ಆ್ಯಪ್ನಗರ

ಇಂದು ಅಂಗಾಂಗ ದಾನ ಮಾಹಿತಿ ಕಾರ್ಯಾಗಾರ

ಶಿರಸಿ : ಮೃತ ವ್ಯಕ್ತಿಯ ವಿವಿಧ ಅಂಗಾಂಗ ದಾನ ಹಾಗೂ ದೇಹದಾನದ ಕುರಿತು ಮಾಹಿತಿ ವಿನಿಮಯದ ಕಾರ್ಯಾಗಾರ ನಗರದ ನಯನ ಸಭಾಂಗಣದಲ್ಲಿಸೆ 8ರಂದು ನಡೆಯಲಿದೆ.

Vijaya Karnataka 8 Sep 2019, 5:00 am
ಶಿರಸಿ : ಮೃತ ವ್ಯಕ್ತಿಯ ವಿವಿಧ ಅಂಗಾಂಗ ದಾನ ಹಾಗೂ ದೇಹದಾನದ ಕುರಿತು ಮಾಹಿತಿ ವಿನಿಮಯದ ಕಾರ್ಯಾಗಾರ ನಗರದ ನಯನ ಸಭಾಂಗಣದಲ್ಲಿಸೆ 8ರಂದು ನಡೆಯಲಿದೆ.
Vijaya Karnataka Web today is the organ donation information workshop
ಇಂದು ಅಂಗಾಂಗ ದಾನ ಮಾಹಿತಿ ಕಾರ್ಯಾಗಾರ


ಲಯನ್ಸ್‌ ನಯನ ನೇತ್ರ ಭಂಡಾರದ ಮುಖ್ಯಸ್ಥ ಡಾ. ಶಿವರಾಮ ಕೆವಿ ಸುದ್ದಿಗೋಷ್ಠಿಯಲ್ಲಿಈ ವಿಷಯ ತಿಳಿಸಿದರು. ಇದೇ ಮೊದಲ ಬಾರಿಗೆ ದೇಹದ ನಾನಾ ಅಂಗಾಂಗಗಳ ದಾನದ ಕುರಿತು ಮಾಹಿತಿ ಕಾರ್ಯಾಗಾರ ಸಂಘಟಿಸಲಾಗಿದ್ದು ಪ್ರಮುಖರು ತಜ್ಞರು ಮಾಹಿತಿ ನೀಡಲಿದ್ದಾರೆ ಎಂದರು.

ಲಯನ್ಸ್‌ ಕ್ಲಬ್‌, ರೋಟರಿ ಕ್ಲಬ್‌, ಭಾರತೀಯ ವೈದ್ಯಕೀಯ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಕಾರ್ಯಾಗಾರಕ್ಕೆ ಸಹಯೋಗ ನೀಡುತ್ತಿವೆ. ಐಸಿಆರ್‌ಎಚ್‌ ರಾಜ್ಯ ಸಂಯೋಜಕ ಎಂ. ಕೆ. ಕೃಷ್ಣಪ್ಪ, ಬೆಳಗಾವಿಯ ಡಾ. ಮಲ್ಲಿಕಾರ್ಜುನ ಎಸ್‌ ಕಲಶೆಟ್ಟಿ, ಡಾ. ಎಸ್‌. ಕೆ. ದೇಶಪಾಂಡೆ ಧಾರವಾಡ, ಡಾ ಸುಮನ್‌ ಹೆಗಡೆ ಮಾಹಿತಿ ನೀಡುವರು.

ಸಂಜೆ ಮುಂಡಿಗೆಸರದಲ್ಲಿದೇಹದಾನ ಕುರಿತು ಜಾಗೃತಿ ಸಮಾಲೋಚನೆ ನಡೆಯಲಿದೆ. ಡಾ. ಮಹೇಶ ಹೆಗಡೆ, ಎಂ.ಡಿ. ಹೆಗಡೆ ಬೆಳ್ಳೆಕೇರಿ ಮತ್ತಿತರರು ಪಾಲ್ಗೊಳ್ಳುವರು. ಚಂದ್ರಶೇಖರ ಹೆಗಡೆ, ರವೀಂದ್ರ ಹೆಗಡೆ, ಸಂಜಯು ಹೆಗಡೆ ಅವರನ್ನು ಗೌರವಿಸಲಾಗುತ್ತದೆ ಎಂದರು.

ಡಾ. ವಿಶ್ವನಾಥ ಅಂಕದ, ಲಯನ್ಸ್‌ ಕ್ಲಬ್‌ ಅಧ್ಯಕ್ಷ ಜಿ. ಎ. ಹೆಗಡೆ ಸೋಂದಾ, ಕಾರ್ಯದರ್ಶಿ ಗುರುರಾಜ ಹೊನ್ನಾವರ, ಖಜಾಂಚಿ ಪಾಂಡುರಂಗ ಪೈ, ಎಂ. ಎನ್‌. ಹೆಗಡೆ ಬಳಗಂಡಿ, ರವೀಂದ್ರ ಹೆಗಡೆ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ