ಆ್ಯಪ್ನಗರ

ಅಡಕೆ, ಬಾಳೆ ತೋಟಗಳಿಗೆ ನುಗ್ಗಿದ ನೀರು

ಯಲ್ಲಾಪುರ : ಎರಡು ದಿನಗಳಿಂದ ನಿರಂತರ ಸುರಿಯುತ್ತಿರುವ ವರ್ಷಧಾರೆಯಿಂದಾಗಿ ತಾಲೂಕಿನ ಹೆಗ್ಗಾರ್‌, ಕಲ್ಲೇಶ್ವರ ಮುಂತಾದ ಭಾಗಗಳಲ್ಲಿ ತೀವ್ರ ಹಾನಿ ಸಂಭವಿಸಿದೆ. ಅಡಕೆ ತೋಟಗಳಿಗೆ ಹಳ್ಳದ ನೀರು ರಭಸವಾಗಿ ನುಗ್ಗಿ ಅಡಕೆ ಗಿಡ ಹಾಗೂ ಬಾಳೆ ಗಿಡಗಳಿಗೆ ಹಾನಿ ಸಂಭವಿಸಿದೆ. ಬೇಸಿಗೆಯಲ್ಲಿ ನಿರ್ಮಿಸಿದ ಕಚ್ಚಾ ರಸ್ತೆಗಳ ಮಣ್ಣು ಕೊರೆದು ಹೋಗಿ ಸಂಚಾರಕ್ಕೆ ದುಸ್ತರವಾಗಿದೆ.

Vijaya Karnataka 13 Jul 2019, 5:00 am
ಯಲ್ಲಾಪುರ : ಎರಡು ದಿನಗಳಿಂದ ನಿರಂತರ ಸುರಿಯುತ್ತಿರುವ ವರ್ಷಧಾರೆಯಿಂದಾಗಿ ತಾಲೂಕಿನ ಹೆಗ್ಗಾರ್‌, ಕಲ್ಲೇಶ್ವರ ಮುಂತಾದ ಭಾಗಗಳಲ್ಲಿ ತೀವ್ರ ಹಾನಿ ಸಂಭವಿಸಿದೆ. ಅಡಕೆ ತೋಟಗಳಿಗೆ ಹಳ್ಳದ ನೀರು ರಭಸವಾಗಿ ನುಗ್ಗಿ ಅಡಕೆ ಗಿಡ ಹಾಗೂ ಬಾಳೆ ಗಿಡಗಳಿಗೆ ಹಾನಿ ಸಂಭವಿಸಿದೆ. ಬೇಸಿಗೆಯಲ್ಲಿ ನಿರ್ಮಿಸಿದ ಕಚ್ಚಾ ರಸ್ತೆಗಳ ಮಣ್ಣು ಕೊರೆದು ಹೋಗಿ ಸಂಚಾರಕ್ಕೆ ದುಸ್ತರವಾಗಿದೆ.
Vijaya Karnataka Web KWR-12 YLP 2

ರಸ್ತೆಯ ಮೇಲೆ ನೀರು ನಿಂತು ಸುಮಾರು 10 ತಾಸು ಹಳವಳ್ಳಿ ರಸ್ತೆಯಲ್ಲಿ ಸಂಚಾರ ಬಂದ್‌ ಆಗಿತ್ತು. ಈ ಗ್ರಾಮದ ವಿಶ್ವೇಶ್ವರ ಭಟ್ಟ, ಸಣ್ಣಪ್ಪ ಭಾಗ್ವತ್‌, ಯಮುನಾ ಭಟ್ಟ, ಹರಿಣಿ ಮರಾಠೆ, ವಿಠೋಬ ಗೋಸಾವಿ ಮುಂತಾದ ರೈತರ ತೋಟಗಳಿಗೆ ರಭಸದ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಈ ಭಾಗದ ಹಲವು ರೈತರು ತಮ್ಮ ಅಂಗಳದಲ್ಲಿ ಸಂಗ್ರಹಿಸಿಟ್ಟಿದ್ದ ಒಣ ಮೇವು ನೀರು ಪಾಲಾಗಿದೆ.

ಬಿಡುವು ನೀಡಿದ ಮಳೆರಾಯ : ತಾಲೂಕಿನಾದ್ಯಂತ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆ ಶುಕ್ರವಾರದಿಂದ ಇಳಿಮುಖವಾಗಿದೆ. ಶುಕ್ರವಾರ ಮಧ್ಯಾಹ್ನ ಮೋಡ ಕವಿದ ವಾತಾವರಣ ಸರಿದು ಹೊಂಬಿಸಿಲು ಗೋಚರಿಸಿದೆ. ವರುಣನ ಆರ್ಭಟದಿಂದ ನಡೆದ ಹಲವು ಅವಘಡಗಳಿಗೆ ಪರಿಹಾರ ರೂಪಿಸುವ ಸಲುವಾಗಿ ಕಂದಾಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ. ಮಳೆಯಿಂದ ಉಂಟಾದ ಅವಾಂತರವನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲು ಸಿದ್ಧರಾಗಿದ್ದಾರೆ.

3 ಕಿರು ಸೇತುವೆಗೆ ಧಕ್ಕೆ : ಬುಧವಾರ ಹಾಗೂ ಗುರುವಾರ ತಾಲೂಕಿನಾದ್ಯಂತ ಸುರಿದ ಜೋರಾದ ಮಳೆಗೆ ಒಟ್ಟು ಮೂರು ಕಿರು

ಸೇತುವೆಗಳಿಗೆ ಧಕ್ಕೆಯಾಗಿದೆ. ನಾಲ್ಕು ಕಡೆ ಗುಡ್ಡ ಕುಸಿತ ಹಾಗೂ ನಾಲ್ಕು ವಾಸದ ಮನೆಗಳ ಕುಸಿತ ಉಂಟಾಗಿದೆ. ಈ ಎಲ್ಲ ಕಡೆ ಕಂದಾಯ ಅಧಿಕಾರಿಗಳು ತೆರಳಿ ಪರಶೀಲನೆ ನಡೆಸಿ ಹಾನಿಯನ್ನು ಅಂದಾಜಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ