ಆ್ಯಪ್ನಗರ

ಬಹುಮತ ಸಾಲದು, ಸರ್ವಮತ ಪಡೆಯಬೇಕು

ಮುಂಡಗೋಡ: ಈ ಬಾರಿ ಬಿಜೆಪಿಯ 300ಕ್ಕೂ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ. ಎನ್‌ಡಿಎ 400ಕ್ಕೂ ಹೆಚ್ಚು ಸ್ಥಾನಗಳನ್ನು ನಾವು ಗೆಲ್ಲಲಿದ್ದೇವೆ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.

Vijaya Karnataka 21 May 2019, 5:00 am
ಮುಂಡಗೋಡ: ಈ ಬಾರಿ ಬಿಜೆಪಿಯ 300ಕ್ಕೂ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ. ಎನ್‌ಡಿಎ 400ಕ್ಕೂ ಹೆಚ್ಚು ಸ್ಥಾನಗಳನ್ನು ನಾವು ಗೆಲ್ಲಲಿದ್ದೇವೆ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
Vijaya Karnataka Web KWR-20MND1-


ಪಟ್ಟಣದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಅಭಿನಂದನಾ ಸಭೆಯಲ್ಲಿ ಅವರು ಮಾತನಾಡಿದರು. ಸಂಘಟನೆ ಯಾವಾಗಲೂ ನಿಂತ ನೀರಾಗಬಾರದು. ಹರಿಯುವ ನೀರಾಗಬೇಕು. ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 16ಲಕ್ಷ ಮತದಾರರಿದ್ದು ಇವರಲ್ಲಿ 11.50ಲಕ್ಷ ಜನ ಮತ ಚಲಾಯಿಸಿದ್ದಾರೆ. ಇನ್ನುಳಿದವರನ್ನು ನಾವು ವಿಶ್ವಾಸಕ್ಕೆ ತೆಗೆದುಕೋಳ್ಳಬೇಕಾಗಿದೆ. ನಮ್ಮದು ಬಹುಮತ ಪಡೆದರೆ ಸಾಲದು ಸರ್ವಮತ ಪಡೆಯುವಂತಾಗಬೇಕು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರು ನಮ್ಮ ಜತೆಗೆ ಕಾರ್ಯನಿರ್ವಹಿಸುವಂತೆ ಮಾಡಬೇಕಿದೆ. ಇದರಿಂದ ಪಕ್ಷ ಹೆಚ್ಚು ಸುಭದ್ರವಾಗಲಿದೆ ಎಂದರು.

ಜೂನ್‌ ನಂತರದಲ್ಲಿ ಕರ್ನಾಟಕ ಸರಕಾರ ಇಚ್ಛಾಮರಣ ಹೊಂದುತ್ತದೆ. ಮೈತ್ರಿ ಪಕ್ಷ ದವರೆ ಕಿತ್ತಾಡಿಕೊಂಡು ತಾವೆ ಸರಕಾರವನ್ನು ಕೆಡವುತ್ತಾರೆ. ಯಡಿಯೂರಪ್ಪ ಹಾಗೂ ಈಶ್ವರಪ್ಪ ಸಮಿಶ್ರ ಸರಕಾರವನ್ನು ಬೀಳಿಸುವ ಅವಶ್ಯಕತೆಯಿಲ್ಲ. ಜುಲೈ,ಅಗಷ್ಟ ತಿಂಗಳಲ್ಲಿ ವಿಧಾನ ಸಭೆಗೆ ಚುನಾವಣೆ ನಡೆಯುವ ಸಾಧ್ಯ್ಯತೆಗಳಿದ್ದು ಮರಳಿ ಚುನಾವಣೆ ನಡೆದರೆ ಬಿಜೆಪಿಯಿಂದ ಯಾರೇ ಸ್ಪರ್ಧಿಸಿದರೂ ಅವರ ಗೆಲುವಿಗಾಗಿ ನಾವು ಕಾರ್ಯನಿರ್ವಹಿಸಬೇಕು ಎಂದರು.

ಲೋೕಕಸಭಾ ಚುನಾವಣೆ ಮತದಾನ ಮುಗಿದ ನಂತರ ಕಾಂಗ್ರೆಸ್‌ ಪಕ್ಷ ಜಿಲ್ಲೆಯಲ್ಲಿ ಬಲಿಷ್ಠಗೋಂಡಿದೆ ಇನ್ನೂ ಕೆಲವೆ ತಿಂಗಳುಗಳಲ್ಲಿ ಗ್ರಾಮ ಪಂಚಾಯತ ಚುನಾವಣೆ ಬರಲಿದೆ ಎಂಎಲ್‌ಸಿ ಚುನಾವಣೆ ಆ ವೇಳೆಯಲ್ಲಿ ಕಾಂಗ್ರೆಸ್‌ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸುತ್ತಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ದ ಅಭ್ಯರ್ಥಿ ಇರಲಿಲ್ಲ ಮೇಲ್ಗಡೆ ಏನೇನೋ ನಡೆದಿತ್ತು. ಜಿಲ್ಲೆಯಲ್ಲಿ ಗೇಲ್ಲಲು ಸಾಧ್ಯವಿಲ್ಲ ಎಂಬುದನ್ನು ತಿಳಿದಿದ್ದ ಕಾಂಗ್ರೆಸ್‌ ಜೆಡಿಎಸ್‌ಗೆ ಈ ಸ್ಥಾನ ಬಿಟ್ಟು ಕೋಟ್ಟಿದ್ದರು. ಆದರೆ ಪರದೆಯ ಹಿಂದುಗಡೆ ಏನೇನೂ ನಡೆಯಿತು ಎಂಬುದು ಯಾರಿಗೂ ಗೋತ್ತಿಲ್ಲ ರಾಜಕಾರಣ ಮಾಡುವುದು ಅಷ್ಟು ಸುಲಭವಲ್ಲ ಪರದೆಯ ಹಿಂಬದಿಯಲ್ಲಿ ಕಾಣದ ಕೈಗಳು ಸಹಾಯ ಮಾಡಿವೆ ಅವರೇಲ್ಲರಿಗೂ ನಾನು ಅಭಿನಂಧಿಸುತ್ತೇನೆ ಎಂದರು. ಮಾಜಿ ಶಾಸಕ ವಿ.ಎಸ್‌.ಪಾಟೀಲ ಮಾತನಾಡಿ ಲೋಕಸಭೆಯ ಚುನಾವಣೆಯ ಸಮೀಕ್ಷೆ ನಾವೆಲ್ಲರೂ ನೋಡಿದ್ದೇವೆ. 23ಕ್ಕೆ ವಿಜಯೋತ್ಸವ ಆಚರಿಸುವುದು ಶತಸಿದ್ಧ. ಮುಂದೆ ರಾಜ್ಯದಲ್ಲಿ ಬದಲಾವಣೆಯಾಗುತ್ತದೆ. ಲೋಕಸಭಾ ಚುನಾವಣೆಯಲ್ಲಿ ಮುಂಡಗೋಡ ತಾಲೂಕಿನಲ್ಲಿ ಬಿಜೆಪಿಗೆ ಹೆಚ್ಚು ಮತ ಬೀಳುತ್ತದೆ. ಆದರೆ ವಿಧಾನ ಸಭೆ ಚುನಾವಣೆಯಲ್ಲಿ ಕಡಿಮೆ ಮತಗಳು ಬಿಜೆಪಿಗೆ ಬೀಳುತ್ತವೆ. ಆದ್ದರಿಂದ ಮುಂದಿನ ದಿನಗಳಲ್ಲಿ ನಾವೆಲ್ಲರೂ ನಮ್ಮ ಬೂತ್‌ನಲ್ಲಿ ಹೆಚ್ಚು ಮತಗಳು ಬೀಳುವಂತೆ ಪಕ್ಷ ಸಂಘಟನೆ ಮಾಡಬೇಕಿದೆ ಎಂದರು.

ಮುಖಂಡರಾದ ಎಲ್‌.ಟಿ.ಪಾಟೀಲ, ಉಮೇಶ ಬಿಜಾಪೂರ, ನಾಗಭೂಷಣ ಹಾವಣಗಿ, ಬಸವರಾಜ ಓಶೀಮಠ, ಅಶೋಕ ಚಲವಾದಿ, ರಾಮಕೃಷ್ಣ ಮೂಲಿಮನಿ, ಗುಡ್ಡಪ್ಪ ಕಾತೂರ, ರೇಖಾ ಹೆಗಡೆ ಸೇರಿದಂತೆ ಮುಂತಾದವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ