ಆ್ಯಪ್ನಗರ

ಜೇನು ಉಳಿದರೆ ಮನುಕುಲ ರಕ್ಷಣೆ

ಶಿರಸಿ : ಜೇನು ಸಾಕಾಣಿಕೆಯ ಸವಾಲುಗಳು ಮತ್ತು ಪರಿಹಾರ ಕುರಿತ ಕಾರ್ಯಾಗಾರ ನಗರದ ಹೊರವಲಯದ ದೇವನಿಲಯದಲ್ಲಿಸಂಘಟಿಸಲಾಗಿತ್ತು. ಮನು ಕುಲ ಉಳಿಯಬೇಕಾದರೆ ಜೇನು ಕುಲ ಉಳಿಸಬೇಕು ಎಂಬ ಸಂದೇಶ ಸಾರಲಾಯಿತು.

Vijaya Karnataka 28 Sep 2019, 5:00 am
ಶಿರಸಿ : ಜೇನು ಸಾಕಾಣಿಕೆಯ ಸವಾಲುಗಳು ಮತ್ತು ಪರಿಹಾರ ಕುರಿತ ಕಾರ್ಯಾಗಾರ ನಗರದ ಹೊರವಲಯದ ದೇವನಿಲಯದಲ್ಲಿಸಂಘಟಿಸಲಾಗಿತ್ತು. ಮನು ಕುಲ ಉಳಿಯಬೇಕಾದರೆ ಜೇನು ಕುಲ ಉಳಿಸಬೇಕು ಎಂಬ ಸಂದೇಶ ಸಾರಲಾಯಿತು.
Vijaya Karnataka Web 27SRS6_26


ಮಾವಿನಕೊಪ್ಪದ ಶ್ರೀಪಾದ ಭಟ್ಟ, ಯುವ ಜನಾಂಗ ಹೆಚ್ಚಿನ ಪ್ರಮಾಣದಲ್ಲಿಜೇನು ಕುಟುಂಬಗಳನ್ನು ಸಾಕಲು ಮುಂದಾಗಬೇಕು. ಜೇನು ಉಳಿದರೆ ಮಾತ್ರ ಮನು ಕುಲ ಉಳಿದೀತು ಎಂದರು.

ತಮಿಳುನಾಡಿನ ಕೋಟಗಿರಿ ಶೈನಿ ರಿಹೇಲ್‌, ಪರಾಗ ಮತ್ತು ಮಕರಂದ ನೀಡುವ ಸಸ್ಯ ಸಂಪತ್ತನ್ನು ಸಂರಕ್ಷಿಸಿ ಜೇನುನೊಣಗಳ ಆಹಾರ ಸುರಕ್ಷತೆ ಕಾಪಾಡಿದರೆ ಮನು ಕುಲ ಉಳಿಯಲು ಸಾಧ್ಯ ಎಂದರು.

ರಾಜಸ್ಥಾನದ ಕಮಲೇಂದ್ರ, ಮಹಾರಾಷ್ಟ್ರದ ವಿಜಯ ಸಾಂಬರೆ, ಬೆಂಗಳೂರಿನ ಎಟ್ರೀ ಸಂಸ್ಥೆಯ ಸಿದ್ದಪ್ಪ ಶೆಟ್ಟಿ ಪಾಲ್ಗೊಂಡಿದ್ದರು.

ಪ್ರಕೃತಿ ಸಂಸ್ಥೆಯ ವಿವೇಕ ಹೆಗಡೆ ಗುಬ್ಬಿಗದ್ದೆ ಅಧ್ಯಕ್ಷತೆ ವಹಿಸಿದ್ದರು. ಪಾಂಡುರಂಗ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದಿ ಜನಾಂಗದವರಿಂದ ಹೆಜ್ಜೇನು ಮರ ಹತ್ತುವ ಪ್ರಾತ್ಯಕ್ಷಿಕೆ, ಜೇನು ನೀತಿ ಮತ್ತು ತುಡುವಿ ಜೇನು ಸಾಕಾಣಿಕೆಯ ಕುರಿತು ಗೋಷ್ಠಿಗಳು ನಡೆದವು. ಸ್ವಾತಿ ನಾಯಕ ಜೇನು ಗೀತೆ ಹಾಡಿದರು. ಶೈಲಜಾ ಗೋರನ್ಮನೆ ನಿರೂಪಿಸಿದರು. ಆರ್‌.ಪಿ.ಹೆಗಡೆ ಗೋರನ್ಮನೆ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ