ಆ್ಯಪ್ನಗರ

ವರ್ಧಂತಿ ಉತ್ಸವ: ಸ್ವರ್ಣವಲ್ಲೀ ಶ್ರೀಗಳಿಂದ ರಕ್ತದಾನ

ಶಿರಸಿ : ವರ್ಧಂತಿ ಉತ್ಸವದ ಹಿನ್ನೆಲೆಯಲ್ಲಿ ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮಂಗಳವಾರ ರಕ್ತದಾನ ಮಾಡಿದರು.

Vijaya Karnataka 12 Jun 2019, 5:00 am
ಶಿರಸಿ : ವರ್ಧಂತಿ ಉತ್ಸವದ ಹಿನ್ನೆಲೆಯಲ್ಲಿ ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮಂಗಳವಾರ ರಕ್ತದಾನ ಮಾಡಿದರು.
Vijaya Karnataka Web SRS-11SRS10B


ಹಸಿರು ಸ್ವಾಮೀಜಿ ಎಂದೇ ಹೆಸರಾದ ಸ್ವರ್ಣವಲ್ಲೀ ಸ್ವಾಮೀಜಿಯವರ ವರ್ಧಂತಿ ಉತ್ಸವ ಸಂದರ್ಭದಲ್ಲಿ ಸ್ವರ್ಣವಲ್ಲೀ ಸಂಸ್ಥಾನದಲ್ಲಿ ಆರೋಗ್ಯ ಉಚಿತ ತಪಾಸಣೆ, ಔಷಧ ವಿತರಣೆ ಜೊತೆಗೆ ರಕ್ತದಾನ ಶಿಬಿರ ಕೂಡ ಏರ್ಪಡಿಸಲಾಗಿತ್ತು. ಪೂಜೆ ಕೈಂಕರ್ಯ ಮುಗಿಸಿದ ಸ್ವಾಮೀಜಿಗಳು ಸ್ವತಃ ರಕ್ತದಾನವನ್ನೂ ಮಾಡಿ ಸಮಾಜಕ್ಕೆ ಮೇಲ್ಪಂಕ್ತಿ ಹಾಕಿದರು. ಹಾಗೇ ಮಠದ ಶಿಷ್ಯರೂ ರಕ್ತದಾನ ಮಾಡಿ ಸ್ವಾಮೀಜಿಗಳ ನಡೆಯನ್ನು ಹಿಂಬಾಲಿಸಿದರು.

ವರ್ಧಂತಿ ಉತ್ಸವ ನಿಮಿತ್ತ ಮಂಗಳವಾರ ಮುಂಜಾನೆ ಸಹಸ್ರಾವರ್ತನ ಅಥರ್ವಶೀರ್ಷ ಪಾರಾಯಣ ಹಾಗೂ ಹವನ, ನಾಲ್ಕು ತೆಂಗಿನ ಕಾಯಿ ಗಣವಹನ, ಶ್ರೀಸೂಕ್ತ ಪುರುಷ ಸೂಕ್ತ ಪಾರಾಯಣ ಮತ್ತು ಹವನ, ಮಹಾಮೃತ್ಯುಂಜಯ ಜಪ, ಹವನ, ಗ್ರಹ ಶಾಂತಿ, ಆಯುಷ್ಯಚರು ಶಾಂತಿಗಳು ನಡೆದವು.

ಗ್ರಾಮಾಭ್ಯುದಯ, ಸ್ವರ್ಣವಲ್ಲೀ ಮಹಾ ಸಂಸ್ಥಾನ, ಟಿಎಸ್‌ಎಸ್‌ ಆಸ್ಪತ್ರೆ, ವಿವಿಧ ಸೀಮಾ ಪರಿಷತ್ತುಗಳು, ತಾಲೂಕು ಆರೋಗ್ಯ ಇಲಾಖೆ, ಸ್ಥಳೀಯ ಸೊಸೈಟಿಗಳು, ಕೃಷಿ ಪ್ರತಿಷ್ಠಾನ, ಜಾಗೃತ ವೇದಿಕೆ, ಶ್ರೀದೇವಿ ಶಿಕ್ಷ ಣ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ಸಂಯೋಜಿಸಲಾಗಿತ್ತು. ಆರೋಗ್ಯ ತಪಾಸಣೆಯಲ್ಲಿ ಡಾ. ಅರುಣ ಶೆಟ್ಟಿ, ಡಾ. ಜ್ಞಾನಪ್ರಕಾಶ ಬಿ.ಕಾರಂತ, ಡಾ. ಪಿ.ಎಸ್‌.ಹೆಗಡೆ, ಡಾ. ಶುಭಮಂಗಳಾ ಹೆಗಡೆ ಮುಂತಾದವರು ಕಾರ್ಯನಿರ್ವಹಿಸಿದರು.

ಮಠದ ಕಾರ್ಯಾಧ್ಯಕ್ಷ ವಿ.ಎನ್‌.ಹೆಗಡೆ ಬೊಮ್ಮನಳ್ಳಿ, ಎಂ.ಆರ್‌.ಹೆಗಡೆ ಮತ್ತಿಹಳ್ಳಿ, ಗ್ರಾಮಾಭ್ಯುದಯ ಅಧ್ಯಕ್ಷ ಶಿವಾನಂದ ದೀಕ್ಷಿತ, ಕಾರ್ಯದರ್ಶಿ ಸಂತೋಷ ಭಟ್ಟ ಕೋಡಿಗಾರ, ಎಂ.ಕೆ.ಹೆಗಡೆ ಗೋಳಿಕೊಪ್ಪ ಪಾಲ್ಗೊಂಡಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ