ಆ್ಯಪ್ನಗರ

ಇಂದು ಗಾಯನ ವಾದನ

ಶಿರಸಿ: ನಿನಾದ ಸಂಗೀತ ಸಭಾವು ಜು.21ರಂದು ಗುರುಪೂರ್ಣಿಮೆ ಸಂಗೀತ ಕಾರ್ಯಕ್ರಮವನ್ನು ನಗರದ ಸಾಮ್ರಾಟ್‌ ವಿನಾಯಕ ಹಾಲ್‌ನಲ್ಲಿ ಏರ್ಪಡಿಸಿದೆ. ಬೆಳಗ್ಗೆ 10ಕ್ಕೆ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಜೆ 4ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಹೆಸರಾಂತ ಸಂಗೀತ ಕಲಾವಿದ ಪೂರ್ಣಿಮಾ ಭಟ್ಟ ಕುಲಕರ್ಣಿ ಅವರನ್ನು ಸನ್ಮಾನಿಸಲಾಗುತ್ತಿದೆ.

Vijaya Karnataka 21 Jul 2019, 5:00 am
ಶಿರಸಿ: ನಿನಾದ ಸಂಗೀತ ಸಭಾವು ಜು.21ರಂದು ಗುರುಪೂರ್ಣಿಮೆ ಸಂಗೀತ ಕಾರ್ಯಕ್ರಮವನ್ನು ನಗರದ ಸಾಮ್ರಾಟ್‌ ವಿನಾಯಕ ಹಾಲ್‌ನಲ್ಲಿ ಏರ್ಪಡಿಸಿದೆ. ಬೆಳಗ್ಗೆ 10ಕ್ಕೆ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಜೆ 4ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಹೆಸರಾಂತ ಸಂಗೀತ ಕಲಾವಿದ ಪೂರ್ಣಿಮಾ ಭಟ್ಟ ಕುಲಕರ್ಣಿ ಅವರನ್ನು ಸನ್ಮಾನಿಸಲಾಗುತ್ತಿದೆ.
Vijaya Karnataka Web vocalist today
ಇಂದು ಗಾಯನ ವಾದನ

ಹಿರಿಯ ಸಂಗೀತ ಕಲಾವಿದ ಪಂಡಿತ ಎಂ.ಪಿ.ಹೆಗಡೆ ಪಡಿಗೆರೆ ಅಧ್ಯಕ್ಷ ತೆ ವಹಿಸುವರು. ಸಾಮಾಜಿಕ ಕಾರ್ಯಕರ್ತ ವೆಂಕಟೇಶ ಹೆಗಡೆ ಹೊಸಬಾಳೆ, ಡಿಐಜಿ ಆರ್‌.ದಿಲೀಪ್‌ ಭಾಗವಹಿಸುವರು. ನಂತರ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ಗಾಯಕರಾದ ಪೂರ್ಣಿಮಾ ಭಟ್ಟ ಕುಲಕರ್ಣಿ, ಬಕುಲಾ ಹೆಗಡೆ ಗಾಯನ ಸಾದರ ಪಡಿಸುವರು. ಗೋಪಾಲಕೃಷ್ಣ ಹೆಗಡೆ ಕಲಬಾಗ, ಗಜಾನನ ಹೆಗಡೆ ಗಿಳಿಗುಂಡಿ ತಬಲಾ ಸಾಥ್‌ ನೀಡುವರು. ಭರತ ಹೆಗಡೆ ಹೆಬ್ಬಲಸು ಸಂವಾದಿನಿ ಸಾಥ್‌ ನೀಡುವರು. ಇದೇ ಸಂದರ್ಭದಲ್ಲಿ ಐಪಿಎಸ್‌ ಅಧಿಕಾರಿ ಆರ್‌.ದಿಲೀಪ ಮೃದಂಗ ಹಾಗೂ ಲಕ್ಷ್ಮೀಶರಾವ್‌ ಕಲ್ಗುಂಡಿಕೊಪ್ಪ ಅವರಿಂದ ತಬಲಾ ಜುಗಲಬಂದಿ ಆಯೋಜಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ