ಆ್ಯಪ್ನಗರ

ಅರಣ್ಯವಾಸಿಗಳ ಗೋಳು ಕೇಳುವ ಇರಾದೆ ಯಾವ ಸರಕಾರಗಳಿಗೂ ಇದ್ದಂತಿಲ್ಲ: ಕಾಗೋಡು

ಅನೇಕ ಸಂದರ್ಭದಲ್ಲಿ ಶಾಸನ ಸಭೆಯಲ್ಲಿ ಚರ್ಚೆಗೆ ಅವಕಾಶ ನೀಡಿದರೂ ಜನಪ್ರತಿನಿಧಿಗಳು ಧ್ವನಿ ಎತ್ತುತ್ತಿರಲಿಲ್ಲ. ಅರಣ್ಯವಾಸಿಗಳಿರುವ ಜಿಲ್ಲೆಯ ಸಂಸದರು ಲೋಕಸಭೆಯಲ್ಲಿ ಇಂಥ ವಿಷಯಗಳ ಚರ್ಚೆ ಸಂದರ್ಭ ಸಮರ್ಪಕ ವಿಷಯ ಮಂಡಿಸಲಿಲ್ಲ. ಇನ್ನಾದರೂ ಮುಂಬರುವ ಅಧಿವೇಶಗಳಲ್ಲಿ ಅರಣ್ಯವಾಸಿಗಳ ಪರ ನಿಲ್ಲಬೇಕು ಎಂದು ಕಾಗೋಡು ತಿಮ್ಮಪ್ಪ ಒತ್ತಾಯಿಸಿದರು.

Vijaya Karnataka Web 14 Sep 2020, 10:51 am
ಶಿರಸಿ: ಅರಣ್ಯವಾಸಿಗಳಿಗೆ ಅರಣ್ಯ ಹಕ್ಕು ಒದಗಿಸಲು ಜನಪ್ರತಿನಿಧಿಗಳು ಶಾಸನಸಭೆ ಹಾಗೂ ಲೋಕಸಭೆಯಲ್ಲಿ ಜನಪರವಾಗಿ ಧ್ವನಿ ಎತ್ತುವ ಇಚ್ಛಾಶಕ್ತಿ ತೋರಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸಲಹೆ ನೀಡಿದ್ದಾರೆ.
Vijaya Karnataka Web kagodu


ಜಿಲ್ಲಾಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯ ಭೂಮಿಯಲ್ಲಿ ವಾಸಿಸುವ ಜನರ ಸಂಕಷ್ಟ ಅರಿತು ಅವರಿಗೆ ಹಕ್ಕು ಒದಗಿಸಲು ಜನಪರ ಕಾನೂನು ಹೇಗೆ ರೂಪಿಸಬೇಕು ಎಂಬುದನ್ನು ಜನಪ್ರತಿನಿಧಿಗಳು ಸರಕಾರಗಳ ಮುಂದೆ ಇಡದೇ ಇರುವುದೇ ಅರಣ್ಯವಾಸಿಗಳ ಸಮಸ್ಯೆ ಜೀವಂತವಾಗಿರಲು ಕಾರಣ ಎಂದರು.

ಹಿಂದಿ ದಿವಸ್‌ ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರ ಅಭಿಯಾನ

ಸರಕಾರ ಯಾರಿಗಾಗಿ ಕಾನೂನು ರೂಪಿಸಿದೆ ಎಂದು ಪ್ರಶ್ನಿಸಿದ ಕಾಗೋಡು, ಅದನ್ನು ಅನುಷ್ಠಾನಗೊಳಿಸಬೇಕಾದವರು ಯಾರು? ರಾಜ್ಯ ಹಾಗೂ ಕೇಂದ್ರದಲ್ಲಿ ಸರಕಾರ ನಡೆಸುವವರಿಗೆ ಇಚ್ಛಾಶಕ್ತಿ ಇರಬೇಕು. ಅರಣ್ಯವಾಸಿಗಳ ಗೋಳು ಕೇಳುವ ಇರಾದೆ ಯಾವ ಸರಕಾರಗಳಿಗೂ ಇದ್ದಂತಿಲ್ಲ ಎಂದು ದೂರಿದರು. ಅರಣ್ಯವಾಸಿಗಳ ಜಿಲ್ಲೆಗಳಿಂದ ಜನಪ್ರತಿನಿಧಿಗಳಾಗಿ ಹೋದವರು ಈ ನಿಟ್ಟಿನಲ್ಲಿ ಕೆಲಸ ಮಾಡಿದ್ದರೆ ಇಂಥ ಸಮಸ್ಯೆ ಇರುತ್ತಿರಲಿಲ್ಲ ಎಂದು ಹೇಳಿದರು.

ದೇಶದ ಇತರೆ ಭಾಷಿಕರು ದಂಗೆ ಏಳುವ ಮುನ್ನ ಹಿಂದಿ ಏರಿಕೆ ನಿಲ್ಲಿಸಿ; ಕೇಂದ್ರಕ್ಕೆ ಎಚ್‌ಡಿಕೆ ಎಚ್ಚರಿಕೆ..!

ಇನ್ನು ಅನೇಕ ಸಂದರ್ಭದಲ್ಲಿ ಶಾಸನ ಸಭೆಯಲ್ಲಿ ಚರ್ಚೆಗೆ ಅವಕಾಶ ನೀಡಿದರೂ ಜನಪ್ರತಿನಿಧಿಗಳು ಧ್ವನಿ ಎತ್ತುತ್ತಿರಲಿಲ್ಲ. ಅರಣ್ಯವಾಸಿಗಳಿರುವ ಜಿಲ್ಲೆಯ ಸಂಸದರು ಲೋಕಸಭೆಯಲ್ಲಿ ಇಂಥ ವಿಷಯಗಳ ಚರ್ಚೆ ಸಂದರ್ಭ ಸಮರ್ಪಕ ವಿಷಯ ಮಂಡಿಸಲಿಲ್ಲ. ಇನ್ನಾದರೂ ಮುಂಬರುವ ಅಧಿವೇಶಗಳಲ್ಲಿ ಅರಣ್ಯವಾಸಿಗಳ ಪರ ನಿಲ್ಲಬೇಕು ಎಂದು ಕಾಗೋಡು ತಿಮ್ಮಪ್ಪ ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ