ಆ್ಯಪ್ನಗರ

ಸೌಮ್ಯ ಜೀವಿ ರಾಮು ದಿಗಂಬರ ನಾಯ್ಕರ ಒಡನಾಡಿ

ಕಾರವಾರ : ಮನುಷ್ಯನನ್ನು ಕಂಡರೆ ಮಾರು ದೂರ ಓಡುವ ಕಾಡು ಹಂದಿ ಇಲ್ಲಿನಿತ್ಯವೂ ಕೈ ತುತ್ತು ತಿನ್ನುತ್ತ ನಿಸರ್ಗದ ನಿಯಮಗಳಿಗೆ ಸವಾಲು ಎಸೆದಿದೆ. ಮನುಷ್ಯತ್ವಕ್ಕೆ ಮಾರು ಹೋಗದ ಜೀವ ಸಂಕುಲವಿಲ್ಲಎಂಬ ನುಡಿಗಟ್ಟಿಗೆ ನಿದರ್ಶನ ನೀಡಿದೆ.

Vijaya Karnataka 11 Nov 2019, 5:00 am
ಕಾರವಾರ : ಮನುಷ್ಯನನ್ನು ಕಂಡರೆ ಮಾರು ದೂರ ಓಡುವ ಕಾಡು ಹಂದಿ ಇಲ್ಲಿನಿತ್ಯವೂ ಕೈ ತುತ್ತು ತಿನ್ನುತ್ತ ನಿಸರ್ಗದ ನಿಯಮಗಳಿಗೆ ಸವಾಲು ಎಸೆದಿದೆ. ಮನುಷ್ಯತ್ವಕ್ಕೆ ಮಾರು ಹೋಗದ ಜೀವ ಸಂಕುಲವಿಲ್ಲಎಂಬ ನುಡಿಗಟ್ಟಿಗೆ ನಿದರ್ಶನ ನೀಡಿದೆ.
Vijaya Karnataka Web the gentle creature is the companion of ramu digambara naikkara
ಸೌಮ್ಯ ಜೀವಿ ರಾಮು ದಿಗಂಬರ ನಾಯ್ಕರ ಒಡನಾಡಿ


ಹೌದು, ಹುಲಿ ಸಿಂಹಗಳಂತಹ ಕ್ರೂರ ವನ್ಯಜೀವಿಗಳನ್ನು ಸಹ ಮನುಷ್ಯ ಪಳಗಿಸಿರುವುದಕ್ಕೆ ಸಾವಿರಾರು ಉದಾಹರಣೆಗಳಿವೆ. ಆದರೆ ಕಾಡುಹಂದಿ ಮನುಷ್ಯನ ಹತ್ತಿರ ಸುಳಿಯುವುದೇ ಅಪರೂಪ. ಮಲೆನಾಡಿನ ಭತ್ತದ ಗದ್ದೆ, ಕೃಷಿ ಭೂಮಿಯಲ್ಲಿದಾಂಗುಡಿ ಇಟ್ಟು ನಷ್ಟವನ್ನು ಉಂಟು ಮಾಡುವ ಇವುಗಳನ್ನು ಕಂಡರೆ ಇಲ್ಲಿನ ಜನಕ್ಕೂ ಅಷ್ಟಕ್ಕಷ್ಟೇ.

ಆದರೆ ಕಾರವಾರ ತಾಲೂಕಿನ ಮಾಜಾಳಿಯಲ್ಲಿಕಾಡು ಹಂದಿಯೊಂದು ಸ್ಥಳೀಯರಾದ ದಿಗಂಬರ ನಾಯ್ಕ ಎಂಬುವವರ ಸ್ನೇಹ ಸಂಪಾದಿಸಿದೆ. ದಿಗಂಬರ ನಾಯ್ಕರು ನಿತ್ಯವೂ ಈ ಕಾಡು ಹಂದಿಗೆ ತಮ್ಮ ಕೈಯ್ಯಾರೆ ಆಹಾರ ನೀಡುತ್ತಾರೆ. ಬಗೆ ಬಗೆಯ ತಿಂಡಿ ತಿನಿಸುಗಳನ್ನು ಸವಿದು, ಚಿರ ಪರಿಚಿತರಂತೆ ಯಾವ ಆತಂಕ, ಗಡಿಬಿಡಿಯಿಲ್ಲದೇ ಈ ಹಂದಿ ಕಾಡಿಗೆ ಮರಳುವ ದೃಶ್ಯ ಸೋಜಿಗ ಮೂಡಿಸುತ್ತದೆ.

ಹೇಗೆ ಬೆಳೀತು ಸ್ನೇಹ : ಕೈಗಾ ಗೇಟ್‌ನಲ್ಲಿಸೆಕ್ಯುರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿರುವ ದಿಗಂಬರ ನಾಯ್ಕ ಅವರ ಊರು ಮಾಜಾಳಿ ಬಳಿಯ ಘೋಟ್ನೆಬಾಗ. ದಿಗಂಬರ ಅವರ ಮನೆ ಅಲ್ಲಿನ ಅರಣ್ಯದ ಸರಹದ್ದಿಗೆ ಹೊಂದಿಕೊಂಡಿದೆ.

ಒಮ್ಮೆ ಮನೆಯಲ್ಲಿಉಳಿದಿದ್ದ ಆಹಾರವನ್ನು ದಿಗಂಬರ ಅವರು ಬೇಲಿ ಅಂಚಿಗೆ ಚೆಲ್ಲಿದ್ದರು. ಆಗ ಕಾಡು ಹಂದಿ ಬಂದು ತಿಂದು ಹೋಗುವುದು ಕಂಡಿತು. ಈ ಘಟನೆ ಎರಡು ಮೂರು ಸಲ ಮರುಕಳಿಸಿದಾಗ ದಿಗಂಬರ ಅವರ ಮನಸ್ಸು ಕರಗಿದೆ. ಕಾಡಿನಲ್ಲಿಆಹಾರದ ಕೊರತೆಯಿಂದ ಈ ಹಂದಿ ಆಹಾರ ಅರಸುತ್ತಿದೆ ಎಂಬುದನ್ನು ಅರಿತು, ಬೇಲಿಯಂಚಿಗೆ ಆಹಾರವಿಡುವ ಕ್ರಮವನ್ನು ದಿನವೂ ಮುಂದುವರೆಸಿದ್ದಾರೆ.

ಬರಬರುತ್ತಾ ಹಂದಿಗೆ ದಿಗಂಬರ ಅವರ ಮೇಲೆ ವಿಶ್ವಾಸ ಮೂಡಿದೆ. ಈಗ ಆಹಾರವನ್ನು ನೆಲದ ಮೇಲೆ ಹಾಕುವ ಅಗತ್ಯವಿಲ್ಲ. ದಿಗಂಬರ ಕೈಯಲ್ಲಿಇರುವಾಗಲೇ ಹಂದಿ ಅದನ್ನು ತಿಂದು ಹೋಗುತ್ತದೆ. ಅಕ್ಷರಶಃ ದಿಗಂಬರರ ಕೈ ತುತ್ತನ್ನೇ ಪಡೆದುಕೊಳ್ಳುತ್ತದೆ.

ಹೀಗೆ ವಿಶ್ವಾಸಕ್ಕೆ ಪಾತ್ರವಾದ ಕಾಡು ಹಂದಿಗೆ ದಿಗಂಬರ ಅವರು ರಾಮು ಎಂದು ಹೆಸರಿಟ್ಟಿದ್ದಾರೆ !

''ರಾಮು ಒಂದು ಕಾಡು ಮೃಗ ಎಂಬುದಿರಲಿ, ಪ್ರಾಣಿ ಎಂಬ ಭಾವನೆಯೂ ನನಗೆ ಬರುವುದಿಲ್ಲ. ಎಷ್ಟೋ ದಿನದ ಒಡನಾಡಿಯಂತೆ ಅನಿಸುತ್ತಾನೆ. ಎಷ್ಟು ದಿನ ಈ ಅನುಬಂಧ ಮುಂದುವರೆಯುತ್ತದೋ, ಅಷ್ಟು ದಿನ ಆತ ನನ್ನ ಅತಿಥಿ'' ಎಂದು ದಿಗಂಬರ ನಾಯ್ಕ ಹೇಳುತ್ತಾರೆ.

ಸೌಮ್ಯತೆ ನಿಸರ್ಗಕ್ಕೇ ಸವಾಲು : ಸಾಮಾನ್ಯವಾಗಿ ಕಾಡು ಹಂದಿ ಒಂಟಿಯಾಗಿದ್ದರೆ ಅತ್ಯಂತ ಅಪಾಯಕಾರಿ ಜೀವಿ. ಎದುರಿಗೆ ಸಿಗುವ ಮನುಷ್ಯನನ್ನು ತನ್ನ ಕೋರೆಯ ಮೂಲಕ ಸಿಗಿದು ಹಾಕಿದ ನೂರಾರು ಘಟನೆಗಳು ಜಿಲ್ಲೆಯ ಕರಾವಳಿ ಮತ್ತು ಮಲೆನಾಡಿನ ಭಾಗದಲ್ಲಿನಡೆದಿವೆ. ಆದರೆ ದಿಗಂಬರರ ರಾಮು ಒಂಟಿಯಾಗಿದ್ದರೂ, ಕ್ರೂರವಾಗಿ ವರ್ತಿಸದೇ, ಸೌಮ್ಯವಾಗಿರುವುದು ನಿಸರ್ಗಕ್ಕೊಂದು ಸವಾಲೇ ಸರಿ ಎಂದು ವನ್ಯಜೀವಿ ತಜ್ಞರು ಅಭಿಪ್ರಾಯ ಪಡುತ್ತಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ