ಆ್ಯಪ್ನಗರ

ಕಾಂಗ್ರೆಸ್‌ ಬೇಡ ಅಂತ ಇಡೀ ದೇಶದ ಜನರಿಗೆ ಅನಿಸಿದೆ: ಅನಂತ್‌ ಕುಮಾರ್‌ ಹೆಗಡೆ

"ಉಪಚುನಾವಣೆ ಯಾಕೆ ಬಂದಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್‌ ಬೇಡ ಎನ್ನುವುದು ಕಾಂಗ್ರೆಸ್‌ನಲ್ಲಿದ್ದವರಿಗಷ್ಟೇ ಅಲ್ಲದೇ ಇಡೀ ದೇಶದ ಜನರಿಗೆ ಅನಿಸಿದೆ. ದಿನದಿಂದ ದಿನಕ್ಕೆ ಕಾಂಗ್ರೆಸ್‌ ಕುಗ್ಗುತ್ತಿದೆ," - ಅನಂತ್‌ ಕುಮಾರ್‌ ಹೆಗಡೆ.

Vijaya Karnataka 29 Nov 2019, 6:04 pm
ಶಿರಸಿ (ಉತ್ತರ ಕನ್ನಡ): "ಕಾಂಗ್ರೆಸ್‌ನಲ್ಲಿದ್ದವರಿಗೂ ಕಾಂಗ್ರೆಸ್‌ ಪಕ್ಷ ಬೇಡವಾಗಿತ್ತು. ಅದನ್ನು ಹೇಳುವ ಸ್ಥಿತಿಯಲ್ಲಿರಲಿಲ್ಲ. ಆದರೆ ಸಮಯ ಬಂತು, ಹೀಗಾಗಿ ಒಂದಷ್ಟು ಮಂದಿ ಒಟ್ಟಾಗಿ ಸೇರಿ ಬಿಜೆಪಿ ಜತೆ ಕೈಜೋಡಿಸಿದರು. ಹೀಗಾಗಿ ಚುನಾವಣೆ ಬಂದಿದೆ," ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
Vijaya Karnataka Web Anant Kumar Hegde


ಉಪಚುನಾವಣೆಯ ಹಿನ್ನೆಲೆಯಲ್ಲಿ ತಾಲೂಕಿನ ದನಗನಹಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಶುಕ್ರವಾರ ಅವರು ಮಾತನಾಡಿದರು. "ಚುನಾವಣೆ ಯಾಕೆ ಬಂದಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್‌ ಬೇಡ ಎನ್ನುವುದು ಕಾಂಗ್ರೆಸ್‌ನಲ್ಲಿದ್ದವರಿಗಷ್ಟೇ ಅಲ್ಲದೇ ಇಡೀ ದೇಶದ ಜನರಿಗೆ ಅನಿಸಿದೆ. ದಿನದಿಂದ ದಿನಕ್ಕೆ ಕಾಂಗ್ರೆಸ್‌ ಕುಗ್ಗುತ್ತಿದೆ," ಎಂದರು.

ರಾಜಕಾರಣ ಇರುತ್ತದೆ ಹೋಗುತ್ತದೆ, ಇಲ್ಲಿ ಯಾರೂ ಶಾಶ್ವತವಲ್ಲ. ಊರುಗಳಲ್ಲಿ ಪರಸ್ಪರ ಜಿದ್ದಾಜಿದ್ದಿ ಹೊಂದದೇ ಸಣ್ಣಪುಟ್ಟ ಸಮಸ್ಯೆಗಳಿದ್ದರೂ ಬಗೆಹರಿಸಿಕೊಂಡು ಮುನ್ನಡೆಯಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ವಿವಿಧೆಡೆ ಪ್ರಚಾರ

ಇದೇ ಸಂದರ್ಭದಲ್ಲಿ ಮರಗುಂಡಿ, ಬನವಾಸಿ, ಮಾಳಂಜಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಸಂಸದರು ಮಾತನಾಡಿದರು. ನಂತರ ಮುಂಡಗೋಡ ತಾಲೂಕಿನ ಹುನಗುಂದ, ನಂದಿಕಟ್ಟಾ, ಇಂದೂರು, ಮುಂಡಗೋಡ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ