ಆ್ಯಪ್ನಗರ

ಭೀಕರ ಮಳೆಗೆ ಸೇತುವೆ ಕುಸಿತ: ಅಂತ್ಯ ಸಂಸ್ಕಾರಕ್ಕೆ ನದಿಯಲ್ಲೆ ಶವ ಸಾಗಿಸಿದ ಗ್ರಾಮಸ್ಥರು

ಭೀಕರ ಮಳೆಯಿಂದ ಸೇತುವೆ ಕುಸಿದ ಹಿನ್ನೆಲೆಯಲ್ಲಿ ತುಂಬಿ ಹರಿಯುತ್ತಿರುವ ನದಿಯಲ್ಲಿ ಅಂತ್ಯ ಸಂಸ್ಕಾರಕ್ಕೆ ಶವ ತೆಗೆದುಕೊಂಡು ಹೋದ ಘಟನೆ ಅಂಕೋಲಾ ತಾಲೂಕಿನ ಖೇಣಿ ಗ್ರಾಮದಲ್ಲಿ ನಡೆದಿದೆ.

Vijaya Karnataka Web 12 Jul 2018, 3:00 pm
ಅಂಕೋಲಾ: ಭೀಕರ ಮಳೆಯಿಂದ ಸೇತುವೆ ಕುಸಿದ ಹಿನ್ನೆಲೆಯಲ್ಲಿ ತುಂಬಿ ಹರಿಯುತ್ತಿರುವ ನದಿಯಲ್ಲಿ ಅಂತ್ಯ ಸಂಸ್ಕಾರಕ್ಕೆ ಶವ ತೆಗೆದುಕೊಂಡು ಹೋದ ಘಟನೆ ಅಂಕೋಲಾ ತಾಲೂಕಿನ ಖೇಣಿ ಗ್ರಾಮದಲ್ಲಿ ನಡೆದಿದೆ.
Vijaya Karnataka Web dead


ಖೇಣಿ ಗ್ರಾಮದ ಸುಶೀಲಾ(80) ಎಂಬವರು ಗುರುವಾರ ಬೆಳಗ್ಗೆ ಮೃತ ಪಟ್ಟಿದ್ದರು. ಭಾರಿ ಮಳೆಯಿಂದಾಗಿ ರುದ್ರಭೂಮಿಗೆ ಹೋಗುವ ಮಾರ್ಗದಲ್ಲಿ ಕಟ್ಟಲಾಗಿದ್ದ ಸೇತುವೆ ಕುಸಿದು ಬಿದ್ದ ಪರಿಣಾಮ ಶವವನ್ನು ತುಂಬಿ ಹರಿಯುತ್ತಿರುವ ನದಿಯಲ್ಲೇ ಸಾಗಿಸಬೇಕಾಯಿತು.

ಈ ಸೇತುವೆಯನ್ನು ಕೇವಲ ಒಂದು ವರ್ಷದ ಹಿಂದಷ್ಟೇ ಕಟ್ಟಲಾಗಿತ್ತು. ಆದರೆ, ಈ ವರ್ಷದ ವರುಣನ ಆರ್ಭಟಕ್ಕೆ ಸೇತುವೆ ನೆಲಕಚ್ಚಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ