ಆ್ಯಪ್ನಗರ

ಶಿವಧನುಸ್ಸು ಎತ್ತಿದವರಿಗೆ ಹೂಮಾಲೆ: ಗೋಕರ್ಣದಲ್ಲೊಂದು ಸೀತಾ ಸ್ವಯಂವರ

ಗೋಕರ್ಣದ ಪರಶುರಾಮ ದೇವಸ್ಥಾನದ ಅರ್ಚಕ ಶ್ರೀಧರ ಭಟ್‌ ಮತ್ತು ಮಮತಾ ದಂಪತಿಯ ಪುತ್ರಿ ನಿಶಾ ಅವರ ವಿವಾಹವನ್ನು ಇತ್ತೀಚೆಗೆ ಗೋಕರ್ಣದವರೇ ಆದ ರಾಮದಾಸ ಕಾಶೀನಾಥ ಕಾಮತ್‌ ಮತ್ತು ಆಶಾ ದಂಪತಿಯ ಪುತ್ರ ಗಿರೀಶ ಅವರ ಜತೆ ಏರ್ಪಡಿಸಲಾಗಿತ್ತು.

Vijaya Karnataka 26 May 2019, 11:24 am
ಕಾರವಾರ : ಇಲ್ಲಿನ ಗೋಕರ್ಣದಲ್ಲಿ ನಡೆದ ವಿವಾಹವೊಂದು ಸೀತಾ ಕಲ್ಯಾಣವನ್ನು ಸ್ಮರಣೆಗೆ ತಂದಿತು. ಶ್ರೀರಾಮನ ರೀತಿಯಲ್ಲಿ ಶಿವಧನುಸ್ಸನ್ನು ಎತ್ತಿದ ವರನಿಗೆ ವಧು ಹೂಮಾಲೆ ಹಾಕಿದಳು.

ಗೋಕರ್ಣದ ಪರಶುರಾಮ ದೇವಸ್ಥಾನದ ಅರ್ಚಕ ಶ್ರೀಧರ ಭಟ್‌ ಮತ್ತು ಮಮತಾ ದಂಪತಿಯ ಪುತ್ರಿ ನಿಶಾ ಅವರ ವಿವಾಹವನ್ನು ಇತ್ತೀಚೆಗೆ ಗೋಕರ್ಣದವರೇ ಆದ ರಾಮದಾಸ ಕಾಶೀನಾಥ ಕಾಮತ್‌ ಮತ್ತು ಆಶಾ ದಂಪತಿಯ ಪುತ್ರ ಗಿರೀಶ ಅವರ ಜತೆ ಏರ್ಪಡಿಸಲಾಗಿತ್ತು.

ವಧುವಿನ ಪಾಲಕರು ತಮ್ಮ ಪುತ್ರಿಯ ವಿವಾಹ ಸೀತಾ ಕಲ್ಯಾಣದ ರೀತಿ ನಡೆಯಬೇಕು ಎಂಬ ಇಚ್ಛೆ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಈ ಏರ್ಪಾಟುಗಳನ್ನು ಕೈಗೊಳ್ಳಲಾಗಿತ್ತು. ವಿವಾಹ ಮಂಟಪದ ಬಳಿ ಶಿವಧನಸ್ಸಿನ ಮಾದರಿಯೊಂದನ್ನು ಇಡಲಾಗಿತ್ತು. ಕೆಲ ಅವಿವಾಹಿತ ಯುವಕರು ಮೊದಲು ಧನಸ್ಸನ್ನು ಹೆದೆಯೇರಿಸಲು ಹೋಗಿ ವಿಫಲರಾದರು. ಬಳಿಕ ವರ ಗಿರೀಶ್‌ ಬಂದು ಧನಸ್ಸನ್ನು ಹೆದೆಯೇರಿಸಿದಾಗ ವಧು ನಿಶಾ ಅವರು ಗಿರೀಶ್‌ ಕೊರಳಿಗೆ ಮಾಲೆ ಹಾಕಿದರು. ವಿಶಿಷ್ಟವಾಗಿ ನಡೆದ ಈ ವಿವಾಹಕ್ಕೆ ಸಾವಿರಾರು ಜನ ಸಾಕ್ಷಿಯಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ