ಆ್ಯಪ್ನಗರ

ತೊಟ್ಟಿಗಳಲ್ಲಿ ಕಾಡು ಪ್ರಾಣಿಗಳಿಗೆ ನೀರು

ಶಿರಸಿ : ತಾಲೂಕಿನ ಪೂರ್ವಭಾಗದ ಅರೆಬಯಲುಸೀಮೆ ಪ್ರದೇಶ ಕಾಡುಗಳಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು ತೊಟ್ಟಿಗಳಲ್ಲಿ ನೀರು ತುಂಬುವ ಕಾರ್ಯ ಬುಧವಾರ ಆರಂಭಗೊಂಡಿದೆ.

Vijaya Karnataka 16 May 2019, 5:00 am
ಶಿರಸಿ : ತಾಲೂಕಿನ ಪೂರ್ವಭಾಗದ ಅರೆಬಯಲುಸೀಮೆ ಪ್ರದೇಶ ಕಾಡುಗಳಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು ತೊಟ್ಟಿಗಳಲ್ಲಿ ನೀರು ತುಂಬುವ ಕಾರ್ಯ ಬುಧವಾರ ಆರಂಭಗೊಂಡಿದೆ.
Vijaya Karnataka Web water for wild animals in tanks
ತೊಟ್ಟಿಗಳಲ್ಲಿ ಕಾಡು ಪ್ರಾಣಿಗಳಿಗೆ ನೀರು


ತಾಲೂಕಿನ ಬನವಾಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಕನಾಳ, ಕಂಡ್ರಾಜಿ, ಬಿಳೂರು ಗ್ರಾಮದ ಗ್ರಾಮಸ್ಥರು ಹಾಗೂ ಗ್ರಾಮ ಅರಣ್ಯ ಸಮಿತಿಯವರ ಆರ್ಥಿಕ ಸಹಾಯದಿಂದ ವನ್ಯಜೀವಿಗಳ ಬಾಯಾರಿಕೆ ತಣಿಸಲು ನೀರಿನ ತೊಟ್ಟಿಯನ್ನು ಕಾಡಿನ ಮಧ್ಯೆ ಇಡಲಾಗಿದೆ. ಅವುಗಳಿಗೆ ಟ್ಯಾಂಕರ್‌ನಿಂದ ನೀರು ಸರಬರಾಜು ಮಾಡುವ ಕಾರ್ಯ ಕೈಗೊಳ್ಳಲಾಯಿತು.

250ರಿಂದ 300ಲೀಟರ್‌ ನೀರು ಸಂಗ್ರಹಿಸುವ ಸಾಮರ್ಥ್ಯ‌ ಹೊಂದಿರುವ 15ತೊಟ್ಟಿಗಳನ್ನು ಅಳವಡಿಸಲಾಗಿದ್ದು 1.5ಫೀಟ್‌ ಎತ್ತರ ಹಾಗೂ 3.5ಅಗಲದ ತೊಟ್ಟಿಗಳು ಇದಾಗಿವೆ.

ಬೇಸಿಗೆಯ ಅಬ್ಬರಕ್ಕೆ ಹೊಳೆ, ಹಳ್ಳಗಳಲ್ಲಿ ನೀರು ಒಣಗುತ್ತಿದೆ. ಅದರಲ್ಲಂತೂ ಅರೆಬಯಲುಸೀಮೆ ಪ್ರದೇಶದಲ್ಲಂತೂ ಹನಿ ನೀರಿಗೂ ತಡಕಾಡುವ ಸ್ಥಿತಿ. ಹೀಗಿರುವಾಗ ಪ್ರಾಣಿಗಳಿಗೆ ಕುಡಿಯುವ ನೀರಿಗೆ ತತ್ವಾರವಾಗುತ್ತದೆ. ಇದಕ್ಕಾಗಿ ಈ ಸೌಲಭ್ಯ ಕಲ್ಪಿಸಲಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ