ಆ್ಯಪ್ನಗರ

ರಂಗಭೂಮಿಗೆ ಸಮಾಜ ಬೆಸೆವ ಶಕ್ತಿ ಇದೆ

ಸಿದ್ದಾಪುರ : ರಂಗಭೂಮಿ ಸಮಾಜದ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವುದರ ಜತೆಗೆ ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತದೆ ಮನರಂಜನೆಯೊಂದಿಗೆ ಸಮಾಜವನ್ನು ಬೆಸೆಯುವ, ಪರಿವರ್ತಿಸುವ ಶಕ್ತಿ ರಂಗಭೂಮಿಗೆ ಇದೆ ಎಂದು ಆಧಾರ ಸಂಸ್ಥೆಯ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ಹೇಳಿದರು.

Vijaya Karnataka 1 Apr 2019, 5:00 am
ಸಿದ್ದಾಪುರ : ರಂಗಭೂಮಿ ಸಮಾಜದ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವುದರ ಜತೆಗೆ ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತದೆ ಮನರಂಜನೆಯೊಂದಿಗೆ ಸಮಾಜವನ್ನು ಬೆಸೆಯುವ, ಪರಿವರ್ತಿಸುವ ಶಕ್ತಿ ರಂಗಭೂಮಿಗೆ ಇದೆ ಎಂದು ಆಧಾರ ಸಂಸ್ಥೆಯ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ಹೇಳಿದರು.
Vijaya Karnataka Web KWR-31SDPR-2


ಅವರು ಇತ್ತೀಚೆಗೆ ತಾಲೂಕಿನ ಹಲ್ಸಗಾರ ಮತ್ತು ಕಬ್ಬಿನಸರದ ಶ್ರೀ ದುರ್ಗಾಂಬಿಕ ದೇವಸ್ಥಾನದ 20ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜವನ್ನು ಒಗ್ಗೂಡಿಸುವಂತ ಕೆಲಸ ಕಾರ್ಯಗಳು ಆಗಬೇಕು ಎನ್ನುವ ಮಾತು ಅನೇಕ ಸಂದರ್ಭದಲ್ಲಿ ಕೇಳುತ್ತೇವೆ. ಆದರೆ ಆ ಕಾರ್ಯ ಊರಿನಲ್ಲಿ ನಡೆಯುವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸಾಧ್ಯವಿದೆ. ಊರಿನಲ್ಲಿ ಎಲ್ಲರೂ ಒಗ್ಗೂಡಿ ನಡೆಸುವ ಕಾರ್ಯಕ್ರಮಗಳಿಂದ ಸಾಮಾಜಿಕ ಬದ್ಧತೆ ಗಟ್ಟಿಯಾಗುತ್ತದೆ. ಅಭಿವೃದ್ಧಿಯ ಕೆಲಸ ಕಾರ್ಯಗಳಿಗೆ ಎಲ್ಲರೂ ಜೊತೆಯಾಗಿ ಪ್ರಯತ್ನಿಸಿದಾಗ ಮಾತ್ರ ಸಾಧ್ಯವಾಗುತ್ತದೆ. ಯುವಜನರು ತಮ್ಮ ವೈಯಕ್ತಿಕ ಬದುಕಿನ ಕುರಿತಾಗಿಯೂ ಯೋಚಿಸಬೇಕು. ಸ್ವಾಭಿಮಾನದ, ಸ್ವಾವಲಂಬನೆಯ ಜೀವನ ನಡೆಸುವಂತಾಗಬೇಕು ಎಂದರು.

ತರಳಿಮಠದ ವರದರಾಜು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷ ಜಿ.ಬಿ.ನಾಯ್ಕ ಅಧ್ಯಕ್ಷ ತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಅಶೋಕ ಪೂಜಾರಿ, ಹಳಿಯಾಳ, ಸತೀಶ್‌ ಜಿ.ನಾಯ್ಕ ತರಳಿ, ಮಹಾಬಲೇಶ್ವರ ಕೆ.ನಾಯ್ಕ, ರಾಮಚಂದ್ರ ಕೆ.ನಾಯ್ಕ. ಮಂಜುನಾಥ ಆರ್‌.ನಾಯ್ಕ, ಸೀತಾರಾಮ ನಾಯ್ಕ , ಸುಬ್ರಹ್ಮಣ್ಯ ಟಿ.ನಾಯ್ಕ, ರಾಮಚಂದ್ರ ಎಸ್‌.ಟಿ.ನಾಯ್ಕ, ಗೌರೀಶ ಎಂ.ನಾಯ್ಕ ಮಾತನಾಡಿದರು.

ಊರಿನ ಗಣ್ಯರಾದ ಬೀರಲಿಂಗ ನಾಯ್ಕ ಹಲ್ಸಗಾರ, ತಿಮ್ಮಪ್ಪ ದ್ಯಾವ ನಾಯ್ಕ ಹಲ್ಸಗಾರ, ಹಾಗೂ ಯೋಧ ಸರ್ವೋತ್ತಮ ನಾಯ್ಕ ಇವರುಗಳನ್ನು ದುರ್ಗಾಂಬಿಕಾ ನಾಟ್ಯ ಸಂಘದವರು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ಸರ್ವೋತ್ತಮ ನಾಯ್ಕ ಮಾತನಾಡಿದರು.

ಭಾವನ ಉಮಾಪತಿ ನಾಯ್ಕ ಸ್ವಾಗತಿಸಿದರು. ಗಣೇಶ ನಾಯ್ಕ ನಿರೂಪಿಸಿದರು. ನಂತರ ದುರ್ಗಾಂಬಿಕಾ ನಾಟ್ಯ ಸಂಘದಿಂದ ಬಸವರಾಜ್‌ ಎಚ್‌.ಕತ್ತಿ ವಿರಚಿತ 'ವಿಷದ ಹುತ್ತಕ್ಕೆ ಹಾಲೆರದ ಮುತ್ತೈದೆ' ಎಂಬು ಸಾಮಾಜಿಕ ನಾಟಕ ಪ್ರದರ್ಶನ ನಡೆಯಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ