ಆ್ಯಪ್ನಗರ

ಶ್ರೀ ಆದಿಶಂಕರಾಚಾರ‍್ಯರ ಮೂರ್ತಿ ಪ್ರತಿಷ್ಠಾಪನೆ

ಯಲ್ಲಾಪುರ : ಪಟ್ಟಣದ ನಾಯಕನಕೆರೆ ಶ್ರೀ ಶಾರದಾಂಬಾ ದೇವಾಲಯದ ಆವಾರದಲ್ಲಿ ನೂತನವಾಗಿ ನಿರ್ಮಿಸಿದ ಗುರುಭವನದಲ್ಲಿ ಆದಿಶಂಕರಾಚಾರ್ಯರ ಮೂರ್ತಿಯನ್ನು ಸ್ವರ್ಣವಲ್ಲೀ ಶ್ರೀಮದ್‌ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ಗುರುವಾರ ಪ್ರತಿಷ್ಠಾಪಿಸಿದರು.

Vijaya Karnataka 15 Mar 2019, 5:00 am
ಯಲ್ಲಾಪುರ : ಪಟ್ಟಣದ ನಾಯಕನಕೆರೆ ಶ್ರೀ ಶಾರದಾಂಬಾ ದೇವಾಲಯದ ಆವಾರದಲ್ಲಿ ನೂತನವಾಗಿ ನಿರ್ಮಿಸಿದ ಗುರುಭವನದಲ್ಲಿ ಆದಿಶಂಕರಾಚಾರ್ಯರ ಮೂರ್ತಿಯನ್ನು ಸ್ವರ್ಣವಲ್ಲೀ ಶ್ರೀಮದ್‌ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ಗುರುವಾರ ಪ್ರತಿಷ್ಠಾಪಿಸಿದರು.
Vijaya Karnataka Web KWR-14 YLP 1 A


ಗುರುವಾರ ಬೆಳಗ್ಗೆ 10.58ರ ವೃಷಭ ಲಗ್ನ ಶುಭ ಮುಹೂರ್ತದಲ್ಲಿ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಲಾಯಿತು. ಈ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಪ್ರತಿಷ್ಠಾಪನೆ ಅಂಗವಾಗಿ ಗಾಯತ್ರಿ ಹವನ, ಸಗ್ರಹಮಖ ಲಘು ರುದ್ರ ಹವನ, ಗಾಯತ್ರಿ ಜಪಾನುಷ್ಠಾನ, ಪೂರ್ಣಾಹುತಿ, ಪ್ರತಿಷ್ಠಾಂಗ ಹೋಮ, ಮಹಾಪೂಜೆ ಗುರುಭಿಕ್ಷೆ ನಡೆದವು. ಕಟ್ಟೆ ಶಂಕರ ಭಟ್ಟರ ಆಚಾರ್ಯತ್ವದಲ್ಲಿ ಪ್ರತಿಷ್ಠಾಂಗ ಹೋಮ, ಹವನಗಳು ನಡೆದವು.

ಯಲ್ಲಾಪುರ ಮತ್ತು ಚಿನ್ನಾಪುರ ಸೀಮೆಯ ನೂರಾರು ವೈದಿಕರು ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟರು. ಮಾತೆಯರು ಶಾಂಕರಸ್ತೋತ್ರ ಪಠಿಸಿದರು.

ಶ್ರೀ ಶಂಕರಾಚಾರ್ಯರ ಆಕರ್ಷಕ ಪ್ರತಿಮೆ : ಗುರುವಾರ ಗುರುಭವನದಲ್ಲಿ ಪ್ರತಿಷ್ಠಾಪಿಸಿದ ಶ್ರೀ ಆದಿಶಂಕರಾಚಾರ್ಯರ ಮೂರ್ತಿಯು ಅತ್ಯಂತ ಆಕರ್ಷಕವಾಗಿದೆ. ಸ್ವರ್ಣವಲ್ಲೀ ಸಂಸ್ಥಾನದವರು ಈ ಮೂರ್ತಿಯನ್ನು ನಿರ್ಮಿಸಿ ಕೊಟ್ಟಿದ್ದಾರೆ. ಸುಮಾರು ಮೂರು ಕ್ವಿಂಟಲ್‌ ತೂಕದ ಈ ಮೂರ್ತಿಯನ್ನು ಸಾಲಿಗ್ರಾಮ ಶಿಲೆಯಲ್ಲಿ ಕೆತ್ತಲಾಗಿದೆ. ಧ್ಯಾನಸ್ಥ ಮುದ್ರೆಯಲ್ಲಿ ಶ್ರೀ ಶಂಕರರು ಕುಳಿತ ಮಾದರಿಯಲ್ಲಿ ನಿರ್ಮಿಸಿದ ಈ ಮೂರ್ತಿಯನ್ನು ಅತ್ಯಂತ ನಯ, ನಾಜೂಕಿನಿಂದ ಕೆತ್ತಲಾಗಿದೆ.


ಇಂದು ಶಾಂಕರ ಸ್ತೋತ್ರ ಪಠಣ : ಗುರುಭವನ ಸಮರ್ಪಣೆ ಹಾಗೂ ಆದಿಶಂಕರಾಚಾರ್ಯರ ಮೂರ್ತಿ ಪ್ರತಿಷ್ಠಾಪನಾ ಅಂಗವಾಗಿ ಮಾ.15ರಂದು ಶುಕ್ರವಾರ ನವ ಚಂಡಿಹವನ, 108 ಗುರುಪಾದ ಪೂಜೆ, ಋುಗ್ವೇದ ಮಂತ್ರ ಪಠಣ, ಗುರುಭಿಕ್ಷೆ ನಡೆಯಲಿದೆ. ವಿಶೇಷವಾಗಿ ಸಾವಿರ ಮಾತೆಯರಿಂದ ಕುಂಕುಮಾರ್ಚನೆ, ಶಾಂಕರ ಸ್ತೋತ್ರ ಪಠಣ ನಡೆಯಲಿದೆ. ಯಲ್ಲಾಪುರ, ಗುಂದ, ಕುಳಿನಾಡು, ಚಿನ್ನಾಪುರ ಸೀಮೆಗಳ ಸಾವಿರಾರು ಮಾತೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ