ಆ್ಯಪ್ನಗರ

ಭಾರತದ ಸಂವಿಧಾನ ಪವಿತ್ರ ಗ್ರಂಥ

ದಾಂಡೇಲಿ : ಸಂವಿಧಾನ ಮತ್ತು ನ್ಯಾಯಾಂಗ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ನಗರದ ಎಸ್‌.ಎಸ್‌. ಸೊರಗಾಂವಿ ಅಂತಾರಾಷ್ಟ್ರೀಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Vijaya Karnataka 7 Nov 2019, 5:00 am
ದಾಂಡೇಲಿ : ಸಂವಿಧಾನ ಮತ್ತು ನ್ಯಾಯಾಂಗ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ನಗರದ ಎಸ್‌.ಎಸ್‌. ಸೊರಗಾಂವಿ ಅಂತಾರಾಷ್ಟ್ರೀಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Vijaya Karnataka Web the constitution of india
ಭಾರತದ ಸಂವಿಧಾನ ಪವಿತ್ರ ಗ್ರಂಥ


ಸಂವಿಧಾನದ ರಚನೆ ಮತ್ತು ವ್ಯಾಪ್ತಿಯ ಬಗ್ಗೆ ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ ನೀಡಲಾಯಿತು. ಪ್ರತಿಯೊಬ್ಬ ವಿದ್ಯಾರ್ಥಿ ಸಂವಿಧಾನದ ಬಗ್ಗೆ ಅಧ್ಯಯನ ಮಾಡಿ ಅದರ ಮುಖ್ಯ ಅಂಶಗಳನ್ನು ಅರಿತು ಉತ್ತಮ ನಾಗರಿಕನಾಗಬೇಕೆಂದು ನ್ಯಾಯವಾದಿ ಸಂತೋಷ ಬಗಲಿ ದೇಸಾಯಿ ಉಪನ್ಯಾಸ ನೀಡಿದರು. ಭಾರತದ ಸಂವಿಧಾನ ಒಂದು ಪವಿತ್ರ ಗ್ರಂಥವಾಗಿದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಭಾರತ ಸಂವಿಧಾನ ಎಲ್ಲರ ಒಳಿತು ಬಯಸುವ ಸರ್ವಶ್ರೇಷ್ಠ ಕೃತಿಯಾಗಿದೆ ಎಂದರು. ಮತದಾನದ ತರಬೇತಿದಾರ ಅಗಸ್ಟಿನ ಕಾಳೆ ಮಾತನಾಡಿ, ಮೊಬೈಲನಲ್ಲಿಮತದಾರರ ಹೆಸರು ನೋಂದಾಯಿಸುವ ವಿಧಾನದ ಬಗ್ಗೆ ಮಾಹಿತಿ ನೀಡಿದರು. ದಾಂಡೇಲಿಯ ತಹಸೀಲ್ದಾರ್‌ ಶೈಲೇಶ್‌ ಪರಮಾನಂದ ಮಾತನಾಡಿ, ಪ್ರತಿಯೊಬ್ಬರು ತಪ್ಪದೇ ಮತದಾನದ ಪಟ್ಟಿಯಲ್ಲಿಹೆಸರು ನೊಂದಾಯಿಸಿ ಕೊಳ್ಳಬೇಕೆಂದು ತಿಳಿಸಿದರು. ಸಂಸ್ಥೆ ಅಧ್ಯಕ್ಷ ಟಿ.ಎಸ್‌.ಸೊಗಾಂವಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧ್ಯಾಪಕ ರೆಜಿನಾ ಡಿಸೋಜಾ ಸ್ವಾಗತಿಸಿದರು. ಶಿಕ್ಷಕಿ ಸೈನಿ ಚಟ್ಲಾನಿರೂಪಿಸಿದರು. ವಿನ್ಸೆಂಟ ಫರ್ನಾಂಡಿಸ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ