ಆ್ಯಪ್ನಗರ

ಕೋಣನ ಸಂಚಾರ: ಜನರ ಭಕ್ತಿಭಾವ

ಶಿರಸಿ : ಶ್ರೀ ಮಾರಿಕಾಂಬಾ ದೇವಸ್ಥಾನದ ಆವಾರದಲ್ಲಿಕಟ್ಟಿಡಲಾಗುವ ಮಾರಿಕೋಣಕ್ಕೆ ವಿಶಾಲ ವಾತಾವರಣದಲ್ಲಿಓಡಾಡುವ ಸಂದರ್ಭ. ಕಳೆದ ಎರಡು ದಿನಗಳಿಂದ ಸುತ್ತಾಡುತ್ತಿರುವ ಮಾರಿಕೋಣನಿಗೆ ಪ್ರತಿಯೊಂದು ಕಡೆಗಳಲ್ಲಿಭಕ್ತಿಭಾವದಿಂದ ಪೂಜಿಸುತ್ತಿದ್ದಾರೆ.

Vijaya Karnataka 1 Mar 2020, 5:00 am
ಶಿರಸಿ : ಶ್ರೀ ಮಾರಿಕಾಂಬಾ ದೇವಸ್ಥಾನದ ಆವಾರದಲ್ಲಿಕಟ್ಟಿಡಲಾಗುವ ಮಾರಿಕೋಣಕ್ಕೆ ವಿಶಾಲ ವಾತಾವರಣದಲ್ಲಿಓಡಾಡುವ ಸಂದರ್ಭ. ಕಳೆದ ಎರಡು ದಿನಗಳಿಂದ ಸುತ್ತಾಡುತ್ತಿರುವ ಮಾರಿಕೋಣನಿಗೆ ಪ್ರತಿಯೊಂದು ಕಡೆಗಳಲ್ಲಿಭಕ್ತಿಭಾವದಿಂದ ಪೂಜಿಸುತ್ತಿದ್ದಾರೆ.
Vijaya Karnataka Web the traffic of the room the devotion of the people
ಕೋಣನ ಸಂಚಾರ: ಜನರ ಭಕ್ತಿಭಾವ


ನಿತ್ಯ ನಾಲ್ಕೈದು ಕಿಮೀ ಓಡಾಡುವ ಕೋಣವನ್ನು ಮೇತ್ರಿ ಕುಟುಂಬದವರು ಸುತ್ತಾಡಿಸುತ್ತಿದ್ದು ನಾಲ್ಕೆತ್ರೖದು ಮಂದಿ ಹಗ್ಗ ಹಿಡಿದು ಅತ್ತಿಂದಿತ್ತ ಹೋಗದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ. ಶನಿವಾರ ಇಲ್ಲಿಯ ಮರಾಠಿಕೊಪ್ಪದಲ್ಲಿಕೋಣ ಓಡಾಡಿತು. ಮನೆಮನೆ ಬಾಗಿಲಿಗೆ ಹೋದಾಗ ಜನ ಕೋಣಕ್ಕೆ ನೀರೆರೆದು, ಅರಿಶಿಣ ಕುಂಕುಮ ಹಚ್ಚಿ ಭಕ್ತಿಭಾವ ಮೆರೆಯುತ್ತಿದ್ದಾರೆ. ಸಂಪ್ರದಾಯದಂತೆ ಜಾತ್ರೆಯ ಸಂದರ್ಭದಲ್ಲಿಕೋಣನ ಸಮಚಾರ ನಡೆಯುತ್ತಿದ್ದು ಈ ಮೂಲಕ ಜಾತ್ರೆಗೆ ಆಹ್ವಾನ ನೀಡಿದಂತೆಯೂ ಆಗುತ್ತಿದೆ. ಕೋಣ ಸಾಗುವಾಗ ಜನ ರಸ್ತೆಯಂಚಿನಲ್ಲಿನಿಂತು ಕುತೂಹಲದಿಂದ ವೀಕ್ಷಿಸಿದರು. ಇನ್ನು ಎರಡು ದಿನಗಳ ಕಾಲ ಕೋಣ ಸಂಚಾರಗೈಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ