ಆ್ಯಪ್ನಗರ

ಒತ್ತಡದ ಮಧ್ಯೆ ಕ್ರೀಡೆಗೆ ಒತ್ತು ಶ್ಲಾಘನೀಯ

ಅಂಕೋಲಾ: ಸಮಾಜದ ಮುಖ್ಯವಾಹಿನಿಯಲ್ಲಿಕ್ಷಣ ಕ್ಷಣದ ವಿದ್ಯಮಾನದ ಮೇಲೆ ಕಣ್ಣಿಡುತ್ತಾ ಕಾರ್ಯ ನಿರ್ವಹಿಸುವ ಅಧಿಕಾರಿಗಳು, ಪತ್ರಕರ್ತರು ತಮ್ಮ ಒತ್ತಡದ ನಡುವೆ ಕಾ¿åರ್‍ ನಿರ್ವಹಿಸುವ ಸಂದರ್ಭದಲ್ಲಿಸೌಹಾರ್ದಯುತ ಕ್ರಿಕೆಟ್‌ ಪಂದ್ಯಾವಳಿ ಮೂಲಕ ಚೈತನ್ಯದ ಜತೆಗೆ ಸಾಮರಸ್ಯಕ್ಕೆ ಬೆಸುಗೆಯಾಗಿ ಪಂದ್ಯಾವಳಿ ಆಯೋಜಿಸಿರುವುದು ಶ್ಲಾಘನೀಯ ಎಂದು ತಾಲೂಕು ದಂಡಾಧಿಕಾರಿ ಮೇಘರಾಜ್‌ ನಾಯ್ಕ ಹೇಳಿದರು.

Vijaya Karnataka 28 Jan 2020, 5:00 am
ಅಂಕೋಲಾ: ಸಮಾಜದ ಮುಖ್ಯವಾಹಿನಿಯಲ್ಲಿಕ್ಷಣ ಕ್ಷಣದ ವಿದ್ಯಮಾನದ ಮೇಲೆ ಕಣ್ಣಿಡುತ್ತಾ ಕಾರ್ಯ ನಿರ್ವಹಿಸುವ ಅಧಿಕಾರಿಗಳು, ಪತ್ರಕರ್ತರು ತಮ್ಮ ಒತ್ತಡದ ನಡುವೆ ಕಾ¿åರ್‍ ನಿರ್ವಹಿಸುವ ಸಂದರ್ಭದಲ್ಲಿಸೌಹಾರ್ದಯುತ ಕ್ರಿಕೆಟ್‌ ಪಂದ್ಯಾವಳಿ ಮೂಲಕ ಚೈತನ್ಯದ ಜತೆಗೆ ಸಾಮರಸ್ಯಕ್ಕೆ ಬೆಸುಗೆಯಾಗಿ ಪಂದ್ಯಾವಳಿ ಆಯೋಜಿಸಿರುವುದು ಶ್ಲಾಘನೀಯ ಎಂದು ತಾಲೂಕು ದಂಡಾಧಿಕಾರಿ ಮೇಘರಾಜ್‌ ನಾಯ್ಕ ಹೇಳಿದರು.
Vijaya Karnataka Web the emphasis on sports amidst stress is commendable
ಒತ್ತಡದ ಮಧ್ಯೆ ಕ್ರೀಡೆಗೆ ಒತ್ತು ಶ್ಲಾಘನೀಯ


ಅವರು ಪಟ್ಟಣದ ಜೈಹಿಂದ ಮೈದಾನದಲ್ಲಿಕಾರ್ಯನಿರತ ಪತ್ರಕರ್ತರ ಸಂಘ ಅಂಕೋಲಾ ಇವರ ಆಶ್ರಯದಲ್ಲಿಆಯೊಜಿಸಲಾಗಿದ್ದ ಗಣರಾಜ್ಯೋತ್ಸವ ಕಪ್‌- 2020 ಕ್ರಿಕೆಟ್‌ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಪಿ.ವೈ.ಸಾವಂತ ಮಾತನಾಡಿ, ಗಣರಾಜ್ಯೋತ್ಸವದ ನಿಮಿತ್ತ ನಡೆದ ಕ್ರಿಕೆಟ್‌ ಪಂದ್ಯಾವಳಿಯು ಅಂಕೋಲಾದ ಜನತೆಯಲ್ಲಿಹೊಸ ಕುತೂಹಲವನ್ನು ಸೃಷ್ಟಿಸಿ, ಹಬ್ಬದ ಸಂದರ್ಭದಲ್ಲಿಕ್ರೀಡಾ ರಸದೌತಣ ನೀಡುತ್ತಲಿರುವುದು ಸಂತಸ ತಂದಿದೆ ಎಂದರು.

ಕ್ರೀಡಾ ಮೈದಾನ ಉದ್ಘಾಟಿಸಿ ದ ಕೆಪಿಸಿಸಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಮಾತನಾಡಿ, ಸಮಾಜದ ಕಳಕಳಿಯ ಕಣ್ಣಾಗಿ ಕಾರ್ಯನಿರ್ವಹಿಸುವ ಅಂಕೋಲಾದ ಪತ್ರಕರ್ತರು, ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಮಾದರಿ ಎಂದರು.

ಕರಾವಳಿ ಕಾವಲು ಪಡೆಯ ಪೊಲೀಸ್‌ ನೀರಿಕ್ಷಕ ಶ್ರೀಧರ ಎಸ್‌.ಆರ್‌, ಪುರಸಭೆಯ ಮುಖ್ಯಾಧಿಕಾರಿ ಬಿ. ಪ್ರಹ್ಲಾದ, ಲೊಕೋಪಯೋಗಿ ಇಲಾಖೆಯ ಅಭಿಯಂತರ ರಾಮು ಅರ್ಗೆಕರ, ತಾಪಂನ ಯೋಜನಾಧಿಕಾರಿ ಸುನೀಲ, ಅಗಸೂರು ಗ್ರಾಪಂ ಸದಸ್ಯ ಗೋಪು ನಾಯಕ. ಅಡ್ಲೂರು, ಪತ್ರಕರ್ತರಾದ ವಾಸುದೇವ ಗುನಗಾ, ನಾಗರಾಜ್‌ ಮಂಜಗುಣಿ ಮಾತನಾಡಿದರು.

ಸೌಹಾರ್ದಯುತ ಕ್ರಿಕೆಟ್‌ ಪಂದ್ಯಾವಳಿಯಲ್ಲಿಕಂದಾಯ ಇಲಾಖೆ, ಪೊಲೀಸ್‌ ಇಲಾಖೆ ಹಾಗೂ ಕರಾವಳಿ ಕಾವಲು ಪೊಲೀಸ್‌ ಪಡೆ, ಪತ್ರಕರ್ತರ ಸಂಘ ಅಂಕೋಲಾದ ತಂಡಗಳು ಭಾಗವಹಿಸಿದ್ದವು.

ರಾಘು ಕಾಕರಮಠ ಸ್ವಾಗತಿಸಿದರು. ಸುಭಾಷ ಕಾರೇಬೈಲ ನಿರೂಪಿಸಿದರು. ಅರುಣ ಶೆಟ್ಟಿ ವಂದಿಸಿದರು. ಶ್ರೀ ಕೋಟೆ ಮಾರುತಿ ಕ್ರಿಕೆಟರ್ಸನ ಮಂಜು ನಾಯ್ಕ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ