ಆ್ಯಪ್ನಗರ

ಮತಗಟ್ಟೆಯಲ್ಲಿ ಮತದಾನದ ಗೌಪ್ಯತೆ ಅವಶ್ಯ

Voting privacy required in the poll

Vijaya Karnataka 20 Apr 2019, 5:00 am
ಕಾರವಾರ : ಮತಗಟ್ಟೆಯಲ್ಲಿ ಮತದಾನದ ಗೌಪ್ಯತೆ ವ್ಯವಸ್ಥೆ ಕಾಯ್ದುಕೊಳ್ಳದಿದ್ದರೆ ತಕ್ಷ ಣ ವರದಿ ಮಾಡುವಂತೆ ಸೂಕ್ಷ ್ಮ ಚುನಾವಣಾ ವೀಕ್ಷ ಕರಿಗೆ ಚುನಾವಣಾ ವೀಕ್ಷ ಕ ನವೀನ್‌ ಎಸ್‌.ಎಲ್‌. ಸೂಚಿಸಿದ್ದಾರೆ.
Vijaya Karnataka Web voting privacy required in the poll
ಮತಗಟ್ಟೆಯಲ್ಲಿ ಮತದಾನದ ಗೌಪ್ಯತೆ ಅವಶ್ಯ


ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಲೋಕಸಭೆ ಕ್ಷೇತ್ರಕ್ಕೆ ಸೂಕ್ಷ ್ಮ ಚುನಾವಣಾ ವೀಕ್ಷ ಕರಾಗಿ (ಮೈಕ್ರೋ ಅಬ್ಸರ್‌ವರ್‌) ನೇಮಿಸಿರುವ ಬ್ಯಾಂಕ್‌, ಅಂಚೆ ಕಚೇರಿ ಹಾಗೂ ಕೇಂದ್ರ ಸರಕಾರ ಅಧೀನ ಸಂಸ್ಥೆಗಳ ಸುಮಾರು 200 ಸಿಬ್ಬಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ತರಬೇತಿಯಲ್ಲಿ ಅವರು ಮಾತನಾಡಿದರು.

ಮತಗಟ್ಟೆಯಲ್ಲಿ ಮತದಾನದ ಗೌಪ್ಯತೆ ಸೇರಿದಂತೆ ವಿವಿಧ ಕ್ರಮಗಳನ್ನು ನಿಯಮಾನುಸಾರ ಕೈಗೊಳ್ಳಬೇಕಿದೆ. ಇವುಗಳಲ್ಲಿ ಲೋಪಗಳು ಕಂಡು ಬಂದರೆ ತಕ್ಷ ಣ ತಮಗೆ ವರದಿ ಮಾಡಬೇಕೆಂದು ಅವರು ಸೂಚಿಸಿದರು.

ಮೈಕ್ರೋ ವೀಕ್ಷ ಕರು ಮತದಾನ ಸರಿಯಾಗಿ ಆಗುತ್ತಿದೆಯೇ, ವೆಬ್‌ಕ್ಯಾಸ್ಟಿಂಗ್‌ ಮಾಡಿದ್ದಲ್ಲಿ ಅದು ಸರಿಯಾಗಿ ಆಗಿದೆಯೇ, ಯಾವುದಾದರೂ ಲೋಪ ನಡೆಯುತ್ತಿದೆಯೇ, ಮತಗಟ್ಟೆ ಅಧಿಕಾರಿಗಳು ಯಾವುದಾದರೂ ರಾಜಕೀಯ ಪಕ್ಷ ಗಳ ಪ್ರಭಾವಕ್ಕೆ ಒಳಗಾಗಿದ್ದಾರೆಯೇ ಎಂಬಿತ್ಯಾದಿ ವಿಷಯಗಳ ಮೇಲೆ ನಿಗಾ ವಹಿಸಿ ತಕ್ಷ ಣ ವರದಿ ಮಾಡಬೇಕು ಎಂದರು.

ಏ.23ರಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಚುನಾವಣೆ ನಡೆಯುತ್ತಿದ್ದು, ಏ.22ರಂದು ಮೈಕ್ರೋ ವೀಕ್ಷ ಕರಿಗೆ ಮತಗಟ್ಟೆಗಳಿಗೆ ನಿಯೋಜನೆ ಮಾಡಲಾಗುವುದು. ಅಂದು ನಿಯೋಜನೆಗೊಂಡ ಮತಗಟ್ಟೆಗೆ ತೆರಳಿ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದರು.

ಮೈಕ್ರೋ ವೀಕ್ಷ ಕರಿಗೆ ತಾವು ನಿಯೋಜನೆಗೊಂಡ ಮತಗಟ್ಟೆಯಿಂದಲೇ ಮತ ಚಲಾಯಿಸಲು ಚುನಾವಣಾ ಕರ್ತವ್ಯ ಪ್ರಮಾಣಪತ್ರ (ಇಡಿಸಿ) ನೀಡಲಾಗುವುದು. ಅಲ್ಲದೇ ಬೇರೆ ಮತ ಕ್ಷೇತ್ರದ ಸಿಬ್ಬಂದಿ ಇದ್ದರೆ ಅವರಿಗೂ ಅಂಚೆ ಮತದಾನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಹರೀಶ್‌ಕುಮಾರ್‌ ಹಾಗೂ ಜಿಪಂ ಸಿಇಒ ಎಂ.ರೋಷನ್‌, ಅಪರ ಜಿಲ್ಲಾಧಿಕಾರಿ ನಾಗರಾಜ್‌ ಸಿಂಗ್ರೇರ್‌, ನಗರಸಭೆ ಅಯುಕ್ತ ಎಸ್‌.ಯೋಗೇಶ್ವರ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ