ಆ್ಯಪ್ನಗರ

ದಾನದಿಂದ ಉತ್ತಮ ಫಲ: ಸ್ವರ್ಣವಲ್ಲೀ ಶ್ರೀ

ಯಲ್ಲಾಪುರ : ಹಿತವಾದ ಮಾತುಗಳಿಂದ ಕೂಡಿದ ದಾನ, ಅಹಂಕಾರವಿಲ್ಲದ ಜ್ಞಾನ, ಕ್ಷ ಮಾ ಗುಣವನ್ನು ಹೊಂದಿದ ಶೌರ್ಯ, ತ್ಯಾಗದಿಂದ ಕೂಡಿದ ಹಣ ಇವು ಮನುಷ್ಯನ ಜೀವನದಲ್ಲಿ ಇರಬೇಕಾದ ಮಹತ್ವದ ಗುಣಗಳಾಗಿವೆ. ಇವು ದುರ್ಲಭವಾದವುಗಳೂ ಆಗಿವೆ ಎಂದು ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

Vijaya Karnataka 16 Mar 2019, 5:00 am
ಯಲ್ಲಾಪುರ : ಹಿತವಾದ ಮಾತುಗಳಿಂದ ಕೂಡಿದ ದಾನ, ಅಹಂಕಾರವಿಲ್ಲದ ಜ್ಞಾನ, ಕ್ಷ ಮಾ ಗುಣವನ್ನು ಹೊಂದಿದ ಶೌರ್ಯ, ತ್ಯಾಗದಿಂದ ಕೂಡಿದ ಹಣ ಇವು ಮನುಷ್ಯನ ಜೀವನದಲ್ಲಿ ಇರಬೇಕಾದ ಮಹತ್ವದ ಗುಣಗಳಾಗಿವೆ. ಇವು ದುರ್ಲಭವಾದವುಗಳೂ ಆಗಿವೆ ಎಂದು ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
Vijaya Karnataka Web the best result of charity swarnavalli sri
ದಾನದಿಂದ ಉತ್ತಮ ಫಲ: ಸ್ವರ್ಣವಲ್ಲೀ ಶ್ರೀ

ಪಟ್ಟಣದ ನಾಯಕನಕೆರೆ ಶ್ರೀ ಶಾರದಾಂಬಾ ದೇವಾಲಯದ ಆವಾರದಲ್ಲಿ ನಡೆಯುತ್ತಿರುವ ಗುರುಭವನ ಸಮರ್ಪಣೆ ಹಾಗೂ ಶ್ರೀ ಆದಿಶಂಕರಾಚಾರ್ಯರ ಮೂರ್ತಿ ಪ್ರತಿಷ್ಠಾ ಮಹೋತ್ಸವ ಕಾರ‍್ಯಕ್ರಮದ ಮೂರನೇ ದಿನವಾದ ಶುಕ್ರವಾರ ಸಂಜೆ ನಡೆದ ಧರ್ಮಸಭೆಯಲ್ಲಿ ಶಂಕರಾಚಾರ್ಯರ ''ಪ್ರಶ್ನೋತ್ತರ ರತ್ನ ಮಾಲಿಕಾ'' ಗ್ರಂಥದ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

ದಾನ ಮಾಡುವಾಗ ಹಿತವಾದ ಮಾತುಗಳನ್ನಾಡಬೇಕು. ದಾನ ಸ್ವೀಕರಿಸುವವರ ಕುರಿತು ನಮ್ಮಲ್ಲಿ ಗೌರವ ಇರಬೇಕು. ದಾನ ಕೊಡುತ್ತಿರುವುದು ನಮ್ಮದಲ್ಲ ಎಂಬ ಭಾವನೆ ಇರಬೇಕು. ಇಂತಹ ದಾನದಿಂದ ಉತ್ತಮ ಫಲಪ್ರಾಪ್ತಿಯಾಗುತ್ತದೆ. ವಿನಯದಿಂದ ಕೂಡಿದ ಜ್ಞಾನಕ್ಕೆ ವಿಶೇಷ ಗೌರವ ಇದೆ. ಗಳಿಸಿದ ಹಣದಲ್ಲಿ ಕೆಲವಷ್ಟನ್ನಾದರೂ ತ್ಯಾಗ ಮಾಡಬೇಕು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ