ಆ್ಯಪ್ನಗರ

ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ

ಹಳಿಯಾಳ : ಮತಗಟ್ಟೆ ಅಧಿಕಾರಿ ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳ ಒಂದು ದಿನದ ತರಬೇತಿಯು ಇಲ್ಲಿಯ ಮಿನಿವಿಧಾನಸೌಧದ ನೂತನ ಸಭಾಂಗಣದಲ್ಲಿ ಮಂಗಳವಾರ ಯಶಸ್ವಿಯಾಗಿ ನಡೆಯಿತು. ಈಗಾಗಲೇ ನಡೆಸಿದ ತರಬೇತಿಗೆ ಗೈರು ಹಾಜರಾದ ಒಟ್ಟು 42 ಅಧಿಕಾರಿಗಳಿಗೆ ಪ್ರತ್ಯೇಕವಾಗಿ ಲೋಕಸಭಾ ಚುನಾವಣೆಯ ಕುರಿತು ಮಾಹಿತಿಗಳನ್ನು ಕಲೆ ಹಾಕಿ ಮಂಗಳವಾರ ತರಬೇತಿ ನೀಡಲಾಯಿತು.

Vijaya Karnataka 10 Apr 2019, 5:00 am
ಹಳಿಯಾಳ : ಮತಗಟ್ಟೆ ಅಧಿಕಾರಿ ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳ ಒಂದು ದಿನದ ತರಬೇತಿಯು ಇಲ್ಲಿಯ ಮಿನಿವಿಧಾನಸೌಧದ ನೂತನ ಸಭಾಂಗಣದಲ್ಲಿ ಮಂಗಳವಾರ ಯಶಸ್ವಿಯಾಗಿ ನಡೆಯಿತು. ಈಗಾಗಲೇ ನಡೆಸಿದ ತರಬೇತಿಗೆ ಗೈರು ಹಾಜರಾದ ಒಟ್ಟು 42 ಅಧಿಕಾರಿಗಳಿಗೆ ಪ್ರತ್ಯೇಕವಾಗಿ ಲೋಕಸಭಾ ಚುನಾವಣೆಯ ಕುರಿತು ಮಾಹಿತಿಗಳನ್ನು ಕಲೆ ಹಾಕಿ ಮಂಗಳವಾರ ತರಬೇತಿ ನೀಡಲಾಯಿತು.
Vijaya Karnataka Web KWR-09 HLY 1


ಹಿರಿಯ ಕೆಎಎಸ್‌ ಮತ್ತು ತಾಲೂಕಾ ನೋಡಲ್‌ ಅಧಿಕಾರಿಯಾಗಿರುವ ವಿನಾಯಕ ಪಾಲನಕರ, ಸಹಾಯಕ ಚುನಾವಣಾಧಿಕಾರಿ ಪುಟ್ಟಸ್ವಾಮಿ, ಹಳಿಯಾಳದ ತಹಸೀಲ್ದಾರ ಶಿವಾನಂದ ಉಳ್ಳೇಗಡ್ಡಿ, ದಾಂಡೇಲಿ ತಹಸೀಲ್ದಾರ ಚಾಮರಾಜ ಪಾಟೀಲ್‌, ಜೋಯಿಡಾ ತಹಸೀಲ್ದಾರ ಸಂಜಯ ಕಾಂಬ್ಳೆ, ತಾ.ಪಂ. ಇಒ ಡಾ.ಕೆ.ಎಲ್‌.ಯಶವಂತ, ಬಿಇಒ ಸಮೀರಅಹ್ಮದ ಮುಲ್ಲಾ ಅವರು ಒಂದು ದಿನದ ತರಬೇತಿಯನ್ನು ನಡೆಸಿದರು.

ಮೂವರು ಸೆಕ್ಟರ್‌ ಆಫೀಸರ್‌ ಮತ್ತು ಒಬ್ಬ ಮಾಸ್ಟರ್‌ ಟ್ರೈನರ್‌ಗಳೊಂದಿಗೆ 40ಕ್ಕೂ ಅಧಿಕ ತರಬೇತಿದಾರರನ್ನು ಒಟ್ಟುಗೂಡಿಸಿ, ಪ್ರೊಜೆಕ್ಟರ್‌ ಬಳಸಿ ಮತಗಟ್ಟೆಗಳ ಮಾಹಿತಿಯನ್ನು ನೀಡಲಾಯಿತು.

ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಸೇರಿದಂತೆ ಇನ್ನಿತರ 42 ಸಿಬ್ಬಂದಿ ಮೌಲ್ಯಮಾಪನಕ್ಕೆ ತೆರಳಿದ ಪರಿಣಾಮ ಮಾ.31ರಂದು ನಡೆದ ತರಬೇತಿಗೆ ಗೈರು ಹಾಜರಾಗಿದ್ದರು. ಈ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಮಂಗಳವಾರ ವಿಶೇಷ ತರಬೇತಿಯನ್ನು ಆಯೋಜಿಸಲಾಗಿತ್ತು.

ಮುಂದಿನ ತರಬೇತಿಯು ಏ.16ರಂದು ನಡೆಯಲಿದ್ದು, ಸುಮಾರು ಒಂದು ಸಾವಿರಕ್ಕೂ ಅಧಿಕ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಲಿದ್ದಾರೆ. ತರಬೇತಿ ಕೇಂದ್ರಗಳಲ್ಲಿ ಇ.ಡಿ.ಸಿ., ಪೋಸ್ಟಲ್‌ ಬ್ಯಾಲೆಟ್‌ ಕೌಂಟರ್‌ಗಳನ್ನು ಸ್ಥಾಪಿಸಿದ್ದು ವಿಶೇಷವಾಗಿತ್ತು. ತರಬೇತಿ ಪಡೆದ ಮತಗಟ್ಟೆ ಸಿಬ್ಬಂದಿಗೆ ಸೆಕ್ಟರ್‌ ಅಧಿಕಾರಿ ಮತ್ತು ಮಾಸ್ಟರ್‌ ಟ್ರೇನರ್‌ಗಳು ತರಬೇತಿ ಪಡೆದ ವಿಷಯಗಳ ಕುರಿತು ಲಘು ಪ್ರಶ್ನಾವಳಿಗಳನ್ನು ನೀಡಿದ್ದು, ತರಬೇತಿ ಪಡೆದವರು ಧನಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ