ಆ್ಯಪ್ನಗರ

ಕಾರವಾರಕ್ಕೆ ಕಾದಿದೆ ತ್ಯಾಜ್ಯ ಅವಾಂತರ!

ಕೊರೊನಾ ನಿಯಂತ್ರಣ ಹೋರಾಟದ ನಡುವೆ ಜಿಲ್ಲೆಯ ಬಹುತೇಕ ನಗರ, ಪಟ್ಟಣಗಳಲ್ಲಿ ಮಳೆಗಾಲದ ಪೂರ್ವ ಸಿದ್ಧತಾ ಕಾಮಗಾರಿಗಳು ಆಮೆವೇಗದಲ್ಲಿ ನಡೆದಿವೆ.

Vijaya Karnataka 20 May 2020, 3:12 pm
ಕಾರವಾರ : ಕೊರೊನಾ ನಿಯಂತ್ರಣ ಹೋರಾಟದ ನಡುವೆ ಜಿಲ್ಲೆಯ ಬಹುತೇಕ ನಗರ, ಪಟ್ಟಣಗಳಲ್ಲಿ ಮಳೆಗಾಲದ ಪೂರ್ವ ಸಿದ್ಧತಾ ಕಾಮಗಾರಿಗಳು ಆಮೆವೇಗದಲ್ಲಿ ನಡೆದಿವೆ. ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದಿದ್ದರೆ ಬಹುತೇಕ ಪ್ರದೇಶಗಳಲ್ಲಿ ಮಳೆ ನೀರಿನ ಜತೆ ತ್ಯಾಜ್ಯವೂ ನುಗ್ಗಿ ಅವಾಂತರ ಸೃಷ್ಟಿಸುವ ಆತಂಕ ಕಾಡಿದೆ.
Vijaya Karnataka Web ತ್ಯಾಜ್ಯ
ತ್ಯಾಜ್ಯ


ಕರಾವಳಿ ಮತ್ತು ಮಲೆನಾಡು ಒಳಗೊಂಡ ಜಿಲ್ಲೆಯಲ್ಲಿ ವಾರ್ಷಿಕವಾಗಿ ಸರಾಸರಿ 2400 ಮಿಮೀ ಮಳೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಚರಂಡಿ, ಗಟಾರಗಳಲ್ಲಿ ಮಳೆಗಾಲ ಪೂರ್ವದಲ್ಲಿ ಹೂಳು ತೆಗೆದು ಸ್ವಚ್ಛಗೊಳಿಸಿ ಮಳೆ ನೀರು ಸರಾಗವಾಗಿ ಹರಿಯಲು ಅನುವು ಮಾಡಿಕೊಡಬೇಕು. ಆಯಾ ನಗರಸಭೆ ಪಪಂಗಳಲ್ಲಿ ಪ್ರತಿ ವರ್ಷ ಏಪ್ರಿಲ್‌ ಕೊನೇ ವಾರದಲ್ಲೇ ಈ ಕಾಮಗಾರಿ ಶುರುವಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ನಿಯಂತ್ರಣಕ್ಕೆ ವಿಧಿಸಲಾದ ಲಾಕ್‌ ಡೌನ್‌ನಿಂದ ಕಾರ್ಮಿಕರ ಕೊರತೆಯಾಗಿದೆ. ಇದರಿಂದ ಕಾಮಗಾರಿ ಪ್ರಾರಂಭಕ್ಕೆ ವಿಳಂಬವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಮುಗಿದಿದ್ದೆಷ್ಟು ? ಜಿಲ್ಲಾಕೇಂದ್ರ ಕಾರವಾರ ನಗರದಲ್ಲಿ ಸುಮಾರು 45 ಕಿ ಮೀ ಚರಂಡಿಯಿದ್ದು, 160 ಕಿಮೀ ಕಚ್ಚಾ ಗಟಾರವಿದೆ. ಈವರೆಗೆ ಸುಮಾರು 25 ಕಿಮೀ ಚರಂಡಿ ಹೂಳೆತ್ತುವ ಕೆಲಸ ಆಗಿದೆ. ಇನ್ನೂ ಸುಮಾರು 175 ಕಿ.ಮೀ ಹೂಳೆತ್ತುವುದು ಬಾಕಿ ಇದೆ. ಜಿಲ್ಲೆಯ ಎಲ್ಲತಾಲೂಕು ಕೇಂದ್ರಗಳಿಂದ ಸುಮಾರು 425 ಕಿಮೀ ಚರಂಡಿ ಮತ್ತು 900 ಕಿಮೀ. ಕಚ್ಚಾ ಗಟಾರವಿದೆ. ಸರಾಸರಿ ಶೇ 40ರಷ್ಟು ಕಾಮಗಾರಿ ಮುಗಿದಿದೆ.

ಜಿಲ್ಲಾ ಕೇಂದ್ರದಲ್ಲಿ : ಜಿಲ್ಲಾ ಕೇಂದ್ರ ಕಾರವಾರದಲ್ಲಿ ಮೇ 4ರಿಂದ ಕಾಮಗಾರಿ ಆರಂಭಿಸಿದ್ದರೂ ಪೂರ್ಣ ಪ್ರಮಾಣದಲ್ಲಿ ಕಾರ್ಮಿಕರ ಲಭ್ಯತೆ ಇರಲಿಲ್ಲ, ಸೋಮವಾರದಿಂದ 97 ಕಾರ್ಮಿಕರು ಕೆಲಸಕ್ಕೆ ಬರುತ್ತಿದ್ದು ಕಾಮಗಾರಿ ಚುರುಕಾಗಿದೆ. 1-15 ವಾರ್ಡ್‌ ಮತ್ತು 15-31 ನೇ ವಾರ್ಡ್‌ ನ ಎರಡು ವಿಭಾಗಗಳನ್ನಾಗಿ ಮಾಡಿ ಕಾಮಗಾರಿ ನಡೆಸಲಾಗುತ್ತಿದೆ. ಮೇ ಅಂತ್ಯದೊಳಗೆ ಶೇ.80 ರಷ್ಟು ಕಾಮಗಾರಿ ಮುಗಿಯಲಿದ್ದು ಜೂನ್‌ 15ರ ಸುಮಾರಿಗೆ ಸಂಪೂರ್ಣಗೊಳ್ಳಲಿದೆ ಎಂದು ಕಾರವಾರ ನಗರಸಭೆ ಮುಖ್ಯ ಇಂಜಿನಿಯರ್‌ ಆರ್‌. ಪಿ. ನಾಯ್ಕ ವಿಶ್ವಾಸ ವ್ಯಕ್ತಪಡಿಸಿದರು.

ಹೊರ ರಾಜ್ಯದ ಕಾರ್ಮಿಕರಿಲ್ಲ : ಜಿಲ್ಲೆಯಲ್ಲಿ ಪ್ರತಿ ವರ್ಷ ಚರಂಡಿ ಹೂಳೆತ್ತುವ ಕಾಮಗಾರಿಯಲ್ಲಿ ಹೊರ ರಾಜ್ಯದ ಸುಮಾರು 500 ರಷ್ಟು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಸದ್ಯ ಈ ಪೈಕಿ ಬಹುತೇಕರು ತಮ್ಮ ಊರಿಗೆ ವಾಪಸಾಗಿರುವುದರಿಂದ ಕಾರ್ಮಿಕರ ಕೊರತೆ ತೀವ್ರವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ