ಆ್ಯಪ್ನಗರ

ಮೀಸಲುಪಟ್ಟಿಯಿಂದ ಕೈ ಬಿಡದಿರಲು ಆಗ್ರಹ

ದಾಂಡೇಲಿ: ಪರಿಶಿಷ್ಟ ಜಾತಿ ಮೀಸಲಾತಿಯಿಂದ ಬಂಜಾರಾ ಸಮಾಜವನ್ನು ಕೈ ಬಿಡಲು ಮುಂದಾಗಿರುವುದನ್ನು ಬಿಟ್ಟು ಅದೇ ಮೀಸಲಾತಿಯಡಿ ಮುಂದುವರಿಸುವಂತೆ ಆಗ್ರಹಿಸಿ ನಗರದ ಬಂಜಾರಾ ಸಮಾಜ ಬಾಂಧವರು ಹಳೆದಾಂಡೇಲಿಯಲ್ಲಿಬೃಹತ್‌ ಪತ್ರ ಚಳವಳಿ ನಡೆಸುವುದರ ಮೂಲಕ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.

Vijaya Karnataka 14 Jun 2020, 5:00 am
ದಾಂಡೇಲಿ: ಪರಿಶಿಷ್ಟ ಜಾತಿ ಮೀಸಲಾತಿಯಿಂದ ಬಂಜಾರಾ ಸಮಾಜವನ್ನು ಕೈ ಬಿಡಲು ಮುಂದಾಗಿರುವುದನ್ನು ಬಿಟ್ಟು ಅದೇ ಮೀಸಲಾತಿಯಡಿ ಮುಂದುವರಿಸುವಂತೆ ಆಗ್ರಹಿಸಿ ನಗರದ ಬಂಜಾರಾ ಸಮಾಜ ಬಾಂಧವರು ಹಳೆದಾಂಡೇಲಿಯಲ್ಲಿಬೃಹತ್‌ ಪತ್ರ ಚಳವಳಿ ನಡೆಸುವುದರ ಮೂಲಕ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.
Vijaya Karnataka Web the urge not to leave the reserve
ಮೀಸಲುಪಟ್ಟಿಯಿಂದ ಕೈ ಬಿಡದಿರಲು ಆಗ್ರಹ


ಈ ಸಂದರ್ಭದಲ್ಲಿಮಾತನಾಡಿದ ಸಮಾಜದ ಮುಖಂಡ ಹರಿ ರಾಮದುರ್ಗ ಹಾಗೂ ನಗರ ಸಭೆಯ ಮಾಜಿ ಸದಸ್ಯ ಮಂಜು ರಾಠೋಡ ಅವರು ಬಂಜಾರ ಸಮಾಜ ಅತ್ಯಂತ ಶೋಷಿತ ಸಮಾಜವಾಗಿದೆ. ಈ ಕಾರಣದಿಂದಾಗಿ ಸಂವಿಧಾನ ಶಿಲ್ಪಿ ಡಾ: ಅಂಬೇಡ್ಕರ್‌ ಅವರು ಶೋಷಿತ ಲಂಬಾಣಿ ಜಾತಿಯನ್ನು ಪರಿಶಿಷ್ಟ ಜಾತಿಗೆ ಒಳಪಡಿಸಿ ನ್ಯಾಯ ದೊರಕಿಸಿಕೊಟ್ಟಿದ್ದರು. ಆದರೆ ಇದೀಗ ರಾಜ್ಯ ಸರಕಾರ ಬಂಜಾರಾ ಸಮಾಜವನ್ನು ಪರಿಶಿಷ್ಟ ಜಾತಿ ಮೀಸಲಾತಿಯಿಂದ ಕೈಬಿಡಲು ಮುಂದಾಗಿರುವುದು ನಮ್ಮ ಸಮಾಜಕ್ಕೆ ಅನ್ಯಾಯ ಮಾಡಿದಂತಾಗುತ್ತದೆ. ಅತ್ಯಂತ ದುಸ್ತರ ಬದುಕು ನಡೆಸುತ್ತಿರುವ ಬಂಜಾರಾ ಸಮಾಜವನ್ನು ಈ ಹಿಂದಿನಂತೆಯೆ ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿಯೆ ಮುಂದುವರಿಸಿ ಸಮಾಜದವರ ಮನವಿಗೆ ಸಕಾಲಿಕವಾಗಿ ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು. ಒಂದುವೇಳೆ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದರು.

ಸಮಾಜದ ಇನ್ನೋರ್ವ ಮುಖಂಡ ಶಿವಾನಂದ ರಾಠೋಡ ಅವರು ಮಾತನಾಡಿ ಈ ನಾಡಿನ ಸಾಂಸ್ಕೃತಿಕ ಕ್ಷೇತ್ರಕ್ಕೆ ಅಗ್ರಣೀಯ ಕೊಡುಗೆ ನೀಡಿದ ಲಂಬಾಣಿ ಸಮಾಜ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಶೋಷಣೆಗೊಳಗಾಗಿದೆ. ಈ ನಡುವೆ ಸರಕಾರ ಮೀಸಲಾತಿಯಿಂದ ಕೈ ಬಿಡಲು ಮುಂದಾಗುತ್ತಿರುವುದು ಸಮಾಜಕ್ಕೆ ಮಾಡುತ್ತಿರುವ ದ್ರೋಹವಾಗಿದೆ. ಈ ಕೂಡಲೆ ಸರಕಾರ ತನ್ನ ತೀರ್ಮಾನ ಬದಲಾಯಿಸಿ, ಬಂಜಾರಾ ಸಮಾಜವನ್ನು ಎಸ್‌.ಸಿ ಮೀಸಲಾತಿಯಲ್ಲಿಮುಂದುವರಿಸಬೇಕೆಂದು ಒತ್ತಾಯಿಸಿದರು.

ಕೃಷ್ಣಾ.ಎಲ್‌.ಕಾರಬಾರಿ, ಶಂಕರ.ಎಂ.ಲಮಾಣಿ, ಕೃಷ್ಣಾ ಪೂರಪ್ಪಾ ಲಮಾಣಿ, ರಮೇಶ ಲಮಾಣಿ, ನೀಲಕಂಠ.ಜಿ.ನಾಯ್ಕ, ಪುರುಷೋತ್ತಮ, ಕೃಷ್ಣಾ.ಡಿ.ಲಮಾಣಿ ಮೊದಲಾದವರು ಉಪಸ್ಥಿತರಿದ್ದರು.

ದಾಂಡೇಲಿ- ಎಸ್‌.ಸಿ ಮೀಸಲಾತಿಯಿಂದ ಕೈಬಿಡದಂತೆ ಆಗ್ರಹಿಸಿ ಬಂಜಾರಾ ಸಮಾಜ ಬಾಂಧವರು ಪತ್ರಚಳವಳಿ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ