ಆ್ಯಪ್ನಗರ

ಮತದಾರರ ಜಾಗೃತಿ ಜಾಥಾ

ಕಾರವಾರ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಹಾಗೂ ಜಿಲ್ಲಾ ಮಟ್ಟದ ಸ್ವೀಪ್‌ ವತಿಯಿಂದ ಸೋಮವಾರ ನಗರದಲ್ಲಿ ಮತದಾರರ ಬೃಹತ್‌ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

Vijaya Karnataka 26 Feb 2019, 5:00 am
ಕಾರವಾರ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಹಾಗೂ ಜಿಲ್ಲಾ ಮಟ್ಟದ ಸ್ವೀಪ್‌ ವತಿಯಿಂದ ಸೋಮವಾರ ನಗರದಲ್ಲಿ ಮತದಾರರ ಬೃಹತ್‌ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
Vijaya Karnataka Web KWR-25GAJA3-
ಕಾರವಾರದ ಪ್ರಮುಖ ಬೀದಿಗಳಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್‌ ಸಾರ್ವಜನಿಕರಿಗೆ ಮತದಾನ ಜಾಗೃತಿಯ ಕರಪತ್ರ ಹಂಚಿ ಗಮನ ಸೆಳೆದರು.


ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಿಂದ ನಗರದ ಮುಖ್ಯ ರಸ್ತೆಗಳ ಮೂಲಕ ಕಡಲತೀರದ ಮೇಲಿನ ಮಯೂರವರ್ಮ ವೇದಿಕೆ ತನಕ ಜಾಗೃತಿ ಜಾಥಾವು ಸಾಗಿತು. ಜಾಥಾದಲ್ಲಿ ಸಾಗುವಾಗ ಮುಖ್ಯ ರಸ್ತೆಯಲ್ಲಿ ಸಂಚರಿಸುವ ವಾಹನ ಚಾಲಕರ, ಹೂ ಮಾರುವವರ, ರಸ್ತೆ ಬದಿಯ ವ್ಯಾಪಾರಿಗಳ ಬಳಿ ಹೋಗಿ ಸೌಜನ್ಯದಿಂದ ಮಾತನಾಡಿಸಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿದ ನೂತನ ಜಿಲ್ಲಾಧಿಕಾರಿ ಡಾ.ಕೆ. ಹರೀಶಕುಮಾರ್‌ ಅವರು ''ಏನ್‌ ನಿಮ್ಮ ಹೆಸರು.. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ.. ಕಳೆದ ಚುನಾವಣೇಲಿ ವೋಟ್‌ ಹಾಕಿದ್ರಾ.. ಈ ಬಾರಿಯ ಚುನಾವಣೆಯಲ್ಲೂ ತಪ್ಪದೇ ವೋಟ್‌ ಮಾಡ್ಬೇಕು..ಆಯ್ತಾ..'' ಎಂದು ಹೇಳುತ್ತಾ ಕರಪತ್ರ ಹಂಚಿ ಗಮನ ಸೆಳೆದರು. ಕಾರವಾರ ನಗರದ ವಿವಿಧ ಮುಖ್ಯ ರಸ್ತೆಗಳಲ್ಲಿ ತುಂಬಾ ಸರಳವಾಗಿ ಸಂಚರಿಸಿ ಬೃಹತ್‌ ಮತದಾರರ ಜಾಗೃತಿ ಜಾಥಾಕ್ಕೆ ಮೆರಗು ತಂದರು.ಅವರಿಗೆ ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಂ.ರೋಷನ್‌ ಕೂಡ ಜೊತೆಯಾದರು.

ನಗರದ ಉರಿ ಬಿಸಿಲಿನಲ್ಲೂ ವಿವಿಧ ರಸ್ತೆಗಳಲ್ಲಿ ಸಾಗಿದ ಜಾಥಾದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ಕಾಲ್ನಡಿಗೆಯಲ್ಲಿ ಬಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಪ್ರಮಾಣದ ಜಾಥಾವನ್ನು ಕ್ರಮಿಸಿ ಮಯೂರ ವರ್ಮ ವೇದಿಕೆಯಲ್ಲಿ ಸಮಾವೇಶಗೊಂಡು ನಂತರ ಬೃಹತ್‌ ಸಹಿ ಸಂಗ್ರಹ ಅಭಿಯಾನಕ್ಕೆ ಜಾಲನೆ ನೀಡಿದರು.

ಇದರಿಂದ ಉತ್ತರಕನ್ನಡ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಸೋಮವಾರ ಒಂದು ರೀತಿಯ ಚುನಾವಣೆ ಪೂರ್ವ ಹಬ್ಬದಂತೆ,ವಾತಾವರಣ ಇತ್ತು. ಮತದಾರರಲ್ಲಿ ಮತದಾನದ ಜಾಗೃತಿ ಮೂಡಿಸುವ ಬೃಹತ್‌ಜಾಥಾ, ಬೃಹತ್‌ ಸಹಿ ಸಂಗ್ರಹ ಅಭಿಯಾನ, ಪ್ರತಿಜ್ಞಾವಿಧಿ ಸ್ವೀಕಾರ ಒಂದೆಡೆಯಾದರೆ,ಇದಕ್ಕೂ ಮುನ್ನಾ ಜಿಲ್ಲಾ ನ್ಯಾಯಾಲಯದಲ್ಲಿ ಇವಿಎಂ, ವಿವಿಪ್ಯಾಟ್‌ ಕುರಿತು ಪ್ರಾತ್ಯಕ್ಷಿಕೆ ನಡೆಯಿತು.

ಬೃಹತ್‌ ಜಾಥಾ ಕಾರ್ಯಕ್ರಮದಲ್ಲಿ ವಿಕಲಚೇತನರು ತಮ್ಮ ತ್ರಿಚಕ್ರ ವಾಹನದಲ್ಲಿ ಭಾಗವಹಿಸಿ ಗಮನ ಸೆಳೆದರೆ, ಅಂಗನವಾಡಿಕಾರ್ಯಕರ್ತರು, ಆಶಾ ಕಾರ್ಯಕರ್ತರು, ಅಧಿಕಾರಿಗಳು, ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು, ಹೀಗೇ ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ