ಆ್ಯಪ್ನಗರ

ಬಾಂಬ್‌ ನಿಷ್ಕ್ರಿಯ ಯಂತ್ರಕ್ಕೆ ಮೆಚ್ಚುಗೆ

ಭಟ್ಕಳ : ತಾಲೂಕಿನ ಮುರುಡೇಶ್ವರ ಆರ್‌.ಎನ್‌.ಎಸ್‌. ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ವಿದ್ಯುನ್ಮಾನ ಬಾಂಬ್‌ ನಿಷ್ಕ್ರಿಯ ಯಂತ್ರವು ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಕೂರ್ಗ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ವಿದ್ಯಾಲಯದಲ್ಲಿ ಏರ್ಪಡಿಸಿದ್ದ 2019ರ ಪ್ರಾಜೆಕ್ಟ್ ಎಕ್ಸಿಬಿಷನ್‌ ಪ್ರತಿಭಾ ಅನ್ವೇಷಣಾ ಸ್ಪರ್ಧೆಯಲ್ಲಿ ಪ್ರದರ್ಶನಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Vijaya Karnataka 28 Mar 2019, 5:00 am
ಭಟ್ಕಳ : ತಾಲೂಕಿನ ಮುರುಡೇಶ್ವರ ಆರ್‌.ಎನ್‌.ಎಸ್‌. ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ವಿದ್ಯುನ್ಮಾನ ಬಾಂಬ್‌ ನಿಷ್ಕ್ರಿಯ ಯಂತ್ರವು ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಕೂರ್ಗ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ವಿದ್ಯಾಲಯದಲ್ಲಿ ಏರ್ಪಡಿಸಿದ್ದ 2019ರ ಪ್ರಾಜೆಕ್ಟ್ ಎಕ್ಸಿಬಿಷನ್‌ ಪ್ರತಿಭಾ ಅನ್ವೇಷಣಾ ಸ್ಪರ್ಧೆಯಲ್ಲಿ ಪ್ರದರ್ಶನಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
Vijaya Karnataka Web KWR-27BKL1

ಈ ಬಾಂಬ್‌ ನಿಷ್ಕ್ರಿಯ ಯಂತ್ರದಲ್ಲಿ ಆಧುನಿಕ ಇಎಂಪಿ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ರಾತ್ರಿ ವೇಳೆ ಕೆಲಸ ಮಾಡುವ ಸಾಮರ್ಥ್ಯ‌ವನ್ನು ಹೊಂದಿದ ಕ್ಯಾಮೆರಾವನ್ನು ಇದರಲ್ಲಿ ಅಳವಡಿಸಲಾಗಿದ್ದು, ಇಂಟರ್‌ನೆಟ್‌ ಮೂಲಕ ಚಿತ್ರ ಸಹಿತ ಮಾಹಿತಿಯನ್ನು ಪಡೆಯಬಹುದಾಗಿದೆ.ಮುರುಡೇಶ್ವರ ಪಾಲಿಟೆಕ್ನಿಕ್‌ನ 4ನೇ ಸೆಮ್‌ನ ಇಲೆಕ್ಟ್ರಾನಿಕ್ಸ್‌ ವಿದ್ಯಾರ್ಥಿಗಳಾದ ಪ್ರಮತ್‌ ಬಿ. ನಾಯ್ಕ, ಮನೀಶ್‌ ನಾಯ್ಕ, 4ನೇ ಸೆಮಿಸ್ಟರ್‌ನ ಮೆಕ್ಯಾನಿಕಲ್‌ ವಿಭಾಗದ ಮೊಹ್ಮದ್‌ ರಿಹಾನ್‌ ಮಲ್ಲಿಕ್‌, ಸಾಗರ್‌ ಕೊಲ್ಲಾಪುರ ವಿದ್ಯಾರ್ಥಿಗಳು ಸೇರಿಕೊಂಡು ಈ ಯಂತ್ರವನ್ನು ಸಿದ್ಧಪಡಿಸಿದ್ದರು. ವಿದ್ಯಾರ್ಥಿಗಳ ಸಾಧನೆಗೆ ಆರ್‌ಎನ್‌ಎಸ್‌ ಶಿಕ್ಷ ಣ ಸಂಸ್ಥೆಯ ನಿರ್ದೇಶಕ ಎಂ.ವಿ.ಹೆಗಡೆ, ಪ್ರಾಚಾರ್ಯ ಸಂತೋಷ, ಉಪ ಪ್ರಾಚಾರ್ಯ ಕೆ.ಮರಿಸ್ವಾಮಿ, ಇಲೆಕ್ಟ್ರಾನಿಕ್ಸ್‌ ವಿಭಾಗದ ಮುಖ್ಯಸ್ಥ ಜಿ. ಮಂಜುನಾಥ, ಮೆಕ್ಯಾನಿಕಲ್‌ ವಿಭಾಗದ ಕಮಲಾಕರ್‌ ನಾಯ್ಕ, ಹರೀಶ ಪಟಿಯಾಳ, ಪಾಲಿಟೆಕ್ನಿಕ್‌ನ ಉಪನ್ಯಾಸಕರು ಅಭಿನಂದನೆ ಸಲ್ಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ