ಅಕ್ರಮವಾಗಿ ಗಾಂಜಾ ಸಾಗಣೆ, ಆರೋಪಿ ಸೆರೆ
ಹಳಿಯಾಳ : ಅಕ್ರಮವಾಗಿ ಗಾಂಜಾ ಬೆಳೆದು ಅದನ್ನು ಸಂಗ್ರಹಿಸಿ ಮಾರಾಟ ಮಾಡಲು ಸಾಗಿಸಿದ ಆರೋಪಿಯನ್ನು ಜನಗಾ ಗ್ರಾಮದ ಹಳೆ ಬಸ್ಸ್ಟ್ಯಾಂಡ್ದಲ್ಲಿಶುಕ್ರವಾರ ಬಂಧಿಸಲಾಗಿದೆ.
Vijaya Karnataka 26 Oct 2019, 5:00 am
ಹಳಿಯಾಳ : ಅಕ್ರಮವಾಗಿ ಗಾಂಜಾ ಬೆಳೆದು ಅದನ್ನು ಸಂಗ್ರಹಿಸಿ ಮಾರಾಟ ಮಾಡಲು ಸಾಗಿಸಿದ ಆರೋಪಿಯನ್ನು ಜನಗಾ ಗ್ರಾಮದ ಹಳೆ ಬಸ್ಸ್ಟ್ಯಾಂಡ್ದಲ್ಲಿಶುಕ್ರವಾರ ಬಂಧಿಸಲಾಗಿದೆ.
ತಾಲೂಕಿನ ಕೆಕೆ ಹಳ್ಳಿ ಗ್ರಾಮದ ಅರ್ಜುನ್ ಗೌಡಾ (60) ಬಂಧಿತ ಆರೋಪಿ. ಶುಕ್ರವಾರ ಮುಂಜಾನೆ ಜನಗಾ ಗ್ರಾಮದ ಹಳೆ ಬಸ್ಸ್ಟ್ಯಾಂಡಿನಲ್ಲಿಗಾಂಜಾ ಸಾಗಿಸುತ್ತಿರುವ ಕುರಿತು ಖಚಿತ ಮಾಹಿತಿಯನ್ನು ಬೆನ್ನಟ್ಟಿದ ಹಳಿಯಾಳದ ಪೊಲೀಸರು ತಪಾಸಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆತನಿಂದ 181 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದ್ದು, ಇದರ ಮಾರುಕಟ್ಟೆ ಮೌಲ್ಯ 5 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಎಎಸ್ಐ ಯಲ್ಲಪ್ಪ ಮಾದರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.