ಆ್ಯಪ್ನಗರ

ಆದಾಯವೂ ಇಲ್ಲನೆರವು ನೀಡುವವರು ಇಲ್ಲ

ಶಿರಸಿ : ಮಲೆನಾಡಿನ ಜಿಲ್ಲೆಗಳ ಸಾವಿರಾರು ಮಂದಿ ಅರ್ಚಕರು ಹಾಗೂ ಪುರೋಹಿತ ವೃತ್ತಿ ನಿರತರು ಬೆಂಗಳೂರು ಮೈಸೂರು ಸೇರಿದಂತೆ ನಾನಾ ನಗರಗಳಲ್ಲಿಇದ್ದಾರೆ. ಆದರೆ ಈಗ ಇಂಥವರಿಗೆ ದೀರ್ಘ ಅವಧಿಯ ಸಂಕಷ್ಟದ ಸ್ಥಿತಿ ಎದುರಾಗಿದೆ.

Vijaya Karnataka 31 May 2020, 5:00 am
ಶಿರಸಿ : ಮಲೆನಾಡಿನ ಜಿಲ್ಲೆಗಳ ಸಾವಿರಾರು ಮಂದಿ ಅರ್ಚಕರು ಹಾಗೂ ಪುರೋಹಿತ ವೃತ್ತಿ ನಿರತರು ಬೆಂಗಳೂರು ಮೈಸೂರು ಸೇರಿದಂತೆ ನಾನಾ ನಗರಗಳಲ್ಲಿಇದ್ದಾರೆ. ಆದರೆ ಈಗ ಇಂಥವರಿಗೆ ದೀರ್ಘ ಅವಧಿಯ ಸಂಕಷ್ಟದ ಸ್ಥಿತಿ ಎದುರಾಗಿದೆ.
Vijaya Karnataka Web there is no income and no giver
ಆದಾಯವೂ ಇಲ್ಲನೆರವು ನೀಡುವವರು ಇಲ್ಲ


ಅನೇಕಾರು ವರ್ಷಗಳಿಂದ ಪಾರಂಪರಿಕವಾಗಿ ಎಂಬಂತೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪ್ರಾಂತ್ಯ ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರ ಪ್ರಾಂತ್ಯ ಸೇರಿದ ಸೇರಿದಂತೆ ವಿವಿಧೆಡೆಯ ಬಹುದೊಡ್ಡ ಪ್ರಮಾಣದ ಧಾರ್ಮಿಕ ಕಾರ್ಯ ಪರಿಣಿತ ಬ್ರಾಹ್ಮಣ ಸಮುದಾಯದವರು ರಾಜ್ಯದ ನಾನಾ ನಗರಗಳಲ್ಲಿಕಾರ್ಯ ಮಾಡುತ್ತಿದ್ದಾರೆ. ಅಲ್ಲೆಲ್ಲಾಈ ಪ್ರದೇಶದವರಿಗೆ ವಿಶೇಷ ಮನ್ನಣೆಯೂ ಇದೆ.ಆದರೆ ಪ್ರಸ್ತುತ ಸನ್ನಿವೇಶ ಇಂಥ ಧಾರ್ಮಿಕ ಪೂಜೆ ಪುನಸ್ಕಾರ ವೃತ್ತಿ ನಿರತರಿಗೆ ಪ್ರತಿಕೂಲವಾಗಿ ಪರಿಣಮಿಸಿದೆ.

ನಿರ್ಬಂಧ ಫಜೀತಿ... ಕೊರೊನಾ ಕಾಯಿಲೆ ವಿರುದ್ಧದ ಹೋರಾಟದ ಕ್ರಮಗಳ ಮೂಲಕ ದೇವರ ಸೇವಾ ಕಾರ್ಯಗಳನ್ನು ನಿರ್ಬಂಧಿಸಿದಂತೆ ಆಗಿದೆ. ರಾಜ್ಯದ ಎಲ್ಲದೇವಾಲಯಗಳು, ಮಠ ಮಂದಿರಗಳು ಕಳೆದ ಎರಡು ತಿಂಗಳಿಗೂ ಹೆಚ್ಚಿನ ಅವಧಿಯಿಂದ ಬಾಗಿಲು ಮುಚ್ಚಿವೆ.ಇದರಿಂದಾಗಿ ಅವುಗಳಲ್ಲಿಕಾರ್ಯನಿರ್ವಹಿಸುತ್ತಿದ್ದ ಅರ್ಚಕರು ಸಹಾಯಕರು ತೊಂದರೆಗೆ ಸಿಲುಕಿದ್ದಾರೆ. ಇನ್ನೊಂದೆಡೆ ಮನೆ ಮನೆಗಳಿಗೆ ತೆರಳಿ ಧಾರ್ಮಿಕ ಹಾಗೂ ಮಂಗಲ ಕಾರ್ಯಗಳ ಪೌರೋಹಿತ್ಯ ನಡೆಸಿಕೊಡುವವರಿಗೆ ಅದರಲ್ಲೂತಮ್ಮ ಊರಿನಿಂದ 400-500 ಕಿಮೀ ದೂರದಲ್ಲಿರುವ

ಶಿರಸಿ, ಸಿದ್ದಾಪುರ, ಯಲ್ಲಾಪುರ, ಕುಮಟಾ, ಹೊನ್ನಾವರ ಮತ್ತು ಸಾಗರ ಸೇರಿದಂತೆ ಮಲೆನಾಡು ಪ್ರದೇಶದಿಂದ ನಗರ ಸೇರಿದವರಿಗೆ ಈಗ ಅತಂತ್ರ ಸ್ಥಿತಿ ಉಂಟಾಗಿದೆ ಎನ್ನುತ್ತಾರೆ.

ನೆರವು ಇಲ್ಲ... ಇತ್ತ ಮಠ ಮಂದಿರಗಳು ಬಾಗಿಲು ಮುಚ್ಚಿದ್ದರಿಂದ ಮತ್ತು ಧಾರ್ಮಿಕ ಸಮಾರಂಭಗಳು, ಮಂಗಳ ಕಾರ್ಯಗಳಿಗೆ ನಿರ್ಬಂಧದ ಕಾರಣದಿಂದ ದಿನನಿತ್ಯದ ಆದಾಯವೂ ಇಲ್ಲ. ಅತ್ತ ಯಾವುದೇ ಫಲಾನುಭವಿಗಳ ಯಾದಿಯಲ್ಲಿಇಲ್ಲದ್ದರಿಂದ ಅರ್ಚಕರು ಹಾಗೂ ಪುರೋಹಿತ ವೃತ್ತಿ ನಿರತರಲ್ಲಿಅನೇಕರಿಗೆ ದಾನಿಗಳು, ಸರಕಾರದ ನೆರವು ಕೂಡ ಸಿಗುತ್ತಿಲ್ಲಎಂದು ಕೆಲವರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಸದ್ಯ ಮರಳುವ ಯೋಚನೆ ಇಲ್ಲ...! ಬೆಂಗಳೂರು ಮೈಸೂರು ಸೇರಿದಂತೆ ನಾನಾ ನಗರಗಳಲ್ಲಿ, ಮಠ ಮಂದಿರಗಳಲ್ಲಿಇದ್ದವರಲ್ಲಿಕೆಲವರು ಈಗ ತಮ್ಮ ಊರಿಗೆ ಮರಳಿದ್ದಾರೆ. ಆದರೆ ಕೊರೊನಾ ಹಾವಳಿ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಇನ್ನೂ ಆರೆಂಟು ತಿಂಗಳ ಕಾಲ ನಗರದ ಜನಜೀವನ ಯಥಾಸ್ಥಿತಿಗೆ ಬರುವಂತೆ ತೋರುತ್ತಿಲ್ಲ. ಆದ್ದರಿಂದ ಕೆಲವರು ಮರಳಿ ಬೆಂಗಳೂರು ಸೇರುವ ಬಗ್ಗೆ ಸದ್ಯಕ್ಕೆ ಯೋಚನೆ ಮಾಡುತ್ತಿಲ್ಲಎಂದು ಶಿರಸಿ, ಯಲ್ಲಾಪುರ, ಸಿದ್ದಾಪುರ, ಸಾಗರ ಮತ್ತಿತರ ಕಡೆಗಳ ಕೆಲವು ಯುವ ಅರ್ಚಕರು ಪತ್ರಿಕೆಗೆ ತಿಳಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ