ಆ್ಯಪ್ನಗರ

ದಾಂಪತ್ಯ ವಿರಸದಿಂದ ನಕಾರಾತ್ಮಕ ಪರಿಣಾಮ

ಶಿರಸಿ : ವಿವಾಹ ಎಂಬುದು ಒಂದು ಪವಿತ್ರವಾದ ಪ್ರಕ್ರಿಯೆ. ಆದರೆ ಇಂದು ದಾಂಪತ್ಯ ಸಮಸ್ಯೆ ಸಾಮಾಜಿಕ ಪಿಡುಗು ಎನಿಸಿಕೊಂಡಿದೆ. ದಾಂಪತ್ಯ ವಿರಸ ಮಕ್ಕಳು ಹಾಗೂ ಇಡೀ ಕುಟುಂಬದ ಮೇಲೆ ಭಾರಿ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಶಿವಮೊಗ್ಗಾದ ಖ್ಯಾತ ಮನೋವೈದ್ಯ ಡಾ. ಕೆ.ಆರ್‌. ಶ್ರೀಧರ ಎಚ್ಚರಿಸಿದರು.

Vijaya Karnataka 13 Mar 2019, 5:00 am
ಶಿರಸಿ : ವಿವಾಹ ಎಂಬುದು ಒಂದು ಪವಿತ್ರವಾದ ಪ್ರಕ್ರಿಯೆ. ಆದರೆ ಇಂದು ದಾಂಪತ್ಯ ಸಮಸ್ಯೆ ಸಾಮಾಜಿಕ ಪಿಡುಗು ಎನಿಸಿಕೊಂಡಿದೆ. ದಾಂಪತ್ಯ ವಿರಸ ಮಕ್ಕಳು ಹಾಗೂ ಇಡೀ ಕುಟುಂಬದ ಮೇಲೆ ಭಾರಿ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಶಿವಮೊಗ್ಗಾದ ಖ್ಯಾತ ಮನೋವೈದ್ಯ ಡಾ. ಕೆ.ಆರ್‌. ಶ್ರೀಧರ ಎಚ್ಚರಿಸಿದರು.
Vijaya Karnataka Web the negative effect of infertility
ದಾಂಪತ್ಯ ವಿರಸದಿಂದ ನಕಾರಾತ್ಮಕ ಪರಿಣಾಮ


ನಗರದ ಅಜಿತಮನೋಚೇತನಾ ಸಂಸ್ಥೆಯ 22ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ದಾಂಪತ್ಯ ಸಾಮರಸ್ಯ ವಿಷಯವಾಗಿ ಉಪನ್ಯಾಸ ನೀಡಿದರು. ದಾಂಪತ್ಯ ಸಮರಸವಾಗಲು ಹಲವು ಅಂಶಗಳಿವೆ. ಹೊಂದಾಣಿಕೆ, ಉದ್ಯೋಗ, ಮಕ್ಕಳು, ಲೈಂಗಿಕತೆ, ವ್ಯಕ್ತಿತ್ವ, ನಿರೀಕ್ಷೆಗಳು ಮುಂತಾದ ವಿಷಯಗಳು ಮುಖ್ಯವಾಗುತ್ತವೆ ಎಂದರು.

ಸಂಸ್ಥೆಯ ಅಧ್ಯಕ್ಷ ಸುಧೀರ ಭಟ್‌ ಅಧ್ಯಕ್ಷ ತೆ ವಹಿಸಿದ್ದರು. ಅಜಿತಮನೋಚೇತನಾ ಸಂಸ್ಥೆಯ ಶಾಲೆಗೆ ಸರಕಾರದ ಬಿಸಿ ಊಟ ಇನ್ನೂ ಪ್ರಾರಂಭವಾಗಿಲ್ಲ. ಜೂನ್‌ ತಿಂಗಳಲ್ಲಿಯಾದರೂ ಒದಗಿಸಲಿ ಎಂದರು. ನಂತರ ನಡೆದ ಸಂವಾದದಲ್ಲಿ ಶಿಕ್ಷ ಣ ತಜ್ಞ ಕೇಶವಕೊರ್ಸೆ, ಸಾಂತ್ವನ ಕೇಂದ್ರದ ಸಂಧ್ಯಾ ಕುರ್ಡೇಕರ್‌, ಮಧುಮತಿ, ಜ್ಯೋತಿ ಪಾಲ್ಗೊಂಡರು. ಹುಬ್ಬಳ್ಳಿಯ ಮನೋವೈದ್ಯ ಡಾ.ಶ್ರೀನಿವಾಸ ಕುಲಕರ್ಣಿ ದಂಪತಿಯನ್ನು ಅಜಿತ ಮನೋಚೇತನಾ ಸಂಸ್ಥೆಯ ಉದಯ ಸ್ವಾದಿ ಮತ್ತು ವಿ.ಆರ್‌.ಹೆಗಡೆ ಸನ್ಮಾನಿಸಿದರು.

ವಿಕಾಸ ಶಾಲೆಯ ವಿಶೇಷ ಮಕ್ಕಳ ಯೋಗ ಪ್ರದರ್ಶನ ಗಮನ ಸೆಳೆಯಿತು. ಸವಣೂರಿನ ಡಾ.ಸುಕುಮಾರ ಶಾನಭಾಗ ಬಹುಮಾನ ವಿತರಿಸಿದರು. ಪಿಜಿಯೋಥೆರಪಿ ಉಪಕರಣಗಳನ್ನು ವಿಶೇಷಚೇತನ ಮಕ್ಕಳಿಗೆ ನೀಡಿದರು.

ಅಜಿತ ಮನೋಚೇತನಾ ಸಂಸ್ಥೆಯ ಕಾರ್ಯದರ್ಶಿ ಅನಂತ ಹೆಗಡೆ ಅಶೀಸರ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷ ಕಿ ಗೀತಾ ಗೌಡ ವಾರ್ಷಿಕ ವರದಿ ಮಂಡಿಸಿದರು. ಪರಿಮಳ ನೆನಪಿನ ಕಾಣಿಕೆ ನೀಡಿದರು. ಶಿಕ್ಷ ಕಿಯರಾದ ನರ್ಮದಾ, ಸುಮಿತ್ರಾ, ಪರಿಮಳಾ, ಶ್ಯಾಮಲಾ ಸಂಯೋಜನೆ ಮಾಡಿದರು. ಸಂಚಾಲಕ ವಿನಾಯಕ ಭಟ್‌ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ