ಆ್ಯಪ್ನಗರ

ಈ ಮಕ್ಕಳಿಗೆ ಆತಂಕವೇ ಅಭ್ಯಾಸ

ಜೋಯಿಡಾ : ತಾಲೂಕಿನ ಕುಂಬಾರವಾಡಾದಲ್ಲಿರುವ ಹಿಂದುಳಿದ ವರ್ಗಗಳ ಇಲಾಖೆಯ ಬಾಲಕರ ಮೆಟ್ರಿಕ್‌ ಪೂರ್ವ ವಸತಿ ನಿಲಯದ ಕಟ್ಟಡದ ಸ್ಥಿತಿ ಶೋಚನೀಯವಾಗಿದೆ, ನೂರಾರು ವರ್ಷ ಹಳೆಯದಾಗಿರುವ ಈ ಕಟ್ಟಡ ಶಿಥಿಲಗೊಂಡಿದ್ದು, ಇಲ್ಲಿನ ಮಕ್ಕಳಿಗೆ ಆತಂಕವೇ ಅಭ್ಯಾಸವಾದಂತಾಗಿದೆ.

Vijaya Karnataka 4 Dec 2018, 5:00 am
ಜೋಯಿಡಾ : ತಾಲೂಕಿನ ಕುಂಬಾರವಾಡಾದಲ್ಲಿರುವ ಹಿಂದುಳಿದ ವರ್ಗಗಳ ಇಲಾಖೆಯ ಬಾಲಕರ ಮೆಟ್ರಿಕ್‌ ಪೂರ್ವ ವಸತಿ ನಿಲಯದ ಕಟ್ಟಡದ ಸ್ಥಿತಿ ಶೋಚನೀಯವಾಗಿದೆ, ನೂರಾರು ವರ್ಷ ಹಳೆಯದಾಗಿರುವ ಈ ಕಟ್ಟಡ ಶಿಥಿಲಗೊಂಡಿದ್ದು, ಇಲ್ಲಿನ ಮಕ್ಕಳಿಗೆ ಆತಂಕವೇ ಅಭ್ಯಾಸವಾದಂತಾಗಿದೆ.
Vijaya Karnataka Web KWR-3 JYD 2
ವಸತಿ ನಿಲಯದ ಬಾಗಿಲು ಕಿತ್ತಿರುವುದು.


ಮಳೆಗಾಲದಲ್ಲಿ ಸೋರುತ್ತದೆ:

ಈ ಕಟ್ಟಡ ಅರಣ್ಯ ಇಲಾಖೆಯ ಹೆಸರಲ್ಲಿದ್ದು , ಮಳೆಗಾಲದಲ್ಲಿ ಸೋರುತ್ತದೆ. ಇಲ್ಲಿನ ವಾರ್ಡನ್‌ಗಳು ಮಳೆಗಾಲದಲ್ಲಿ ಹೇಗೋ ಪ್ಲಾಸ್ಟಿಕ್‌ಗಳನ್ನು ಹಾಕಿ ಸೋರದಂತೆ ಮಾಡಿದ್ದಾರೆ. ಆದರೆ ಅಲ್ಲಿ ಇಲ್ಲಿ ನೀರು ಬೀಳುತ್ತಲೆ ಇರುತ್ತದೆ.

ಕಾಂಪೌಂಡ್‌ ಇಲ್ಲ:

ಹಾಸ್ಟೇಲ್‌ನಲ್ಲಿ ಸದ್ಯ 28 ಬಾಲಕರಿದ್ದು, ಕಟ್ಟಡಕ್ಕೆ ಕಾಂಪೌಡ್‌ ಇಲ್ಲ. ಇದರಿಂದಾಗಿ ಇಲ್ಲಿನ ಮಕ್ಕಳು ತೀರಾ ತೊಂದರೆ ಅನುಭವಿಸಬೇಕಾಗಿದೆ. ನಿತ್ಯವೂ ದನ ಕರುಗಳು ಒಳ ನುಗ್ಗಿ ಕಾಟ ಕೊಡುತ್ತಿವೆ. ಇಲ್ಲಿನ ಮಕ್ಕಳು ಶಾಲೆಗೆ ಹೋದ ಸಂದರ್ಭದಲ್ಲಿ ವಾರ್ಡನ್‌ಗಳು ದನ ಕಾಯುವ ಕೆಲಸ ಮಾಡಬೇಕಾಗಿದೆ.

ಮುರಿದ ಬಾಗಿಲು :

ಈ ಕಟ್ಟಡ ಹಳೆಯದಾಗಿದ್ದರಿಂದ ಬಾಗಿಲು ಮುರಿದಿದ್ದು , ಇದರಿಂದ ಇಲ್ಲಿನ ಮಕ್ಕಳಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ಬೇಲಿ, ಬಾಗಿಲು ಇಲ್ಲದ ಈ ಕಟ್ಟಡ ಮಕ್ಕಳ ಭವಿಷ್ಯ ರೂಪಿಸಲು ಹೇಗೆ ಸಾಧ್ಯ. ದೂರದ ಊರಿನಿಂದ ಬಂದು ಇಲ್ಲಿ ಶಾಲೆ ಕಲಿಯಲು ಉಳಿಯುವ ಮಕ್ಕಳಿಗೆ ಈ ಸ್ಥಿತಿ ಬಂದರೂ ಸರ್ಕಾರ ಮಾತ್ರ ಯಾವುದೇ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿ ಎಂಬುದು ಗ್ರಾಮಸ್ಥರ ಅಳಲು.

ಕಟ್ಟಡ ಬಹಳ ಚಿಕ್ಕದು

ವಸತಿ ನಿಲಯ ತೀರಾ ಚಿಕ್ಕದಾಗಿದ್ದು ಇಲ್ಲಿ ಇಕ್ಕಟ್ಟಿನಲ್ಲಿ ಮಕ್ಕಳು ಇರುವಂತಾಗಿದೆ. ಓದಲು-ಬರೆಯಲು ಯಾವುದೇ ಸರಿಯಾದ ವ್ಯವಸ್ಥೆ ಇಲ್ಲ. ಕಾಲು ಚಾಚಿದರೆ ಆ ಬದಿಯಲ್ಲಿ ಇದ್ದವನಿಗೆ ತಾಗೀತು ಜೋಕೆ ಎನ್ನುವ ಹಾಗೆ ಇದೆ ಇಲ್ಲಿನ ಮಕ್ಕಳ ಸ್ಥಿತಿ. ಅಷ್ಟೇ ಅಲ್ಲದೇ ಅಡುಗೆ ಮಾಡಲು ಇಕ್ಕಟ್ಟಿನ ಜಾಗವಿದ್ದು ಹೇಗೋ ನಿಭಾಯಿಸುತ್ತಿದ್ದಾರೆ. ಹೀಗಾಗಿ ಇಲ್ಲಿನ ಮಕ್ಕಳಿಗೆ ಓದಿನ ಕಡೆಗೆ ಗಮನ ಹರಿಸುವುದು ಕಷ್ಟವಾಗಿದೆ.

ಹಿಂದುಳಿದ ವರ್ಗಗಳ ಇಲಾಖೆಯ ಗಂಡು ಮತ್ತು ಹೆಣ್ಣು ಮಕ್ಕಳ ಹಾಸ್ಟೇಲ್‌ಗಳಿಗೆ ಕುಂಬಾರವಾಡಾದಲ್ಲಿ ಹೊಸ ಜಾಗ ಸಿಕ್ಕಿದ್ದು ಈಗ ಕಟ್ಟಡ ಕಟ್ಟಲು ಹಣ ಮಂಜೂರಾಗಿದೆ ಎನ್ನುತ್ತಾರೆ ವಾರ್ಡನ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ