ಆ್ಯಪ್ನಗರ

ನಾಳೆಯಿಂದ ದಾಂಡೇಲಿಯಲ್ಲಿ ಹಾರ್ನ್‌ಬಿಲ್‌ ಹಬ್ಬ

ಉತ್ತರ ಕನ್ನಡದ ದಾಂಡೇಲಿಯಲ್ಲಿ ನಾಳೆಯಿಂದ 2 ದಿನಗಳ ಹಾರ್ನ್‌ಬಿಲ್‌ ಹಬ್ಬ ನಡೆಯಲಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಹಾರ್ನ್‌ಬಿಲ್‌ ಹಕ್ಕಿಯ ಕುರಿತಾದ ವಿಚಾರಗೋಷ್ಠಿಗಳು, ಛಾಯಾಚಿತ್ರ ಪ್ರದರ್ಶನಗಳು ನಡೆಯಲಿವೆ.

Vijaya Karnataka 15 Feb 2019, 9:36 am
ದಾಂಡೇಲಿ: ನಗರದ ಸರಕಾರಿ ಮರಮುಟ್ಟುಗಳ ಕೋಠಿ ಆವರಣದ ಹಾರ್ನ್‌ಬಿಲ್‌ ಹಬ್ಬ (ದಾಸ ಮಂಗಟ್ಟೆ ಹಕ್ಕಿಗಳ ಉತ್ಸವ) ನಾಳೆಯಿಂದ ನಡೆಯಲಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಹಾರ್ನ್‌ಬಿಲ್‌ ಹಕ್ಕಿಯ ಕುರಿತಾದ ವಿಚಾರಗೋಷ್ಠಿಗಳು, ಛಾಯಾಚಿತ್ರ ಪ್ರದರ್ಶನಗಳು ನಡೆಯಲಿವೆ.
Vijaya Karnataka Web Hornbill Fest


ಫೆ. 16ರಂದು ಬೆಳಗ್ಗೆ 11 ಗಂಟೆಗೆ ಉದ್ಘಾಟನಾ ಕಾರ‍್ಯಕ್ರಮ ನಡೆಯಲಿದೆ. ಮಧ್ಯಾಹ್ನದ ನಂತರ ಸಾಂಸ್ಕೃತಿಕ ಕಾರ‍್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ 2.30ರಿಂದ ಎರಡು ಸುತ್ತು ರಸಪ್ರಶ್ನೆ, 3.30ರಿಂದ 3 ಮತ್ತು 4ನೇ ಗೋಷ್ಠಿ ನಡೆಯಲಿದೆ. 6.30ಕ್ಕೆ ಸುದರ್ಶನ ತಂಡದಿಂದ ರೂಪಕ, ನಂತರ ನಾಟ್ಯಾಂಜಲಿ ನೃತ್ಯ ಕೇಂದ್ರದವರಿಂದ ಭರತ ನಾಟ್ಯ, ಕುಣಬಿ ಪುಗಡಿ ನೃತ್ಯ, ಯಕ್ಷ ಗಾನ ಮುಂತಾದ ಕಾರ್ಯಕ್ರಮ ನಡೆಯಲಿದೆ.

ನಾನಾ ಗೋಷ್ಠಿ, ಪಕ್ಷಿ ವೀಕ್ಷಣೆ: 16ರಂದು ಬೆಳಗ್ಗೆ 10 ಗಂಟೆಗೆ ಬಂಗೂರನಗರ ಡಿಗ್ರಿ ಕಾಲೇಜಿನಿಂದ ಮೆರವಣಿಗೆ ಹೊರಟು ನಗರದ ಮುಖ್ಯ ಬೀದಿಗಳಲ್ಲಿ ಸಾಗಿ ಹಾರ್ನಬಿಲ್‌ ಹಕ್ಕಿ ಹಬ್ಬದ ಸಂಭಾಂಗಣ ಸೇರಲಿದೆ. 11 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ, ಉದ್ಘಾಟಕರ ಭಾಷಣ, 12 ಗಂಟೆಯಿಂದ ಹಾರ್ನಬಿಲ್‌ ಹಕ್ಕಿ ಕುರಿತು ವಿಚಾರಸಂಕಿರಣ ನಡೆಯಲಿದೆ.

ನಾನಾ ಸ್ಪರ್ಧೆ: ಫೆ.17ರಂದು ಬೆಳಗ್ಗೆ 7 ರಿಂದ 9 ಗಂಟೆವರೆಗೆ ನಗರದ ದಂಡಕಾರಣ್ಯದಲ್ಲಿ ಚಿತ್ರ ಬಿಡಿಸುವ ಸ್ಪರ್ಧೆ, ಸೈಕಲ್‌ ಸ್ಪರ್ಧೆ, 10 ರಿಂದ ಮಧ್ಯಾಹ್ನ 3ಗಂಟೆ ವರೆಗೆ ಹಂತ ಹಂತವಾಗಿ 7 ಹಾರ್ನಬಿಲ್‌ ಹಕ್ಕಿ ಕುರಿತು ಗೋಷ್ಠಿಗಳು ನಡೆಯಲಿವೆ. ಸಂಜೆ 3 ಬಹುಮಾನ ವಿತರಣೆ 4.30ರಿಂದ ಪಕ್ಷಿ ವೀಕ್ಷ ಣೆ ನಡೆಯಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.

ಸಚಿವ ಸತೀಶ ಜಾರಕಿಹೊಳಿ ಹಾರ್ನ್‌ಬಿಲ್‌ ಹಬ್ಬವನ್ನು ಉದ್ಘಾಟಿಸಲಿದ್ದರೆ. ಸಚಿವ ಆರ್‌.ವಿ.ದೇಶಪಾಂಡೆ ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಉಪಸ್ಥಿತರಿರುವರು. ಶಾಸರಾದ ಶಿವರಾಮ ಹೆಬ್ಬಾರ, ವಿಶ್ವೇಶ್ವರ ಹೆಗಡೆ ಕಾಗೇರಿ, ದಿನಕರ ಶೆಟ್ಟಿ, ರೂಪಾಲಿ ನಾಯ್ಕ, ಸುನೀಲ ನಾಯ್ಕ, ಬಸವರಾಜ ಹೊರಟ್ಟಿ, ಎಸ್‌.ಎಲ್‌.ಘೋಟ್ನೇಕರ ಪಾಲ್ಗೊಳ್ಳಲಿದ್ದಾರೆ. ಜಿ.ಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಉಪಾಧ್ಯಕ್ಷ ಸಂತೋಷ ರೇಣಕೆ ಪಾಲ್ಗೊಳ್ಳಲಿದ್ದಾರೆ.

ಮುಖ್ಯ ಭಾಷಣಕಾರರಾಗಿಆಸ್ಕರ್‌ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಪಾಕರ ಸೇನಾನಿ ಪಾಲ್ಗೊಳುವರು.ಅತಿಥಿಗಳಾಗಿ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಸಂದೀಪ ದವೆ, ಅರಣ್ಯ ಪಡೆ ಮುಖ್ಯಸ್ಥರು, ಪ್ರಧಾನ ಅರಣ್ಯ ಮುಖ್ಯ ಸಂರಕ್ಷ ಣಾಧಿಕಾರಿ ಪುನಾಟಿ ಶ್ರೀಧರ, ವನ್ಯಜೀವಿ ಪ್ರಧಾನ ಅರಣ್ಯ ಮುಖ್ಯ ಸಂರಕ್ಷ ಣಾಧಿಕಾರಿ ಜಯರಾಮ ಸಿ. ಕೆಎಫ್‌ಡಿಸಿ ಮತ್ತು ಕೆಎಸ್‌ಎಫ್‌ಐಸಿ ವ್ಯವಸ್ಥಾಪಕ ನಿರ್ದೇಶಕ ಸಂಜಯ ಮೋಹನ, ಪ್ರವಾಸೋದ್ಯಮ ಕಾರ್ಯದರ್ಶಿ ಅನಿಲಕುಮಾರ ಟಿ.ಕೆ. ಮುಂತಾದವರು ಉಪಸ್ಥಿತರಿರುವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ