ಆ್ಯಪ್ನಗರ

ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮುಖ್ಯ

ಅಂಕೋಲಾ: ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಬಹುಮುಖ್ಯವಾಗಿದೆ. ಇಂದು ನಾವು ನಮ್ಮ ಸುತ್ತಲಿನ ಜನರಲ್ಲಿ ಉತ್ತಮ ಭಾವನೆಗಳನ್ನು ಬೆಳೆಸುವ ಕಾರ್ಯ ಮಾಡಬೇಕಾಗಿದೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ. ಅರ್ಚನಾ ನಾಯಕ ಹೇಳಿದರು.

Vijaya Karnataka 18 Jun 2019, 5:00 am
ಅಂಕೋಲಾ: ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಬಹುಮುಖ್ಯವಾಗಿದೆ. ಇಂದು ನಾವು ನಮ್ಮ ಸುತ್ತಲಿನ ಜನರಲ್ಲಿ ಉತ್ತಮ ಭಾವನೆಗಳನ್ನು ಬೆಳೆಸುವ ಕಾರ್ಯ ಮಾಡಬೇಕಾಗಿದೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ. ಅರ್ಚನಾ ನಾಯಕ ಹೇಳಿದರು.
Vijaya Karnataka Web KWR-17ANK2


ನೆಹರು ಯುವ ಕೇಂದ್ರ ಕಾರವಾರ, ಸ್ಪೂರ್ತಿ ಯುವ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘ ಅಂಕೋಲಾ ಹಾಗೂ ಕೆ.ಎಲ್‌.ಇ. ಸಂಸ್ಥೆಯ ಶಿಕ್ಷ ಣ ಮಹಾವಿದ್ಯಾಲಯ ಅಂಕೊಲಾ ಇವರ ಆಶ್ರಯದಲ್ಲಿ ನಡೆದ ನೆರೆಹೊರೆ ಯುವ ಸಂಸತ್‌ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಮುಖ ಉಪನ್ಯಾಸಕರಾಗಿ ಪತಂಜಲಿ ಯೋಗ ಗುರು ವಿನಾಯಕ ಸುಭಾಷ ಗುಡಿಗಾರ ಸೌಹಾರ್ದ ಬಾಳಿಗಾಗಿ ಯೋಗದ ಕುರಿತು, ಕೆಡಿಡಿಸಿ ಸಮಾಜ ಸೇವಾ ಸಂಸ್ಥೆ ಕಾರವಾರದ ಸಾವೇರ ಫರ್ನಾಂಡಿಸ್‌ ಕೌಶಲ್ಯಾಧಾರಿತ ಕಾರ್ಯಕ್ರಮಗಳ ಕುರಿತು ಹಾಗೂ ಕೌಟುಂಬಿಕ ಸಲಹಾ ಕೇಂದ್ರ ಸಲಹೆಗಾರ ತಿಮ್ಮಣ್ಣ ಭಟ್‌ ಬಿ. ಯುವಕ ಸಂಘಗಳ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು.

ಪ್ರಶಿಕ್ಷ ಣಾರ್ಥಿ ಅಂಜನಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಜ್ಞಾ ಮತ್ತು ಸಂಗಡಿಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕಿ ಪುಷ್ಪಾ ಎ. ನಾಯ್ಕ ಸ್ವಾಗತಿಸಿದರು. ಕಾರವಾರದ ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ವಿಫಿನ್‌ ಕುಮಾರ ಚಾಥಾಯಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಮಂಜುನಾಥ ಬಿ. ಇಟಗಿ ಅಧ್ಯಕ್ಷ ತೆ ವಹಿಸಿದ್ದರು. ಪ್ರಶಿಕ್ಷ ಣಾರ್ಥಿ ದೀಪಾ ನಾಯ್ಕ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ