ಆ್ಯಪ್ನಗರ

ತಾಯಿಯೊಂದಿಗೆ ಬೈಕ್‌ನಲ್ಲಿ ಧರ್ಮಕ್ಷೇತ್ರಗಳ ಸುತ್ತಾಟ

ಶಿರಸಿ : ಇಳಿ ವಯಸ್ಸಿನ ತಾಯಿಗೆ ದೇಶದ ವಿವಿಧ ರಾಜ್ಯಗಳ ಧರ್ಮಕ್ಷೇತ್ರ ತೋರಿಸಬೇಕು ಎಂಬ ಉದ್ದೇಶದೊಂದಿಗೆ ಮೈಸೂರಿನ ವ್ಯಕ್ತಿಯೊಬ್ಬರು ಬೈಕ್‌ನಲ್ಲಿ ತಾಯಿಯನ್ನು ಸುತ್ತಾಡಿಸುತ್ತಿದ್ದಾರೆ. ಶನಿವಾರ ನಗರಕ್ಕೆ ಆಗಮಿಸಿ ಮಾರಿಕಾಂಬಾ ದೇವಸ್ಥಾನದಲ್ಲಿ ದೇವಿಯ ದರ್ಶನ ಪಡೆದರು.

Vijaya Karnataka 7 Oct 2018, 5:00 am
ಶಿರಸಿ : ಇಳಿ ವಯಸ್ಸಿನ ತಾಯಿಗೆ ದೇಶದ ವಿವಿಧ ರಾಜ್ಯಗಳ ಧರ್ಮಕ್ಷೇತ್ರ ತೋರಿಸಬೇಕು ಎಂಬ ಉದ್ದೇಶದೊಂದಿಗೆ ಮೈಸೂರಿನ ವ್ಯಕ್ತಿಯೊಬ್ಬರು ಬೈಕ್‌ನಲ್ಲಿ ತಾಯಿಯನ್ನು ಸುತ್ತಾಡಿಸುತ್ತಿದ್ದಾರೆ. ಶನಿವಾರ ನಗರಕ್ಕೆ ಆಗಮಿಸಿ ಮಾರಿಕಾಂಬಾ ದೇವಸ್ಥಾನದಲ್ಲಿ ದೇವಿಯ ದರ್ಶನ ಪಡೆದರು.
Vijaya Karnataka Web wander the dharmasthala on the bike with the mother
ತಾಯಿಯೊಂದಿಗೆ ಬೈಕ್‌ನಲ್ಲಿ ಧರ್ಮಕ್ಷೇತ್ರಗಳ ಸುತ್ತಾಟ

ಮೈಸೂರಿನ ಡಿ.ಕೃಷ್ಣಕುಮಾರ ಎಂಬವರು ತನ್ನ 70ವರ್ಷದ ತಾಯಿ ಚೂಡಾರತ್ನ ಎಂಬವರೊಂದಿಗೆ ಮಾತೃ ಸೇವಾ ಸಂಕಲ್ಪ ಯಾತ್ರೆ ಕೈಗೊಂಡಿದ್ದಾರೆ. ಈಗಾಗಲೇ ಕೇರಳ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರ, ತೇಲಂಗಾಣ ಸೇರಿದಂತೆ ವಿವಿಧ ರಾಜ್ಯಗಳ ಧರ್ಮಕ್ಷೇತ್ರಗಳಿಗೆ ಭೇಟಿ ನೀಡಿದ್ದು ಸುಮಾರು 26ಸಾವಿರ ಕಿಮೀ ಸಂಚರಿಸಿರುವುದಾಗಿ ಅವರು ತಿಳಿಸಿದರು.

ತಾಯಿಗೆ ಧರ್ಮಕ್ಷೇತ್ರ ನೋಡುವ ಮಹಾದಾಸೆಯಿತ್ತು. ಆದರೆ ಅವಿಭಕ್ತ ಕುಟುಂಬ ಮತ್ತಿತರ ಕಾರಣಾಂತರಗಳಿಂದ ಅದು ಈಡೇರಿರಲಿಲ್ಲ. ಜೀವನಾಂಶ ನೀಡಿ ಬೆಳೆಸಿದ ತಂದೆತಾಯಿಗೆ ಗೌರವ ನೀಡುವುದು ಮಕ್ಕಳ ಕರ್ತವ್ಯ. ಈ ಹಿನ್ನೆಲೆಯಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿ ಕೆಲಸ ಮಾಡಿದ್ದ ತಾನು ಕಳೆದ ಜನೇವರಿಯಿಂದ ತಾಯಿಯೊಂದಿಗೆ ಧರ್ಮಕ್ಷೇತ್ರಗಳ ಓಡಾಟ ಕೈಗೊಂಡಿದ್ದಾಗಿ ಡಿ.ಕೃಷ್ಣಕುಮಾರ ತಿಳಿಸಿದರು.

ಸೋಂದಾ ಸ್ವರ್ಣವಲ್ಲೀ ಮಠಕ್ಕೆ ಭೇಟಿ ನೀಡಿ ನಂತರ ಕರಾವಳಿ ಭಾಗಕ್ಕೆ ತೆರಳಿ ತದನಂತರ ಮೈಸೂರಿಗೆ ತೆರಳುವುದಾಗಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ