ಆ್ಯಪ್ನಗರ

ಸಾಮಾಜಿಕ ಕಾರ್ಯಕ್ಕಾಗಿ ನಿಧಿ ಸಂಗ್ರಹಿಸಲು ವಾಕಥಾನ್; ಮಕ್ಕಳಿಂದ ಹಿಡಿದು ವೃದ್ಧರವರೆಗೂ ಉತ್ಸಾಹದಿಂದ ಭಾಗಿ

​​5 ಕಿ.ಮೀ. ವಾಕಥಾನ್ ಕೂಡ ಮಾಲಾದೇವಿ ಮೈದಾನದಿಂದ ಆರಂಭಗೊಂಡು ಕಾಜುಬಾಗ್, ಕೋಡಿಬಾಗ, ಮರಳಿ ಕಾಜುಬಾಗದಿಂದ ವಾಪಸಾಗಿ ಮಾಲಾದೇವಿ ಮೈದಾನದಲ್ಲಿ‌ ಕೊನೆಗೊಂಡಿತು.

Lipi 16 May 2022, 5:16 pm
ಕಾರವಾರ: ಸಾಮಾಜಿಕ ಸೇವೆಗೆ ನಿಧಿ ಸಂಗ್ರಹದ ಉದ್ದೇಶದಿಂದ ರೋಟರಿ ಕ್ಲಬ್ ಕಾರವಾರ ಪಶ್ಚಿಮ ವತಿಯಿಂದ ಕಾರವಾರದಲ್ಲಿ ಆಯೋಜಿಸಿದ್ದ ಎರಡನೇ ವರ್ಷದ 'ವಾಕಥಾನ್' ಯಶಸ್ವಿಯಾಗಿ ಜರುಗಿತು.
Vijaya Karnataka Web walkathon for social cause in karwar kids and many people attend
ಸಾಮಾಜಿಕ ಕಾರ್ಯಕ್ಕಾಗಿ ನಿಧಿ ಸಂಗ್ರಹಿಸಲು ವಾಕಥಾನ್; ಮಕ್ಕಳಿಂದ ಹಿಡಿದು ವೃದ್ಧರವರೆಗೂ ಉತ್ಸಾಹದಿಂದ ಭಾಗಿ


15 ವರ್ಷದೊಳಗಿನ ಮತ್ತು 51 ವರ್ಷ ಮೇಲ್ಪಟ್ಟವರಿಗೆ 5 ಕಿ.ಮೀ. ನಡಿಗೆ ಮತ್ತು 16 ರಿಂದ 30 ವರ್ಷ ಹಾಗೂ 31 ರಿಂದ 10 ವರ್ಷದವರಿಗೆ 10 ಕಿ.ಮೀ. ವಾಕಥಾನ್ ಹಮ್ಮಿಕೊಳ್ಳಲಾಗಿತ್ತು. ಮಕ್ಕಳಿಂದ ಹಿಡಿದು ವೃದ್ಧರವರೆಗೆ 475 ಜನರು ಈ ವಾಕಥಾನ್ ನಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ಬೆಳಗ್ಗೆ 6 ಗಂಟೆಗೆ ಕಾರವಾರದ ಮಾಲಾದೇವಿ ಮೈದಾನದಲ್ಲಿ ರೋಟರಿಯ ಅಧ್ಯಕ್ಷೆ ಪ್ರಜ್ಞಾ ಪಾಟೀಲ್ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.

ಉತ್ತರ ಕನ್ನಡ ಜಿಲ್ಲೆಯ 120ಕ್ಕೂ ಅಧಿಕ ಸರ್ಕಾರಿ ಶಾಲೆಗಳಲ್ಲಿ ಕಾಯಂ ಶಿಕ್ಷಕರ ಕೊರತೆ! ಅತಿಥಿ ಶಿಕ್ಷಕರೇ ಆಧಾರ

ಡಿವೈಎಸ್‌ಪಿ ವ್ಯಾಲೆಂಟೈನ್ ಡಿಸೋಜಾ ಹಾಗೂ ನೆಹರೂ ಯುವ ಕೇಂದ್ರದ ಯಶವಂತ ಯಾದವ್ ಈ ವೇಳೆ ಇದ್ದರು. 10 ಕಿ.ಮೀ. ವಾಕಥಾನ್ ಮಾಲಾದೇವಿ ಮೈದಾನದಿಂದ ಆರಂಭಗೊಂಡು ಕಾಜುಬಾಗ್, ಕೋಡಿಬಾಗ, ನಂದನಗದ್ದಾ, ಬಾಂಡಿಶಿಟ್ಟಾ, ಹಬ್ಬುವಾಡ, ಸವಿತಾ ಸರ್ಕಲ್ ಮೂಲಕ ಪುನಃ ಮಾಲಾದೇವಿ ಮೈದಾನದಲ್ಲಿ ಸಮಾಪ್ತಿಗೊಂಡಿತು.

5 ಕಿ.ಮೀ. ವಾಕಥಾನ್ ಕೂಡ ಮಾಲಾದೇವಿ ಮೈದಾನದಿಂದ ಆರಂಭಗೊಂಡು ಕಾಜುಬಾಗ್, ಕೋಡಿಬಾಗ, ಮರಳಿ ಕಾಜುಬಾಗದಿಂದ ವಾಪಸಾಗಿ ಮಾಲಾದೇವಿ ಮೈದಾನದಲ್ಲಿ‌ ಕೊನೆಗೊಂಡಿತು.

ಅಂದು ರಿಯಾಯಿತಿ ದರದಲ್ಲಿ ಎಲ್ಇಡಿ ಬಲ್ಬ್ ನೀಡಿ, ಈಗ ಗ್ರಾಹಕರಿಂದಲೇ ಹಣ ವಸೂಲಿ ಮಾಡುತ್ತಿರುವ ಸರಕಾರ

15 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ಝಿಯಾನ್ ಗೊಹಂಡಿ, ವೃಷಭೇಂದ್ರ ಎಸ್.ಬಾಗಲಕೋಟ, ಬಾಲಕಿಯರ ವಿಭಾಗದಲ್ಲಿ ವಸುಧಾ ಪಪ್ಪು, ನಾಗಮ್ಮ ಸುರಪುರ, 16 ರಿಂದ 30 ವರ್ಷದವರ ಪುರುಷರ ವಿಭಾಗದಲ್ಲಿ ನಂದೀಶ ಮರರ್ಸಿ, ಆನಂದಪ್ಪ ನಾಯ್ಕ, ಮಹಿಳಾ ವಿಭಾಗದಲ್ಕಿ ಕಾವ್ಯ ಶ್ರೀ ಸುರಪುರ, ಲಕ್ಷ್ಮಿ ಬಿ., 31 ರಿಂದ 50 ವರ್ಷದ ಪುರುಷರ ವಿಭಾಗದಲ್ಲಿ ಪ್ರಭಾಕರ ಗೌಡ, ಪ್ರಶಾಂತ ಆರ್.ನಾಯ್ಕ, ಮಹಿಳೆಯರ ವಿಭಾಗದಲ್ಲಿ ಶ್ಯಾಮಲಾ ಆರ್.ಗೌಡ, ಗೀತಾ ಪೈ, 51 ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಜಗೀರ ಸಿಂಗ್, ದೇವಿದಾಸ ನಾಯ್ಕ, ಮಹಿಳೆಯರ ವಿಭಾಗದಲ್ಲಿ ಶರ್ಲಿ ಟೆಲ್ಲಿಸ್, ಪ್ರಿಯಾ ರಾಣೆ ಹಾಗೂ ಆಕರ್ಷಕ ಬಹುಮಾನಗಳನ್ನ ಶಾರದಾ ಎಂ.ಗೌಡ, ನಾಗಶ್ರೀ ಆರ್.ನಾಯ್ಕ ಪಡೆದುಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ