ಆ್ಯಪ್ನಗರ

ಏಕರೂಪ ನಾಗರಿಕ ಕಾನೂನು ಜಾರಿ ಮಾಡಿ

ಕುಮಟಾ : ಜನಸಂಖ್ಯಾ ನಿಯಂತ್ರಣಕ್ಕೆ ದೇಶಾದ್ಯಂತ ಏಕರೂಪ ನಾಗರಿಕ ಕಾನೂನು ಜಾರಿಗೊಳಿಸುವಂತೆ ಒತ್ತಾಯಿಸಿ ಹಿಂದು ಜನಜಾಗೃತಿ ಸಮಿತಿಯ ಪದಾಧಿಕಾರಿಗಳು ಶುಕ್ರವಾರ ಕುಮಟಾ ತಹಸೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಮೇಘರಾಜ ನಾಯ್ಕ ಅವರಿಗೆ ಮನವಿ ಸಲ್ಲಿಸಿದರು.

Vijaya Karnataka 21 Sep 2019, 5:00 am
ಕುಮಟಾ : ಜನಸಂಖ್ಯಾ ನಿಯಂತ್ರಣಕ್ಕೆ ದೇಶಾದ್ಯಂತ ಏಕರೂಪ ನಾಗರಿಕ ಕಾನೂನು ಜಾರಿಗೊಳಿಸುವಂತೆ ಒತ್ತಾಯಿಸಿ ಹಿಂದು ಜನಜಾಗೃತಿ ಸಮಿತಿಯ ಪದಾಧಿಕಾರಿಗಳು ಶುಕ್ರವಾರ ಕುಮಟಾ ತಹಸೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಮೇಘರಾಜ ನಾಯ್ಕ ಅವರಿಗೆ ಮನವಿ ಸಲ್ಲಿಸಿದರು.
Vijaya Karnataka Web PHT 20 KMT 2_24


ಜಗತ್ತಿನಲ್ಲಿಚೀನಾದ ನಂತರ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಭಾರತ. ಜನಸಂಖ್ಯೆ ನಿಯಂತ್ರಣಕ್ಕೆ ಭಾರತ ದೇಶ ಅಗತ್ಯ ಕ್ರಮ ಕೈಗೊಳ್ಳಬೇಕು. ಮಿತಿ ಮೀರಿದ ಜನಸಂಖ್ಯೆಯಿಂದ ದೇಶದಲ್ಲಿನಿರುದ್ಯೋಗ, ನೈಸರ್ಗಿಕ ಸಂಪತ್ತಿನ ಕೊರತೆ, ಆಹಾರ ಪದಾರ್ಥಗಳ ಅಭಾವ, ಆರ್ಥಿಕತೆಯ ಅಸಮತೋಲನ ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಉಂಟಾಗಿ ದೇಶದ ಪ್ರಗತಿ ಕುಂಠಿತವಾಗುತ್ತಿದೆ. ಈ ನಡುವೆ ಕೆಲವು ಜಾತಿ, ವರ್ಗಗಳಿಗೆ ಸರಕಾರ ವಿಶೇಷ ರಿಯಾಯಿತಿ ನೀಡಿ ದೇಶದಲ್ಲಿಅಸಮಾನತೆ ಮೂಡುವಂತೆ ಮಾಡಿದೆ. ಮೋದಿ ಸರಕಾರವು ಕಲಂ 370ನ್ನು ತೆಗೆದು ದೇಶಕ್ಕೆ ಒಂದೇ ಕಾನೂನು ಜಾರಿ ಮಾಡಿದಂತೆ ದೇಶದಲ್ಲಿಸಮಾನ ನಾಗರಿಕ ಕಾಯ್ದೆಯನ್ನು ಜಾರಿ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಆಂಧ್ರಪ್ರದೇಶದಲ್ಲಿಹಿಂದು ವಿರೋಧಿ ಕಾರ್ಯ ಮಾಡುತ್ತಿರುವ ಜಗನಮೋಹನ ರೆಡ್ಡಿ ಸರಕಾರವನ್ನು ಕಿತ್ತೊಗೆಯಬೇಕು. ಜಗನ್ನಾಥ ದೇವಸ್ಥಾನ, ಪುರಿಯಲ್ಲಿನ ಮಠ ಸೇರಿದಂತೆ ದೇವಸ್ಥಾನಗಳನ್ನು ಅಕ್ರಮ ಎಂದು ಒಡೆಯುವ ಕೃತ್ಯವನ್ನು ಶೀಘ್ರ ನಿಲ್ಲಿಸಬೇಕು. ಪುರಾತನ ದೇವಸ್ಥಾನಗಳನ್ನು ಕೆಡವಿದ ಓರಿಸ್ಸಾ ಸರಕಾರ ಪುನರ್‌ ನಿರ್ಮಿಸಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಹಿಂದು ಜನಜಾಗೃತಿ ಸಮಿತಿಯ ಪ್ರಮುಖರಾದ ಸತೀಶ ಶೇಟ್‌, ಅರುಣ ನಾಯ್ಕ, ರಾಘವೇಂದ್ರ ಶೇಟ್‌, ಗೀತಾ ಶಾನಭಾಗ, ಸಹನಾ ಭಂಡಾರಿ, ಶ್ರೀಪಾದ ಶೇಟ್‌, ಚೈತನ್ಯ, ಸಂದೀಪ ಭಂಡಾರಿ, ಮಂಜುನಾಥ ಮಡಿವಾಳ, ವಿಠ್ಠಲ ಗುನಗಾ, ಮಂಜುನಾಥ ಗೌಡ ಇತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ