ಆ್ಯಪ್ನಗರ

ಕಿರು ಸೇತುವೆ ಕುಸಿದು ಅಪಾಯದ ಸ್ಥಿತಿ

ಗೋಕರ್ಣ : ಇಲ್ಲಿನ ಕೋಟಿತೀರ್ಥ ನೀರು ಮಳೆಗಾಲದಲ್ಲಿ ಹೋರಹೋಗುವ ಕಿರು ಸೇತುವೆ (ತೊಗನಗಂಡಿ)ಕುಸಿದು ಅಪಾಯದ ಸ್ಥಿತಿಯಲ್ಲಿದೆ.

Vijaya Karnataka 28 Apr 2019, 5:00 am
ಗೋಕರ್ಣ : ಇಲ್ಲಿನ ಕೋಟಿತೀರ್ಥ ನೀರು ಮಳೆಗಾಲದಲ್ಲಿ ಹೋರಹೋಗುವ ಕಿರು ಸೇತುವೆ (ತೊಗನಗಂಡಿ)ಕುಸಿದು ಅಪಾಯದ ಸ್ಥಿತಿಯಲ್ಲಿದೆ.
Vijaya Karnataka Web the short bridge collapses and the situation is in danger
ಕಿರು ಸೇತುವೆ ಕುಸಿದು ಅಪಾಯದ ಸ್ಥಿತಿ


ಕಳೆದ ಹಲವು ತಿಂಗಳಿಂದ ಕಿರು ಸೇತುವೆ ಸಣ್ಣ ಪ್ರಮಾಣದಲ್ಲಿ ಕುಸಿಯಲು ಪ್ರಾರಂಭಿಸಿದ್ದನ್ನು ಗ್ರಾಮ ಪಂಚಾಯಿತಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರುತ್ತಾರೆ. ನಂತರ ಜಿಲ್ಲಾಡಳಿತದ ಗಮನಕ್ಕೆ ತಂದಾಗ ಜಿಲ್ಲಾಧಿಕಾರಿಗಳು ಸರಿಪಡಿಸುವಂತೆ ಗ್ರಾಮ ಪಂಚಾಯಿತಿಗೆ ಸೂಚಿಸಿ ಹಲವು ದಿನಗಳು ಕಳೆದರೂ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗ ರಸ್ತೆಯ ಒಂದು ಬದಿ ಕಳಚಿ ಬಿದ್ದು ಹೊಂಡ ನಿರ್ಮಾಣವಾಗಿದ್ದು, ಯಾವುದೇ ಕ್ಷ ಣದಲ್ಲೂ ಸಂಪೂರ್ಣ ಕುಸಿಯಬಹುದಾಗಿದೆ. ದಿನಕ್ಕೆ ನೂರಾರು ವಾಹನಗಳ ಸಂಚಾರ ಜತೆ ಯಾತ್ರಿಕರು ಇಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಸಿಲು ಬರುತ್ತಾರೆ. ಏನಾದರೂ ಅವಘಡ ಸಂಭವಿಸುವ ಮುನ್ನ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತಕ್ಷ ಣ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ