಡಾ.ವಿನಯ ಒಕ್ಕುಂದ ಹೇಳಿದರು.

Vijaya Karnataka 21 Dec 2018, 5:00 am
ದಾಂಡೇಲಿ : ಇಂದು ಬಂಡವಾಳವಾದಿಗಳ, ಕೋಮುವಾದಿಗಳ ದಾಳಿ ನಮಗೆ ಅರಿವಿಲ್ಲದಂತೆಯೇ ನಮ್ಮ ಮೇಲೆ ನಡೆಯುತ್ತಿದೆ. ಇದರಿಂದ ವಿದ್ಯಾರ್ಥಿ, ಯುವಜನರು ನಲುಗುತ್ತಿದ್ದಾರೆ. ಇದರಿಂದ ನಮ್ಮ ಮಕ್ಕಳು ವಿಚಾರ ಮಾಡುವ ಶಕ್ತಿಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಜಾಗೃತವಾಗಿರಬೇಕು ಎಂದು ಸರಕಾರಿ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕಿ, ಲೇಖಕಿ ಡಾ.ವಿನಯ ಒಕ್ಕುಂದ ಹೇಳಿದರು.
Vijaya Karnataka Web KWR-20-DND1


ದಾಂಡೇಲಿ ಶಿಕ್ಷ ಣ ಸಂಸ್ಥೆಯ, ಬಂಗೂರನಗರ ಪದವಿ ಪೂರ್ವ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಯಾವ ದೇವರೂ ಸಹ ಪರೀಕ್ಷೆ ಕೊಠಡಿಯಲ್ಲಿ ಬಂದು ಸಹಾಯ ಮಾಡುವುದಿಲ್ಲ. ಕೈಗೆ ದಾರ ಕಟ್ಟಿಕೊಂಡರೆ, ಮಂತ್ರದ ಉಂಗುರ ಹಾಕಿಕೊಂಡರೆ ಉತ್ತೀರ್ಣರಾಗುವುದಿಲ್ಲ. ನಮ್ಮ ಓದು ಮತ್ತು ಪ್ರಯತ್ನವೇ ನಮ್ಮನ್ನು ಗೆಲ್ಲಿಸಬಹುದು. ಸ್ವಯಂ ಪರಿಶ್ರಮ ಮತ್ತು ಅದರ ಬೆವರ ಹನಿಗಳೇ ನಿಜವಾದ ಫಲಕೊಡಲು ಸಾಧ್ಯ.

ದೇವರು ನಮ್ಮ ಪರೀಕ್ಷೆ ಪಾಸುಮಾಡುವುದಿಲ್ಲ ಎಂಬ ಕನಿಷ್ಠ ವೈಚಾರಿಕತೆಯಾದರೂ ವಿದ್ಯಾರ್ಥಿಗಳಲ್ಲಿರಬೇಕು. ನಮ್ಮ ದೇಶದಲ್ಲಿ ಬುದ್ಧಿವಂತರಿಗೆ, ಶ್ರೀಮಂತರಿಗೆ ಕೊರತೆಯೇನೂ ಇಲ್ಲ. ಆದರೆ ಮನುಷ್ಯತ್ವದ ಕೊರತೆ ಸಾಕಷ್ಟಿದೆ. ಮನುಷ್ಯ ಮನುಷ್ಯನನ್ನು ಪ್ರೀತಿಸುವುದೇ, ಕೂಡಿ ಬಾಳುವುದೇ ನಮ್ಮ ನಿಜವಾದ ಧರ್ಮವಾಗಬೇಕು ಎಂದರು.

ಗಣೇಶಗುಡಿ ಕನಾಟಕ ವಿದ್ಯುತ್‌ ನಿಗಮದ ಮುಖ್ಯ ಎಂಜಿನಿಯರ್‌ ಟಿ.ಆರ್‌. ನಿಂಗಣ್ಣ ಮಾತನಾಡಿ ದ್ವಿತಿಯ ಪಿ.ಯು.ಸಿ ಎಂದರೆ ಇದು ವಿದ್ಯಾರ್ಥಿಗಳ ನಿರ್ಣಾಯಕವಾದ ಒಂದು ಸಮಯ. ಈ ಸಮಯವನ್ನು ಯಾರೂ ಹಾಳು ಮಾಡಿಕೊಳ್ಳಬಾರದು. ಸೂಕ್ತ ನಿರ್ಧಾರಗಳೊಂದಿಗೆ ಮುಂದಡಿ ಇಡಬೇಕು ಎಂದರು.

ಅಧ್ಯಕ್ಷ ತೆ ವಹಿಸಿದ್ದ ವೆಸ್ಟ್‌ಕೋಸ್ಟ್‌ ಪೇಪರ್‌ಮಿಲ್‌ನ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ಎಸ್‌.ಎನ್‌. ಪಾಟೀಲರು ಮಾತನಾಡಿ ನಮ್ಮ ಗುರಿ ಸಾಧನೆಗಾಗಿ ನಾವು ಪ್ರಯತ್ನಶೀಲರಾಗಬೇಕು. ಗುರು ಹಿರಿಯರನ್ನು ಗೌರವಿಸಬೇಕು ಎಂದರು.

ಕ್ರೀಡೆ, ಸಾಂಸ್ಕೃತಿಕ ಹಾಗೂ ಶೈಕ್ಷ ಣಿಕ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಬಂಗೂರನಗರ ಪ.ಪೂ ಕಾಲೇಜಿನ ಪ್ರಾಚಾರ್ಯ ಎ.ಪಿ. ಮಹೇಂದ್ರಪ್ಪ ಸ್ವಾಗತಿಸಿ, ವರದಿ ಓದಿದರು. ಸಾಂಸ್ಕೃತಿಕ ವಿಭಾಗದ ಉಸ್ತುವಾರಿ ಎನ್‌.ವಿ. ಪಾಟೀಲ, ಕ್ರೀಡಾ ವಿಭಾಗದ ಉಸ್ತುವಾರಿ ಪಿ.ಎನ್‌. ಮೆಹತಾ, ಪ್ರತಿಭಾ ದೇಶಪಾಂಡೆ ಅತಿಥಿಗಳನ್ನು ಪರಿಚಯಿಸಿದರು. ಎನ್‌.ಜಿ. ಗೌಡ, ಲತಾ ಶೆಣ್ವಿ ನಿರೂಪಿಸಿದರು. ದೇವಿದಾಸ ನಾಯ್ಕ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ