ಆ್ಯಪ್ನಗರ

ಮರ ಬಿದ್ದು ಮನೆಗೆ ಜಖಂ

ಹಳಿಯಾಳ : ತಾಲೂಕಿನಲ್ಲಿ ಬುಧವಾರ ಮತ್ತು ಗುರುವಾರ ಬಿರುಸಿನಿಂದ ಬೀಸಿದ ಗಾಳಿಯಿಂದ ಸುರಿದ ಮಳೆಗೆ ಗೋಲೆಹಳ್ಳಿ ಗ್ರಾಮದಲ್ಲಿ ಮನೆಯ ಮೇಲೆ ಮರ ಬಿದ್ದು ಮನೆಯು ಸಂಪೂರ್ಣ ಜಖಂಗೊಂಡಿದ್ದು ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Vijaya Karnataka 6 Jul 2019, 5:00 am
ಹಳಿಯಾಳ : ತಾಲೂಕಿನಲ್ಲಿ ಬುಧವಾರ ಮತ್ತು ಗುರುವಾರ ಬಿರುಸಿನಿಂದ ಬೀಸಿದ ಗಾಳಿಯಿಂದ ಸುರಿದ ಮಳೆಗೆ ಗೋಲೆಹಳ್ಳಿ ಗ್ರಾಮದಲ್ಲಿ ಮನೆಯ ಮೇಲೆ ಮರ ಬಿದ್ದು ಮನೆಯು ಸಂಪೂರ್ಣ ಜಖಂಗೊಂಡಿದ್ದು ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
Vijaya Karnataka Web the tree fell and the house jakham
ಮರ ಬಿದ್ದು ಮನೆಗೆ ಜಖಂ


ನಾಗಶೆಟ್ಟಿಕೊಪ್ಪ ಗ್ರಾ.ಪಂ. ವ್ಯಾಪ್ತಿಯ ಗೋಲೆಹಳ್ಳಿ ಗ್ರಾಮದಲ್ಲಿ ಬಿರುಗಾಳಿಯಿಂದ ಕೂಡಿದ ಸುರಿದ ಮಳೆಗೆ ಸಿದ್ದಿ ಸಮುದಾಯಕ್ಕೆ ಸೇರಿದ ಮಹ್ಮದಸಾಬ ಮಕ್ತುಮಸಾಬ ನಾಯ್ಕ ಅವರ ಮಾಲಿಕತ್ವದ ಮನೆಯ ಮೇಲೆ ಬೃಹತ್‌ ಗಾತ್ರದ ಹುಣಸೆ ಮರ ಬಿದ್ದು ಮನೆಯ ಗೋಡೆ, ಹಂಚು ಹಾಗೂ ಮನೆಯಲ್ಲಿಯ ವಸ್ತುಗಳಿಗೆ ಹಾನಿ ಉಂಟಾಗಿದೆ.

ಸುಮಾರು 80 ಸಾವಿರ ರೂ.ಗೂ ಅಧಿಕ ಹಾನಿ ಸಂಭವಿಸಿದೆ ಎಂದು ಹೇಳಿರುವ ಸಿದ್ದಿ, ತನಗಾಗಿರುವ ಹಾನಿಗೆ ಸರಕಾರದಿಂದ ಪರಿಹಾರ ದೊರಕಿಸಿಕೊಡುವಂತೆ ಆಗ್ರಹಿಸಿ ತಹಸೀಲ್ದಾರ್‌ ವಿದ್ಯಾಧರ ಗುಳಗುಳಿ ಅವರಿಗೆ ಮನವಿ ಸಲ್ಲಿಸಿದ್ದು, ಈ ಸಂದರ್ಭದಲ್ಲಿ ಗ್ರೀನ್‌ ಇಂಡಿಯಾ ಸಂಸ್ಥೆಯ ಕಾರ್ಯಕರ್ತ ಇಮಾಮ ಸಿದ್ದಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ