ಆ್ಯಪ್ನಗರ

ಸೈರನ್‌ ತಯಾರಿಸಿದ ವಿದ್ಯಾರ್ಥಿಗಳು

ಯಲ್ಲಾಪುರ : ಸುಲಭ ಮತ್ತು ಅತ್ಯಂತ ಸರಳ ನಿತ್ಯೋಪಯೋಗಿ ಸಾಧನಗಳನ್ನು ಬಳಸಿಕೊಂಡು ಶಾಲಾ ಮಕ್ಕಳು ಸೈರನ್‌ ಒಂದನ್ನು ತಯಾರಿಸಿದ್ದು ಮಕ್ಕಳೇ ತಯಾರಿಸಿದ ಈ ಸೈರನ್‌ ಜನ ಮೆಚ್ಚುಗೆಗೆ ಪಾತ್ರವಾಗಿದೆ.

Vijaya Karnataka 3 Aug 2019, 5:00 am
ಯಲ್ಲಾಪುರ : ಸುಲಭ ಮತ್ತು ಅತ್ಯಂತ ಸರಳ ನಿತ್ಯೋಪಯೋಗಿ ಸಾಧನಗಳನ್ನು ಬಳಸಿಕೊಂಡು ಶಾಲಾ ಮಕ್ಕಳು ಸೈರನ್‌ ಒಂದನ್ನು ತಯಾರಿಸಿದ್ದು ಮಕ್ಕಳೇ ತಯಾರಿಸಿದ ಈ ಸೈರನ್‌ ಜನ ಮೆಚ್ಚುಗೆಗೆ ಪಾತ್ರವಾಗಿದೆ.
Vijaya Karnataka Web KWR-2 YLP 5


ತಾಲೂಕಿನ ಆನಗೋಡ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಗಳಾದ ಸಿಂಧೂ ನಾರಾಯಣ ಗಾಂವ್ಕಾರ್‌, ಚಿನ್ಮಯ ಸತ್ಯನಾರಾಯಣ ಹೆಗಡೆ ಮತ್ತು ಉಮೇಶ ಮರಾಠಿ ಈ ಸುಲಭ ಸಾಧನವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ರೂಪಿಸಿದ್ದಾರೆ.

ಪ್ರಯೋಗಾರ್ಥವಾಗಿ ಈ ಸಾಧನವನ್ನು ಶಾಲೆಯ ಕಂಪ್ಯೂಟರ್‌ ಕೋಣೆಯ ಬಾಗಿಲಿಗೆ ಅಳವಡಿಸಲಾಗಿದೆ. ಯಾರಾದರೂ ಈ ಕೋಣೆಯ ಬಾಗಿಲು ತೆರೆದರೆ ತಕ್ಷ ಣ ಮಕ್ಕಳು ಅಳವಡಿಸಿದ ಈ ಸೈರನ್‌ ದೊಡ್ಡದಾಗಿ ಸದ್ದು ಮಾಡಿ ಸುತ್ತಲಿನವರನ್ನು ಎಚ್ಚರಿಸುತ್ತದೆ. ಮಕ್ಕಳೇ ಆಸಕ್ತಿಯಿಂದ ತಯಾರಿಸಿದ ಈ ಉಪಕರಣವನ್ನು ನೋಡಿದ ಕ್ಷೇತ್ರ ಶಿಕ್ಷ ಣಾಧಿಕಾರಿ ಎನ್‌.ಆರ್‌.ಹೆಗಡೆ ಹಾಗೂ ಇಲಾಖೆಯ ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಈ ಉಪಕರಣ ತಯಾರಿಸಿದ ಮಕ್ಕಳನ್ನು ಶಾಲೆಯ ಮುಖ್ಯ ಶಿಕ್ಷ ಕ ಸುಧಾಕರ ನಾಯಕ, ಶಿಕ್ಷ ಕಿಯರಾದ ಪ್ರತಿಭಾ ನಾಯ್ಕ, ಕುಸುಮಾ ನಾಯಕ, ಸವಿತಾ ಹೆಗಡೆ, ಎಸ್‌ಡಿಎಂಸಿ ಅಧ್ಯಕ್ಷ ಎಸ್‌.ಎನ್‌.ಹೆಗಡೆ ಮುಂತಾದವರು ಅಭಿನಂದಿಸಿ, ಇಂತಹ ವೈಜ್ಞಾನಿಕ ಯೋಚನೆಯಿಂದಾಗಿ ಇನ್ನಷ್ಟು ಸಾಧನಗಳನ್ನು ಮಕ್ಕಳು ಕಂಡು ಹಿಡಿಯುವಂತಾಗಲಿ ಎಂದು ಹಾರೈಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ