ಆ್ಯಪ್ನಗರ

ತಂಬಾಕು ಸೇವನೆ ಕಡ್ಡಾಯವಾಗಿ ನಿಯಂತ್ರಿಸಿ

ಸಿದ್ದಾಪುರ : ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ತಂಬಾಕು ಸೇವನೆಯ ವಿರುದ್ಧ ಜಾಗೃತಿ ಮೂಡಿಸಲು ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ತಹಸೀಲ್ದಾರ ಗೀತಾ ಸಿ.ಜಿ. ಅಧ್ಯಕ್ಷ ತೆಯಲ್ಲಿ ತಂಬಾಕು ನಿಯಂತ್ರಣಾ ಕೋಶದ ತಾಲೂಕು ಮಟ್ಟದ ಸಭೆ ಮಂಗಳವಾರ ನಡೆಯಿತು.

Vijaya Karnataka 4 Jul 2019, 5:00 am
ಸಿದ್ದಾಪುರ : ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ತಂಬಾಕು ಸೇವನೆಯ ವಿರುದ್ಧ ಜಾಗೃತಿ ಮೂಡಿಸಲು ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ತಹಸೀಲ್ದಾರ ಗೀತಾ ಸಿ.ಜಿ. ಅಧ್ಯಕ್ಷ ತೆಯಲ್ಲಿ ತಂಬಾಕು ನಿಯಂತ್ರಣಾ ಕೋಶದ ತಾಲೂಕು ಮಟ್ಟದ ಸಭೆ ಮಂಗಳವಾರ ನಡೆಯಿತು.
Vijaya Karnataka Web KWR-2SDPR1-A


ತಹಸೀಲ್ದಾರ ಗೀತಾ ಸಿ.ಜಿ. ಮಾತನಾಡಿ, ತಂಬಾಕು ಸೇವನೆಯಿಂದ ಮನುಷ್ಯನ ಆರೋಗ್ಯಕ್ಕೆ ಸಾಕಷ್ಟು ಹಾನಿಯಾಗುತ್ತದೆ. ಅನೇಕ ರೋಗಗಳು ಬರುವುದಲ್ಲದೇ ಕ್ಯಾನ್ಸರ್‌ನಂತಹ ಭಯಾನಕ ಕಾಯಿಲೆ ತಂಬಾಕು ಸೇವನೆಯಿಂದ ಬರುತ್ತದೆ. ತಂಬಾಕು ಸೇವನೆಯನ್ನು ಕಡ್ಡಾಯವಾಗಿ ನಿಯಂತ್ರಿಸಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ತಂಬಾಕು ನಿಯಂತ್ರಣ ಕೋಶದ ಮುಖ್ಯ ಕಾರ್ಯವಾಗಿರುತ್ತದೆ ಎಂದು ಹೇಳಿದರು.

ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಪ್ರೇಮಕುಮಾರ ನಾಯ್ಕ ಮಾತನಾಡಿ, ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಅಧಿನಿಯಮ 2003ರ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಅಪರಾಧವಾಗಿದೆ. ಇದಕ್ಕೆ ದಂಡ ಸಹಿತ ಶಿಕ್ಷೆಯನ್ನು ನೀಡಬಹುದಾಗಿದೆ. ತಂಬಾಕು ಉತ್ಪನ್ನಗಳ ನೇರ ಹಾಗೂ ಪರೋಕ್ಷ ಜಾಹೀರಾತು ಪ್ರಕಟಿಸುವುದು ಅಪರಾಧವಾಗಿದೆ. ಅದೇ ರೀತಿ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ತಂಬಾಕು ಉತ್ಪನ್ನ ಮಾರಾಟ ಮಾಡುವುದೂ ದಂಡಾರ್ಹ ಅಪರಾಧವೇ ಆಗಿದೆ. ಶೈಕ್ಷ ಣಿಕ ಸ್ಥಳದಲ್ಲಿ 100 ಗಜದ ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ಮಾಡಬಾರದು, ಅಂಗಡಿಯ ಮುಂಭಾಗದಲ್ಲಿ ಧೂಮಪಾನ ನಿಷೇಧದ ಬೋರ್ಡ್‌ ಹಾಕಬೇಕು ಅಂಗಡಿಯಲ್ಲೂ ಧೂಮಪಾನ ಮಾಡಲು ಅವಕಾಶ ನೀಡಬಾರದು. ಧೂಮಪಾನವನ್ನು ಉತ್ತೇಜಿಸುವ ಬೆಂಕಿಪೊಟ್ಟಣ, ಲೈಟರ್‌ ಮುಂತಾದವುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಇಡಬಾರದು. ಹೀಗೆ ಅನೇಕ ನಿಯಮಗಳನ್ನು ತಂಬಾಕು ಉತ್ಪನ್ನಗಳ ಮಾರಾಟಗಾರರಿಗೆ ವಿಧಿಸಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕ, ತಾ.ಪಂ. ಮುಖ್ಯ ಕಾರ್ಯದರ್ಶಿ ದಿನೇಶ, ಪ.ಪಂ. ಮುಖ್ಯಾಧಿಕಾರಿ ಸತೀಶ ಗುಡ್ಡೆ, ಶಿಕ್ಷ ಣ ಸಂಯೋಜಕ ಕಮಲಾಕರ ನಾಯ್ಕ, ಪಿಎಸ್‌ಐ ಮಂಜುನಾಥ ಬಾರ್ಕಿ, ಲಯನ್ಸ್‌ ಅಧ್ಯಕ್ಷ ಸಿ.ಎಸ್‌.ಗೌಡರ್‌ ಮುಂತಾದವರು ಭಾಗವಹಿಸಿದ್ದರು.

ನಂತರ ತಂಬಾಕು ಕೋಶದ ಸದಸ್ಯರು ತಹಸೀಲ್ದಾರ ನೇತೃತ್ವದಲ್ಲಿ ಬಸ್‌ ನಿಲ್ದಾಣದ ಸುತ್ತಮುತ್ತ ಇರುವ ಅಂಗಡಿಗಳಿಗೆ ಭೇಟಿ ನೀಡಿ ನೂರಾರು ರೂ. ಮೌಲ್ಯದ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡರು. ಮಾರಾಟ ಮಾಡುತ್ತಿದ್ದ ಅಂಗಡಿಕಾರರಿಗೆ ದಂಡವನ್ನೂ ವಿಧಿಸಿದರು.

ಇನ್ನು ಮುಂದೆ ಪಟ್ಟಣದ ಪ್ರತಿ ಅಂಗಡಿಯನ್ನು 15 ದಿನಕ್ಕೊಮ್ಮೆ ಪರಿಶೀಲಿಸಲಾಗುವುದು. ಇಂತಹ ತಂಬಾಕು ಉತ್ಪನ್ನ ಮಾರುವವರಿಗೆ ಕಠಿಣ ದಂಡ ವಿಧಿಸಲಾಗುವುದು ಎಂದು ತಹಸೀಲ್ದಾರ ಗೀತಾ ಸಿ.ಜಿ. ಎಚ್ಚರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ