ಆ್ಯಪ್ನಗರ

ದೇವರ ಕಾಡುಗಳ ಸಂರಕ್ಷಣೆ ಅಗತ್ಯ

ಶಿರಸಿ : ಪಶ್ಚಿಮ ಘಟ್ಟ ಪ್ರದೇಶದಲ್ಲಿಹುಲಿದೇವರಬನ, ಚೌಡಿ ಕಾನು, ಭೂತನಕಾನು, ಜಟಕನ ಬನ ಹಾಗೂ ಔಷಧ ಸಸ್ಯಗಳ ವನಗಳು ಇದ್ದು ಈ ರೀತಿಯ ದೇವರ ಕಾಡುಗಳ ಸಂರಕ್ಷಣೆಯಿಂದ ನೈಸರ್ಗಿಕ ಅರಣ್ಯ ನಿರ್ಮಾಣ ಸಾಧ್ಯ ಎಂದು ಅರಣ್ಯ ಮಹಾವಿದ್ಯಾಲಯದ ಸಂಶೋಧಕ ಶ್ರೀಕಾಂತ ಗುನಗಾ ಹೇಳಿದರು.

Vijaya Karnataka 7 Jul 2020, 5:00 am
ಶಿರಸಿ : ಪಶ್ಚಿಮ ಘಟ್ಟ ಪ್ರದೇಶದಲ್ಲಿಹುಲಿದೇವರಬನ, ಚೌಡಿ ಕಾನು, ಭೂತನಕಾನು, ಜಟಕನ ಬನ ಹಾಗೂ ಔಷಧ ಸಸ್ಯಗಳ ವನಗಳು ಇದ್ದು ಈ ರೀತಿಯ ದೇವರ ಕಾಡುಗಳ ಸಂರಕ್ಷಣೆಯಿಂದ ನೈಸರ್ಗಿಕ ಅರಣ್ಯ ನಿರ್ಮಾಣ ಸಾಧ್ಯ ಎಂದು ಅರಣ್ಯ ಮಹಾವಿದ್ಯಾಲಯದ ಸಂಶೋಧಕ ಶ್ರೀಕಾಂತ ಗುನಗಾ ಹೇಳಿದರು.
Vijaya Karnataka Web 6SRS8_26
ಶಿರಸಿ ನೆಮ್ಮದಿ ಕುಟೀರದ ಆವರಣದಲ್ಲಿ ನವಗ್ರಹ ವನ ನಿರ್ಮಾಣಕ್ಕೆ ಸಸಿ ನೆಡಲಾಯಿತು.

ಅವರು ಶಿರಸಿಯ ನೆಮ್ಮದಿಕುಟೀರದಲ್ಲಿ ಯೂತ್‌ ಫಾರ್‌ ಸೇವಾ ಉತ್ತರ ಕನ್ನಡ ಮತ್ತು ಸುಭಾಶ್ಚಂದ್ರ ಭೋಸ ಕಾರ್ಯ ಪಡೆಯ ಆಶ್ರಯದಲ್ಲಿನಡೆದ ನವಗ್ರಹ ವನ ನಿರ್ಮಾಣ ಕಾರ್ಯಕ್ರಮದಲ್ಲಿಮಾತನಾಡಿದರು.

ಯೂತ್‌ ಫಾರ್‌ ಸೇವಾ ಪರಿಸರ ಸಂಯೋಜಕ ಉಮಾಪತಿ ಭಟ್ಟ ನವಗ್ರಹ ವನದ ಮಹತ್ವ ಮತ್ತು ಅವುಗಳ ಉಪಯೋಗ ತಿಳಿಸಿದರು.

ನವಗ್ರಹ ವನ ನಿರ್ಮಾಣದ ಜತೆಗೆ ಸಮುದ್ರಫಲ, ಕರಿಲಕ್ಕಿ, ಜಾಯಿಕಾಯಿ, ಲವಂಗ, ಮದ್ದಾಲೆ, ಅತ್ತಿ, ತಟ್ಟೆಲೆ ವಿವಿಧ ಜಾತಿಯ ಔಷಧಿ ಸಸ್ಯಗಳನ್ನು ನೆಡಲಾಯಿತು.

ನೆಮ್ಮದಿ ಕುಟೀರ ಸಮಿತಿಯ ಉಪಾಧ್ಯಕ್ಷ ವಿ.ಪಿ.ಹೆಗಡೆ ವೈಶಾಲಿ, ರಾಮದಾಸ ಪೈ ಹುಲೇಕಲ್‌ ಸುಭಾಶ್ಚಂದ್ರಭೋಸ್‌ ಕಾರ್ಯಪಡೆಯ ಪ್ರಮುಖ ಕೇಶವ ದೊಂಬೆ, ಭÜಗೀರಥ ಕೆ. ಮಹಾಲಿಂಗಣ್ಣನವರ್‌, ಗಣೇಶ ಎಸ್‌ ಶೇಟ್‌ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ