ಆ್ಯಪ್ನಗರ

ವಾಲ್ಮೀಕಿ ಕಾವ್ಯ ಪರಂಪರೆ ಹರಿಕಾರ

ಸಿದ್ದಾಪುರ : ಮಹರ್ಷಿ ವಾಲ್ಮೀಕಿ ಕಾವ್ಯ ಪರಂಪರೆಯ ಹರಿಕಾರ, ರಾಮಾಯಣ ಮಹಾಕಾವ್ಯವನ್ನು ರಚಿಸಿರುವ ಜಗತ್ತಿನ ಮೊಟ್ಟ ಮೊದಲ ಆದಿಕವಿಯಾಗಿದ್ದಾರೆ. ವಾಲ್ಮೀಕಿ ರಾಮಾಯಣದಂತಹ ಮೇರುಕೃತಿಯನ್ನು ರಚಿಸಿರುವ ಉತ್ತಮ ವಿದ್ಯಾವಂತ ಎಂದು ರಾಷ್ಟ್ರೀಯ ಹಬ್ಬಗಳ ಅಧ್ಯಕ್ಷೆ, ತಹಸೀಲ್ದಾರ ಗೀತಾ ಸಿ.ಜಿ. ಬಣ್ಣಿಸಿದರು.

Vijaya Karnataka 14 Oct 2019, 5:00 am
ಸಿದ್ದಾಪುರ : ಮಹರ್ಷಿ ವಾಲ್ಮೀಕಿ ಕಾವ್ಯ ಪರಂಪರೆಯ ಹರಿಕಾರ, ರಾಮಾಯಣ ಮಹಾಕಾವ್ಯವನ್ನು ರಚಿಸಿರುವ ಜಗತ್ತಿನ ಮೊಟ್ಟ ಮೊದಲ ಆದಿಕವಿಯಾಗಿದ್ದಾರೆ. ವಾಲ್ಮೀಕಿ ರಾಮಾಯಣದಂತಹ ಮೇರುಕೃತಿಯನ್ನು ರಚಿಸಿರುವ ಉತ್ತಮ ವಿದ್ಯಾವಂತ ಎಂದು ರಾಷ್ಟ್ರೀಯ ಹಬ್ಬಗಳ ಅಧ್ಯಕ್ಷೆ, ತಹಸೀಲ್ದಾರ ಗೀತಾ ಸಿ.ಜಿ. ಬಣ್ಣಿಸಿದರು.
Vijaya Karnataka Web 13SDPR-1_24


ಅವರು ಪಟ್ಟಣದ ತಾಲೂಕ ಪಂಚಾಯಿತಿ ಸಭಾಭವನದಲ್ಲಿಭಾನುವಾರ ಸ್ಥಳೀಯ ಆಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಇನ್ನಿತರ ಇಲಾಖೆಗಳ ಸಹಯೋಗದೊಂದಿಗೆ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಾಲ್ಮೀಕಿ ಸಮುದಾಯವು ಶೈಕ್ಷಣಿಕವಾಗಿ ಮುಂದುವರಿಯಬೇಕಾಗಿದೆ. ವಾಲ್ಮೀಕಿ ಆದರ್ಶವು ನಮಗೆ ದಾರಿದೀಪವಾಗಿದೆ. ಇದರಿಂದ ಸಮುದಾಯದ ಸುಧಾರಣೆಯೂ ಆಗುತ್ತದೆ. ಈ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸುವುದು ಸಮುದಾಯದ ಉಳಿದ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿದಂತೆ ಆಗುತ್ತದೆ ಎಂದು ಹೇಳಿದರು.

ವಾಲ್ಮೀಕಿಯ ಕುರಿತು, ಜಯಂತಿಯ ಮಹತ್ವದ ಕುರಿತು ಗ್ರಾಮಲೆಕ್ಕಾಧಿಕಾರಿ ಹರೀಶ ನಾಯ್ಕ ಉಪನ್ಯಾಸ ನೀಡಿದರು. ತಾ.ಪಂ. ಮುಖ್ಯಾಧಿಕಾರಿ ಪ್ರಕಾಶರಾವ್‌ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ನರ್ಹೋನಾ, ದಲಿತ ಸಂಘರ್ಷ ಸಮಿತಿಯ ಜಿಲ್ಲಾಸಂಚಾಲಕ ಶಿವಾನಂದ ಕಾನಗೋಡು, ಪ.ಪಂ. ಸದಸ್ಯ ವೆಂಕೋಬಾ ಉಪಸ್ಥಿತರಿದ್ದರು.

ಕವಿತಾ ನಾಯ್ಕ ನಿರೂಪಿಸಿದರು. ಇದೇ ವೇಳೆ ಐಎಎಸ್‌ ಪರೀಕ್ಷೆ ಎದುರಿಸುತ್ತಿರುವ, ಜಿಲ್ಲಾಮಟ್ಟದ ಕ್ರೀಡಾಪಟುವೂ ಆಗಿರುವ ಮಂಜುನಾಥ ಸಿ. ಇವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ