ಆ್ಯಪ್ನಗರ

ಶಿವಾಜಿ ಮಹಾರಾಜರ ಬೃಹತ್‌ ಪ್ರತಿಮೆ ಅನಾವರಣ

ದಾಂಡೇಲಿ : ನಗರದ ಸೋಮಾನಿ ವೃತ್ತದಲ್ಲಿ ಶನಿವಾರ 13ಅಡಿ ಎತ್ತರದ ಅಶ್ವಾರೂಢ ಬೃಹತ್‌ ಶಿವಾಜಿ ಮಹಾರಾಜರ ಪ್ರತಿಮೆ ಲೋಕಾರ್ಪಣೆ ಮಾಡಲಾಯಿತು.

Vijaya Karnataka 14 Jan 2019, 5:00 am
ದಾಂಡೇಲಿ : ನಗರದ ಸೋಮಾನಿ ವೃತ್ತದಲ್ಲಿ ಶನಿವಾರ 13ಅಡಿ ಎತ್ತರದ ಅಶ್ವಾರೂಢ ಬೃಹತ್‌ ಶಿವಾಜಿ ಮಹಾರಾಜರ ಪ್ರತಿಮೆ ಲೋಕಾರ್ಪಣೆ ಮಾಡಲಾಯಿತು.
Vijaya Karnataka Web KWR-13-DND1 A


ಇದಕ್ಕೂ ಮುನ್ನ ನಗರದ ಮುಖ್ಯ ಬೀದಿಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯ ಭವ್ಯ ಮೆರವಣೆಗೆ ನಡೆಯಿತು. ಮೆರವಣಿಗೆಯಲ್ಲಿ ಸಾವಿರಾರು ಅಭಿಮಾನಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕ್ಯಾಸಲ್‌ರಾಕ್‌ನ ಫರೀದಾ ಮಕಾಂದಾರ ನೇತೃತ್ವದಲ್ಲಿ ಶಿವ್‌ ಗರಜಾನಾ, ಢೋಲ ತಾಶಾ, ಪಥಕ ರೋಮ್‌ಹರ್ಷಕ ಮುಂತಾದ ದೃಶ್ಯಾವಳಿಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದವು.

ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ಎಂ.ಎಲ್‌.ಸಿ ಎಸ್‌.ಎಲ್‌.ಘೋಟ್ನೆಕರ ಮಾತನಾಡಿ, ಹಿಂದೂ ಸಾಮ್ರಾಜ್ಯ ಸ್ಥಾಪಕರಾದ ಶಿವಾಜಿ ಮಹಾರಾಜರ ಪ್ರತಿಮೆ ದಾಂಡೇಲಿಯಲ್ಲಿ ಪ್ರತಿಷ್ಠಾಪನೆಗೆ ಸಚಿವ ಆರ್‌.ವಿ.ದೇಶಪಾಂಡೆ ಹಾಗೂ ನಮ್ಮೆಲ್ಲರ ಸತತ ಪ್ರಯತ್ನದಿಂದ ಸರಕಾರದಿಂದ ಅನುಮತಿ ಪಡೆಯಲು ಸಾಧ್ಯವಾಗಿದೆ ಎಂದರು.

ಬೆಳಗಾವಿಯ ಯುವತಿ ಶುಭಾಂಗಿ ದೇವಟೆ ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಮಾತನಾಡಿದರು. ದಾಂಡೇಲಿ ಕ್ಷ ತ್ರೀಯ ಮರಾಠಾ ಸಮಾಜದ ಅಧ್ಯಕ್ಷ ಡಾ.ಮೋಹನ ಪಾಟೀಲ ಉಪಸ್ಥಿತರಿದ್ದರು. ನಗರದ ಕ್ಷ ತ್ರೀಯ ಮರಾಠಾ ಸಮಾಜ, ಜಿಜಾಮಾತಾ ಮಹಿಳಾ ಮಂಡಳ ಹಾಗೂ ಗಾಂಧಿನಗರದ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಯುವಕ ಮಂಡಳದ ಶ್ರೀನಾಥ ಮಿರಾಶಿ ಅವರ ನೇತೃತ್ವದಲ್ಲಿ ಮಂಡಳದ ಎಲ್ಲ ಪದಾಧಿಕಾರಿಗಳು, ಸದಸ್ಯರು ಶಿವಾಜಿ ಪ್ರತಿಮೆ ಅನಾವರಣಕ್ಕೆ ಸಹಕರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ