ಆ್ಯಪ್ನಗರ

ಗದ್ದೆಗೆ ಕಾಡುಕೋಣ ಲಗ್ಗೆ

ಹೊನ್ನಾವರ: ಇಲ್ಲಿನ ಚಂದಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡ್ನೀರು ಭಾಗದಲ್ಲಿಶನಿವಾರ ತಡರಾತ್ರಿ ಭತ್ತದ ಗದ್ದೆಗಳಿಗೆ ಕಾಡುಕೋಣಗಳು ನುಗ್ಗಿ ಬೆಳೆ ಹಾನಿಮಾಡಿವೆ.

Vijaya Karnataka 17 Sep 2019, 5:00 am
ಹೊನ್ನಾವರ: ಇಲ್ಲಿನ ಚಂದಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡ್ನೀರು ಭಾಗದಲ್ಲಿಶನಿವಾರ ತಡರಾತ್ರಿ ಭತ್ತದ ಗದ್ದೆಗಳಿಗೆ ಕಾಡುಕೋಣಗಳು ನುಗ್ಗಿ ಬೆಳೆ ಹಾನಿಮಾಡಿವೆ.
Vijaya Karnataka Web 16 HNR 2A_24


ಕಡ್ನೀರಿನ ಗುಡ್ನಗದ್ದೆ ಭಾಗದಲ್ಲಿಆಕಸ್ಮಿಕವಾಗಿ ಕಾಡುಕೋಣ ಕಾಣಿಸಿಕೊಂಡಿದೆ. ರಾಮ ನಾರಾಯಣ ಗೌಡ ಎಂಬವರು ಗದ್ದೆಯನ್ನು ಕಾಡುಪ್ರಾಣಿ ಹಾನಿಮಾಡುತ್ತಿರುವುದನ್ನು ಗಮನಿಸಿ ರಾತ್ರಿ ಗದ್ದೆಗೆ ಹೋಗಿದ್ದರು. ಈ ವೇಳೆ ಗದ್ದೆಯಲ್ಲಿದೊಡ್ಡ ಕೋಣ ಇರುವುದು ಕಂಡುಬಂತು. ಬೆಳಕಿನೊಂದಿಗೆ ಪರಿಶೀಲಿಸಿದಾಗ ಕಾಡುಕೋಣ ಎನ್ನುವುದು ಖಚಿತವಾಯಿತು. ಭಾನುವಾರ ಬೆಳಗಿನಜಾವ ಕಾಡುಕೋಣ ಹಾದು ಹೋಗಿರುವ ಜಾಗವನ್ನು ಪರೀಕ್ಷಿಸಿದಾಗ ಅದರ ಹೆಜ್ಜೆ ಗುರುತು ಕಾಣಿಸಿಕೊಂಡಿದೆ. ಇದಲ್ಲದೆ ಸುಮಾರು 20 ಗುಂಟೆ ಜಾಗದಷ್ಟು ಗದ್ದೆಯನ್ನು ಹಾನಿಪಡಿಸಿದೆ.

ತೋಟ, ಗದ್ದೆಗಳಿಗೆ ಕಾಡುಪ್ರಾಣಿಗಳ ಕಾಟ ಹೆಚ್ಚುತ್ತಿರುವ ಬೆನ್ನಲ್ಲೇ ಕಾಡುಕೋಣದ ಹಾವಳಿ ಆರಂಭವಾಗಿರುವುದು ರೈತರ ವಲಯದಲ್ಲಿಆತಂಕ ಸೃಷ್ಟಿಸಿದೆ.

ಮಂಗ, ಹಂದಿ, ಚಿಪ್ಪಕ್ಕಿ, ಮೊಲ ಮುಂತಾದ ಕಾಡುಪ್ರಾಣಿಗಳು ಜಮೀನಿಗೆ ಬಂದು ಬೆಳೆಗಳನ್ನು ಹಾಳುಮಾಡುವುದು ಸರ್ವೆಸಾಮಾನ್ಯವಾಗಿತ್ತು. ಆದರೆ ಇತ್ತೀಚೆಗೆ ಹುಲಿ, ಚಿರತೆ, ಕಾಡುಕೋಣಗಳಂತಹ ಕ್ರೂರ ಕಾಡುಪ್ರಾಣಿಗಳು ನಾಡಿಗೆ ಲಗ್ಗೆ ಇಡುತ್ತಿರುವುದು ಜನರಲ್ಲಿತೀವ್ರ ಭಯದ ವಾತಾವರಣ ನಿರ್ಮಿಸಿದೆ.

ಬೇಲಿಗೂ ಅಂಜುತ್ತಿಲ್ಲ: ಕಡ್ನೀರು ಭಾಗದಲ್ಲಿಹಂದಿ ಮತ್ತಿತರ ಪ್ರಾಣಿಗಳು ಗದ್ದೆಗಳಿಗೆ ಬರುತ್ತವೆ ಎಂಬ ಕಾರಣಕ್ಕೆ ಹಳೆಯ ಸೀರೆ ಮತ್ತು ಮುಳ್ಳು ಗಿಡಗಳ ಬೇಲಿ ಮಾಡಿದರೂ ಪ್ರಾಣಿಗಳು ಅದನ್ನು ಮೀರಿ ಕೃಷಿ ಜಮೀನಿಗೆ ನುಗ್ಗುತ್ತಿರುವುದು ರೈತರು ಸಂಕಷ್ಟ ಅನುಭವಿಸುವಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ